ಮೂಲ ಸೌಕರ್ಯವೇ ಮರೀಚಿಕೆ


Team Udayavani, Feb 27, 2023, 12:49 PM IST

tdy-13

ಹೊಳೆನರಸೀಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಹ ಪಟ್ಟಣಕ್ಕೆ ಸಮೀಪದಲ್ಲಿರುವ ತೆವಡಹಳ್ಳಿ ಮೂಲಭೂತ ಸೌರ್ಕರ್ಯಗಳಿಂದ ವಂಚಿತವಾಗಿ ಕುಗ್ರಾಮವಾಗಿ ಬದಲಾಗಿದೆ. ಈ ಗ್ರಾಮದ ಸುತ್ತಮುತ್ತ ಗುಡ್ಡ ಬೆಟ್ಟಗಳು ಸುತ್ತುವರೆದಿದೆ. ಈ ಗ್ರಾಮ ಮಲ್ಲಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಗ್ರಾಮದ ಮೇಲ್ಭಾಗದಲ್ಲಿ ಹೇಮಾವತಿ ಬಲದಂಡೆ ನಾಲೆ ಹಾದು ಹೋಗಿದೆ. ಸುಮಾರು ನೂರೈವತ್ತು ಕುಟುಂಬಗಳು ವಾಸವಾಗಿವೆ.

ಜೀವ ಭಯದಲ್ಲಿ ವಾಸ: ಹಲವಾರು ತಲೆಮಾರುಗಳಿಂದ ಹಿರಿಯರ ನೆಲೆ ನಿಂತು ಬದುಕು ಸಾಗಿಸಿದ ನೆನಪುಗಳ ಬುತ್ತಿ ಮೆಲುಕಿ ಹಾಕುತ್ತಾ ಇಂದಿಗೂ ಗ್ರಾಮದ ಜನರು ಬದುಕಿನ ಬಂಡಿ ಸಾಗಿಸುತ್ತಾ ತಮ್ಮ ಹಿರಿಯರು ನಿರ್ಮಿಸಿದ ಮಣ್ಣಿನ ಗೋಡೆಯ ಮನೆಗಳು ನೆಲ ಕಚ್ಚುವ ಸ್ಥಿತಿ ತಲುಪಿದ್ದು ಅದೇ ಹಳೆಯ ಮನೆಗಳು, ಬೀದಿರು ದಬ್ಬೆಯ ಮೇಲೆನ ಹೊದಿಕೆ, ಹಂಚಿನ ಮನೆಗಳಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ. ಮತ್ತೇ ಕೆಲವು ಮನೆಗಳು ನೆಲಕ್ಕುರುಳಿವೆ.

ಅಭಿವೃದ್ಧಿ ಕಾಣದ ಗ್ರಾಮ: ಇಂತಹ ಸ್ಥಿತಿಯಲ್ಲಿರುವ ಗ್ರಾಮದ ಅಭಿವೃದ್ಧಿ ಆಗದೆ ಈ ಹಿಂದಿನ ತಲೆಮಾರುಗಳು ನಿ ರ್ಮಿಸಿದ ಮನೆಗಳನ್ನು ಬಿಟ್ಟರೆ ಯಾವುದೆ ಅಭಿವೃದ್ಧಿ ಕಂಡಿಲ್ಲ. ಇನ್ನು ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಹದಗೆಟ್ಟ ರಸ್ತೆಗಳು ಗುಂಡಿಮಯವಾಗಿವೆ. ಗ್ರಾಮದಲ್ಲಿ ವಾಸವಾಗಿರುವ ರಸ್ತೆ ಇಕ್ಕೆಲಗ ಳಲ್ಲಿ ಇರಬೇಕಾದ ಚರಂಡಿಗಳು ಕಾಣು ವಂತೆಯೇ ಇಲ್ಲ ಎಂಬಂತ ದುರಂತ ಸ್ಥಿತಿ ಮುಂದುವರೆ ದಿದೆ.

ಅಭಿವೃದ್ಧಿ ವಂಚಿತ ಗ್ರಾಮ: ಈ ಗ್ರಾಮ 1970-71 ರಲ್ಲಿ ಗೊರೂರಿನಲ್ಲಿ ಅಣೆಕಟ್ಟೆ ನಿರ್ಮಾಣವಾದ ಮೊದಲ ಹಂತದಲ್ಲಿ ಅಣೆಕಟ್ಟೆ ಕೆಳಭಾಗದಲ್ಲಿ ಬರುವ ಅನೇಕ ಗ್ರಾಮ ಗಳು ಶಿಥಪೀಡಿತವೆಂದು ಘೋಷಣೆ ಮಾಡಿ ಆ ಗ್ರಾಮಗಳಿಗೆ ಪುನರ್‌ ವಸತಿ ನೀಡಲಾಯಿತು. ಆ ಅನೇಕ ಗ್ರಾಮಗಳ ಮುಳುಗಡೆ ಪಟ್ಟಿ ಯಲ್ಲಿ ಈ ದುರಂತ ಸ್ಥಿತಿಯಲ್ಲಿರುವ ತೆವಡಹಳ್ಳಿ ಗ್ರಾಮವೂ ಸೇರ್ಪಡೆ ಆಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಜನರ ಪ್ರತಿನಿಧಿಗಳು ಅಸಡ್ಡೆಯೋ ಅಥವಾ ದ್ವೇಷವೋ ಈಗಲೂ ಸಹ ಈ ಗ್ರಾಮ ಪುನರ್‌ ವಸತಿ ಕಾಣದೆ ಇದ್ದು ಅಭಿವೃದ್ಧಿ ವಂಚಿತಗೊಂಡಿದೆ ಎಂದು ಹೇಳಲಾಗಿದೆ.

ಮಳೆಗಾಲದ ಬದುಕು ದಯಾನೀಯ: ಮಳೆಗಾಲ ಬಂತೆಂದರೆ ಸಾಕು ಗ್ರಾಮ ದಲ್ಲಿರುವ ಬಹುತೇಕ ಮನೆಳಲ್ಲಿ ಮಂಡಿ ಎತ್ತರದಷ್ಟು ನೀರು ನಿಂತಿ ವಾಸ ಮಾಡ ಲಾರದಷ್ಟು ಅವ್ಯವಸ್ಥೆ ಎದ್ದು ಕಾಣ ಬರುತ್ತಿದೆ.ಒಂದು ಕಡೆ ಭೂಮಿಯಿಂದ ನೀರು ಹೊರಬರುತ್ತಿದ್ದರೆ, ಮತ್ತೂಂದಡೆ ಗ್ರಾಮದ ಮೇಲಾºಗದಲ್ಲಿ ಹರಿಯುತ್ತಿರುವ ಬಲದಂಡೆ ನಾಲೆ ನೀರು ಯಥೇಚ್ಚಾವಾಗಿ ಗ್ರಾಮಕ್ಕೆ ಹರಿಯುವುದರಿಂದ ಇಂದಿಗೂ ಈ ಗ್ರಾಮದಲ್ಲಿನ ಜನರು ಜೀವ ಬಿಗಿ ಹಿಡಿದುಕೊಂಡು ಬದುಕು ದೂಡುತ್ತಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಈ ಗ್ರಾಮದ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜಕಾರಿಣಿಗಳು ಮಾತ್ರ ಇತ್ತ ಗಮನ ಹರಿಸದೆ ದೂರು ಉಳಿದು ಚುನಾ ವಣೆ ಬಂತೆಂದರೆ ಸಾಕು, ಮತ ಪಡೆ ಯುವ ಸಲುವಾಗಿ ನಿಮ್ಮ ಸಮಸ್ಯೆ ಬಗೆ ಹರಿಸಿಕೊಡುವ ಭರವಸೆ ನೀಡಿ ಚುನಾವಣೆ ನಂತರ ಜಯಗಳಿಸಿದ ಯಾವೊಬ್ಬ ಪ್ರತಿನಿಧಿಯೂ ಸಹ ಇತ್ತ ಸುಳಿಯದೆ ಇರುವುದು ಎದ್ದು ಕಾಣತೊಡಗಿದೆ.

ನಿವೇಶನ ಭಾಗ್ಯವೂ ಇಲ್ಲ: ಪ್ರಸ್ತುತ ಗ್ರಾಮದಲ್ಲಿ ಸುಸಜ್ಜಿತ ಶಾಲಾ ಕೊಠಡಿ ಇಲ್ಲದೆ ಪಾಠ ಪ್ರವಚನಕ್ಕೆ ಭಾರೀ ತೊಂದರೆ ಉಂಟಾಗಿದೆ. ಈ ಗ್ರಾಮದ ಸರ್ವೆ ನಂಬರ್‌ 75ರಲ್ಲಿ ಸುಮಾರು ಐದು ಎಕರೆ ಭೂಮಿಯನ್ನು ಗ್ರಾಮಸ್ಥರಿಗೆ ನಿವೇಶನ ಒದಗಿಸಲು ಮೀಸಲಿಟ್ಟಿದ್ದಾರೆ. ಈ ಬಗ್ಗೆ ಗ್ರಾಮದ ಮುಖಂಡರು ಹಲವು ಬಾರಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರೂ ಸಹ ಯಾವುದೆ ಪ್ರಯೋಜ ಕಂಡಿಲ್ಲ. ತಮ್ಮ ಗ್ರಾಮಸ್ಥರ ಅಳಲಿಗೆ ಸರ್ಕಾರದ ಮನ ಕರಗಿ ಸೌಕರ್ಯ ನೀಡಲಿದ್ಯಾ? ಈ ಗ್ರಾಮದ ಮೂಲ ಭೂತ ಸೌಕರ್ಯಗಳನ್ನು ನೀಡುವಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಗಮನ ಹರಿಸುವುದೆ ಎಂಬುದನ್ನು ಕಾದು ನೋಡಬೆಕಿದೆ.

ಹೆಸರಿಗಷ್ಟೇ ಈ ಗ್ರಾಮ ಮಲ್ಲಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದೆ. ಆದರೇ ಗ್ರಾಮೀಣ ಭಾಗದ ಅನುದಾನ ಏನಾಗಿದೆ ಗೊತ್ತಿಲ್ಲ. ಈ ಗ್ರಾಮಗಳ ಅಭಿವೃದ್ಧಿಗೆ ಪಿಡಿಒ ಅಧಿಕಾರಿಗಳು ಯಾವ ಕ್ರಮ ವಹಿಸಿದ್ದಾರೆ? ಗ್ರಾಮಗಳ ಅಭಿವೃದ್ಧಿ ಬಗ್ಗೆ ತಾಪಂ ಇಒ, ಜಿಪಂ ಸಿಇಒ, ತಹಶೀಲ್ದಾರ್‌, ಜಿಲ್ಲಾಧಿಕಾರಿಗಳ ಹಾದಿಯಾಗಿ ಯಾವೊಬ್ಬ ಅಧಿಕಾರಿಯೂ ಈ ಗ್ರಾಮದ ದುಸ್ಥಿತಿ ಸರಿ ಪಡಿಸಲು ಮುಂದಾಗಿಲ್ಲ. ಮೂಲ ಸೌಕರ್ಯವಿಲ್ಲದೇ ಬದುಕುತ್ತಿರುವ ಇಲ್ಲಿನ ಗ್ರಾಮಸ್ಥರ ಬೇಡಿಕೆ ಅರಣ್ಯ ರೋದನವಾಗಿದೆ. ಯಾವ ಸರ್ಕಾರ ನಮ್ಮ ಗ್ರಾಮದ ಉದ್ಧಾರಕ್ಕೆ ಬರುವುದೋ ಗೊತ್ತಿಲ್ಲ. – ಮಂಜುನಾಥ್‌, ತೆವಡಹಳ್ಳಿ ಗ್ರಾಮಸ್ಥ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.