

Team Udayavani, May 28, 2020, 7:11 AM IST
ಹಾಸನ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ದಾದಿಯರು ಕರ್ತವ್ಯ ಮುಗಿಸಿದ ನಂತರ ಮನೆಗಳಿಗೆ ತೆರಳುವ ಮೊದಲು ಹೋಟೆಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್.ಕೃಷ್ಣಮೂರ್ತಿ ಅವರು ಮನವಿ ಮಾಡಿದರು. ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಮೊದಲು ವೈದ್ಯ ಸಿಬ್ಬಂದಿಗೆ ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಇತ್ತು. ಆದರೆ ಈಗ ಕರ್ತವ್ಯ ಮುಗಿಸಿದ ನಂತರ ಹೋಂ ಕ್ವಾರಂ ಟೈನ್ ಸಾಕು ಎಂದು ಸರ್ಕಾರ ಆದೇಶಿಸಿದೆ. ಇದರಿಂದ ವೈದ್ಯ ಸಿಬ್ಬಂದಿ ಕುಟುಂಬಗಳಲ್ಲಿ ಆತಂಕ ಮೂಡಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಾಧು ಸ್ವಾಮಿ ಅವರು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗು ವುದು ಎಂದರು.
ಜೆಡಿಎಸ್ ಶಾಸಕರ ಗೈರು: ಜಿಪಂ ಸಭಾಂ ಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಜೆಡಿಎಸ್‌ನ ಎಲ್ಲ ಆರು ಮಂದಿ ಶಾಸಕರು ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಗೈರಾಗಿದ್ದರು. ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಎಚ್.ಡಿ.ರೇವಣ್ಣ ಅವರು ಹಾಸನದ ಪ್ರವಾಸಿ ಮಂದಿರದಲ್ಲಿದ್ದು ಸುದ್ದಿಗೋಷ್ಠಿ ನಡೆಸಿದರೂ ಸಚಿವರು ಪಾಲ್ಗೊಂಡಿದ್ದ ಅಧಿಕಾರಿಗಳ ಸಭೆಗೆ ಹೋಗಲಿಲ್ಲ. ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್. ಶ್ರೀನಿವಾಸ್ ಗೌಡ, ಜಿಪಂ ಸಿಇಒ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ.ನವೀನ್‌ಭಟ್, ಡಿಎಚ್‌ಒ ಡಾ.ಸತೀಶ್‌ಕುಮಾರ್ ಹಾಜರಿದ್ದರು.
Ad
ಬಾಕಿ ಬಿಲ್ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ
ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ
Malpe ಸೈಂಟ್ ಮೇರಿಸ್ ಬಳಿ ನಾಡದೋಣಿ ದುರ್ಘಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ
ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ
ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್ ನಾಯ್ಡು
You seem to have an Ad Blocker on.
To continue reading, please turn it off or whitelist Udayavani.