ರಾಜೀನಾಮೆಗೆ ಮುಂದಾದ ಪುರಸಭೆ ಸದಸ್ಯರು?


Team Udayavani, Dec 7, 2021, 2:41 PM IST

members of purasabha

ಹೊಳೆನರಸೀಪುರ: ಸ್ಥಳೀಯ ಸಂಸ್ಥೆ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ಎಲ್ಲ ತಂತ್ರಗಳನ್ನು ಆನುಸರಿಸತ್ತಿರುವ ಹಿನ್ನೆಲೆ ಪುರಸಭೆ ಎಲ್ಲ ಬಹುತೇಕ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವುದು ಜೆಡಿಎಸ್‌ ದಳಪತಿಗಳ ನಿದ್ದೆಗೆಡಿಸುತ್ತಿದೆ.

ಪುರಸಭೆಯ 23 ಸದಸ್ಯರ ಪೈಕಿ ಬಹುತೇಕ ಮಂದಿ ತಮ್ಮ ಸ್ಥಾನಗಳಿಗೆ ಡಿಸೆಂಬರ್‌ ಎರಡನೇ ವಾರ ರಾಜೀನಾಮೆ ನೀಡಿ ರಾಜಕೀಯಿದಂದ ದೂರ ಉಳಿಯಲು ಒಂದೆರಡು ಸುತ್ತು ಸಭೆ ನಡೆಸಿ ನಿರ್ಧರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಎಲ್ಲರೂ ಜೆಡಿಎಸ್‌ ಜನಪ್ರತಿನಿಧಿಗಳು: 2018 ಸೆಪ್ಟೆಂಬರ್‌ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಮತದಾರ ಎಲ್ಲ 23 ಸದಸ್ಯರನ್ನು ಜೆಡಿಎಸ್‌ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲುವು ನೀಡಿದ್ದ, ಆದರೆ ಗೆಲುವು ಸಾಧಿಸಿದ ಸದಸ್ಯರಿಗೆ ಅಧಿಕಾರ ದೊರೆತಿದ್ದು ಸುಮಾರು ಒಂದುವರೆ ವರ್ಷದ ನಂತರ, ನೂತನವಾಗಿ ಆಯ್ಕೆಯಾದ ಸದಸ್ಯರು ನಾನಾ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಇರಿಸಿಕೊಂಡು ಪದಗ್ರಹಣ ಮಾಡಿದ್ದರು.

ಇದನ್ನೂ ಓದಿ:- ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

ಆದರೆ ಅಧ್ಯಕ್ಷರಾಗಿ ಅದಿಕಾರ ವಹಿಸಿಕೊಂಡು ವಿದ್ಯಾವಂತೆ ಮಹಿಳೆ ಸಿ.ಜಿ.ವೀಣಾ ಅವರು ಪುರಸಭೆ ಮುಖ್ಯಾಕಾರಿ ಅವರ ಕೈಯಡಿಯಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಅವರು ಇತ್ತೀಚೆಗೆ ಪುರಸಭೆಯಿಂದ ದೂರ ಉಳಿದು ತಮಗೆ ಈ ಅಧಿಕಾರವೇ ಬೇಡ ಎನ್ನುವ ನಿಟ್ಟಿನಲ್ಲಿ ಸಾಗಿದ್ದಾರೆ.

ರೇವಣ್ಣ ದರ್ಬಾರ್‌: ಪುರಸಭೆ ಅಭಿವೃದ್ಧಿ ಮತ್ತು ಕ್ರಿಯಾಯೋಜನೆಗಳನ್ನು ರೂಪಿಸುವ ಹಕ್ಕು ಕಳೆದುಕೊಂಡಿದ್ದು, ಎಲ್ಲಕ್ಕೂ ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ ಅವರ ಕುಟುಂಬ ಹಾಕಿದ ಗೆರೆಯನ್ನು ದಾಟಲಾಗದೆ, ನಾಮ್‌ ಕೇ ವಾಸ್ತೆ ಮಾಸಿಕ ಸಭೆಗಳನ್ನು ನಡೆಸುತ್ತ ಬಂದಿರುವುದು ಸದಸ್ಯರಲ್ಲಿಯೇ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳದ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಪುರಸಭೆ ಮಾಸಿಕ ಸಭೆಗೆ ಮೊದಲು ಶಾಸಕ ರೇವಣ್ಣ ಅವರ ಮನೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ನಾಳಿನ ಪುರಸಭೆ ಮಾಸಿಕ ಸಭೆ ಇದೇ ರೀತಿ ನಡೆಸಬೇಕೆಂದು ಹುಕುಂ ನೀಡಿ ಕಳುಹಿಸುತ್ತಿರುವುದು ಆಯ್ಕೆಗೊಂಡ ಸದಸ್ಯರಲ್ಲಿ ಅಸಮಾಧಾನವನ್ನು ಸೃಷ್ಟಿಸುತ್ತಿದೆ.

ಪ್ರತಿಯೊಂದಕ್ಕೆ ಆಜ್ಞೆ ಪರಿಪಾಲನೆ : ಪುರಸಭೆಯಲ್ಲಿನ ಸಿಬ್ಬಂದಿಗಳು ತಮಗೆ ಮನ ಬಂದಂತೆ ನಡೆದುಕೊಳ್ಳುತ್ತಿ ರುವುದು ಮತ್ತು ಭ್ರಷ್ಟಾಚಾರದ ಕೂಪವಾಗಿರುವುದು ಆಯ್ಕೆಗೊಂಡ ಸದಸ್ಯರುಗಳಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಸಣ್ಣಪುಟ್ಟ ಸಾರ್ವಜನಿಕ ಸಮಸ್ಯೆಗಳಿಗೂ ರೇವಣ್ಣ ಅವರ ಕುಟುಂಬದ ಅಣತಿಯಂತೆ ಪುರಸಭೆ ಸಿಬ್ಬಂದಿ ನಡೆದುಕೊಳ್ಳುತ್ತಿರುವುದು ಸದಸ್ಯರುಗಳಿಗೆ ಮೂಲ ಬೇಸರಕ್ಕೆ ಕಾರಣವಾಗಿದೆ.

ನೆನಪಿಸಿದ ಬೇಲೂರು ಪುರಸಭೆ : ಮೂರು ತಿಂಗಳ ಹಿಂದೆ ಜಿಲ್ಲೆ ಬೇಲೂರು ಪುರಸಭೆ ಚುನಾವಣೆಯಲ್ಲಿ ಆಲ್ಲಿನ ಜನತೆ ಭದ್ರಕೋಟೆಯಾಗಿರುವ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಕೈಹಿಡಿದಿದ್ದರು. ಬಳಿಕ ಜೆಡಿಎಸ್‌ ಸ್ಥಾನಗಳನ್ನು ಪಡೆಯಿತು ಆದರೆ ಸದಸ್ಯರಿಗೆ ಸ್ಥಾನಮಾನ ಸಿಗದಂತಾಯಿತು.

ವ್ಯವಸ್ಥಾಪಕಿ ಈಗ ಮುಖ್ಯಾಧಿಕಾರಿ

ಪುರಸಭೆ ಮುಖ್ಯಾಧಿಕಾರಿ ಆಗಿರುವ ಪುರಸಭೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಸುತ್ತಿದ್ದ ಶಾಂತಲಾ ಅವರಿಗೆ ಪುರಸಭೆ ಮುಖ್ಯಾಧಿಕಾರಿ ಅಗಿ ನೇಮಕಗೊಂಡಿರುವುದು ಯಾರದೋ ಕೈಯಲ್ಲಿ ಮಾಣಿಕ್ಯ ನೀಡಿದಂತಾಗಿದೆ. ನೀವು ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಅದಕ್ಕೆ ನನ್ನ ಸಹಕಾರ ಬೇಕು ಎಂಬ ದರ್ಪದ ಮಾತುಗಳು ಅಧ್ಯಕ್ಷೆ ವೀಣಾ ಅವರ ಮನಸ್ಸನ್ನು ಘಾಸಿಗೊಳಿಸಿದೆ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.