Udayavni Special

ನೂತನ ಅಧ್ಯಕ್ಷರೇ ಸಮಸ್ಯೆಗಳತ್ತ ಗಮನ ಹರಿಸಿ

ಕಸ ಸಂಗ್ರಹ,ಕುಡಿಯುವ ನೀರು, ಮಳಿಗೆಗಳ ಹರಾಜು, ಮಾರುಕಟ್ಟೆ ನಿರ್ಮಾಣ ನನೆಗುದಿಗೆ

Team Udayavani, Nov 11, 2020, 6:39 PM IST

ನೂತನ ಅಧ್ಯಕ್ಷರೇ ಸಮಸ್ಯೆಗಳತ್ತ ಗಮನ ಹರಿಸಿ

ಚನ್ನರಾಯಪಟ್ಟಣ ಪುರಸಭೆಯ 23 ವಾರ್ಡ್‌ಗೆ ಪೂರೈಕೆ ಆಗದ 3ನೇ ಹಂತದ ಕುಡಿಯುವ ನೀರಿನ ಯೋಜನೆ.

ಚನ್ನರಾಯಪಟ್ಟಣ: ಎರಡು ವರ್ಷದ ನಂತರಪುರಸಭೆ ಆಡಳಿತ ಮಂಡಳಿ ರಚನೆ ಆಗಿದ್ದು, ನೂತನ ಅಧ್ಯಕ್ಷ ಎಚ್‌.ಎನ್‌.ನವೀನ್‌ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ಇದನ್ನು ಎಷ್ಟರ ಮಟ್ಟಿಗೆ ಬಗೆ ಹರಿಸುತ್ತಾರೆ ಎನ್ನುವುದೇ ಈಗಿನ ಪ್ರಶ್ನೆ.

ಮೊದಲಿಗೆ ಪುರಸಭೆ ವ್ಯಾಪ್ತಿಯ ಇ ಖಾತೆಯಿಂದ ನಗರವಾಸಿಗರ ಜೋಬಿಗೆ ಕತ್ತರಿ ಬೀಳುತ್ತಿದೆ, ಹಲವುವಾರ್ಡ್‌ನಲ್ಲಿನ ಮೂಲ ನಿವಾಸಿಗಳ ಮನೆಗಳು ಇ ಖಾತೆಯಾಗಿಲ್ಲ, ಅವರು ದುಬಾರಿ ಹಣ ನೀಡಿ ಖಾತೆ ಮಾಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ನಿವೇಶನಹೊಂದಿರುವವರು ಬ್ಯಾಂಕ್‌ನಲ್ಲಿ ಸಾಲ ಪಡೆಯಲುಇ ಖಾತೆ ಮಾಡಿಸುತ್ತಿದ್ದಾರೆ. ಉಳಿದವರು ಹಾಗೆ ಮನೆ ಕಟ್ಟುತ್ತಿದ್ದಾರೆ.

ತಲೆ ನೋವಾಗುವ ಖಾತೆ: ಮೂರು ದಶಕದ ಹಿಂದೆ ಪುರಸಭೆ ವ್ಯಾಪ್ತಿಗೆ ಸೇರಿದ ಜನಿವಾರ ಗ್ರಾಪಂ ವ್ಯಾಪ್ತಿಯ ಗೂರಮಾರನಹಳ್ಳಿ, ಡಿ.ಕಾಳೇನಹಳ್ಳಿಗ್ರಾಪಂ ವ್ಯಾಪ್ತಿಯ ಗೂರನಹಳ್ಳಿಯ ನಿವೇಶನಗಳ ಇ ಖಾತೆ ಮಾಡಿಕೊಡಲು ಪುರಸಭೆ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಇದೆ. ಅಧಿಕಾರಿಗಳು ಆಯಾ ಗ್ರಾಪಂನಿಂದ ಕಡತ ತರಿಸಿಕೊಂಡು ಸಮೂಹಿಕವಾಗಿ ಇ ಖಾತೆ ಮಾಡಬೇಕಿತ್ತು. ಆದರೆ, ಈ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆ ಅಧ್ಯಕ್ಷರು ಯಾವ ರೀತಿ ಬಗೆಹರಿಸುತ್ತಾರೆಕಾದು ನೋಡಬೇಕು.

ಪುರಸಭೆ ವ್ಯಾಪ್ತಿ ತರಬೇಕಿದೆ: ಮೈಸೂರು ರಸ್ತೆ, ಗದ್ದೆ ಬಯಲು ಪ್ರದೇಶ, ಡಿ.ಕಾಳೇನಹಳ್ಳಿ ರಸ್ತೆಯಲ್ಲಿನೂರಾರು ವಾಣಿಜ್ಯ ಮಳಿಗೆಗಳು,ಕಲ್ಯಾಣ ಮಂಟಪ, ಸಿನಿಮಾ ಥಿಯೇಟರ್‌ಗಳು ಪುರಸಭೆಯಿಂದ ವಿದ್ಯುತ್‌, ನೀರು, ಯುಜಿಡಿ ಇತರೆ ಸೌಲಭ್ಯಪಡೆಯುತ್ತಿವೆ. ಆದರೆ, ತೆರಿಗೆ ಮಾತ್ರ ಗ್ರಾಪಂಗೆನೀಡುತ್ತಿದ್ದಾರೆ. ಇದರಿಂದ ಕೋಟ್ಯಂತರ ರೂ.ಆದಾಯ ಪುರಸಭೆಕೈತಪ್ಪುತ್ತಿದೆ. ಇದನ್ನು ಸರಿಪಡಿಸುವಹೊಣೆ ನೂತನ ಅಧ್ಯಕ್ಷರ ಮೇಲಿದೆ.

ಮಳಿಗೆ ಹರಾಜು ಯಾವಾಗ.?: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆಹೊಂದಿಕೊಂಡಿರುವ ಪುರಸಭೆಗೆ ಸೇರಿದ ನೂರಾರು ವಾಣಿಜ್ಯ ಮಳಿಗೆಗಳು ಹರಾಜು ಮಾಡದೇ, ನಾಲ್ಕುವರ್ಷದಿಂದ ಕೆಲವು ಪಾಳು ಬಿದ್ದಿವೆ. ಇನ್ನು ಕೆಲವುಅಕ್ರಮವಾಗಿ ಪ್ರಭಾವಿಗಳು ವ್ಯವಹರಿಸುತ್ತಿದ್ದಾರೆ, ಇವುಗಳನ್ನು ಹರಾಜು ಮಾಡಿದರೆ ಮಾಸಿಕ ಲಕ್ಷಾಂತರ ರೂ. ಆದಾಯ ಪುರಸಭೆಗೆ ಬರಲಿದೆ.

ವಾಣಿಜ್ಯ ಸಂಕೀರ್ಣ ತೆರವು ಮಾಡಿ: ರಾಷ್ಟ್ರೀಯ ಹೆದ್ದಾರಿ ಮುತ್ತುತ್ತರಾಯ ದೇವಾಲಯ ಮುಂಭಾಗದ ಕುವೆಂಪು ವಾಣಿಜ್ಯ ಮಳಿಗೆ ತೆರವು ಮಾಡಲು ಈಗಾಗಲೇ 5 ವರ್ಷದ ಹಿಂದೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದ್ದರೂ ಅವುಗಳ ತೆರವು ಮಾಡಲಾಗಿಲ್ಲ, ವಿದ್ಯುತ್‌ ಸಂಪರ್ಕ ಕಡಿತಮಾಡಿದ್ದರೂ ವಾಣಿಜ್ಯ ಮಳಿಗೆಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವವರು ಈವರೆಗೂ ಖಾಲಿ ಮಾಡಿಲ್ಲ.ಈ ಬಗ್ಗೆ ಅಧ್ಯಕ್ಷರು ಗಮನ ಹರಿಸಬೇಕಾಗಿದೆ.

ಭುವನೇಶ್ವರಿ ಮಾರುಕಟ್ಟೆ ನಿರ್ಮಿಸಿ: ಪುರಸಭೆ ಕಚೇರಿ ಮುಂಭಾಗದಲ್ಲಿನ ಭುವನೇಶ್ವರಿ ಮಾರುಕಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮಳಿಗೆ ಇದ್ದು, ನಗರೋತ್ಥಾನ ಯೋಜನೆಯಲ್ಲಿ ನೂತನ ಮಳಿಗೆನಿರ್ಮಾಣ ಮಾಡುವ ಉದ್ದೇಶದಿಂದ ವರ್ತಕರನ್ನು ಖಾಲಿ ಮಾಡಿಸಿ, ಕಟ್ಟಡ ತೆರವು ಮಾಡಿ ವರ್ಷ ಕಳೆದರೂ, ಈ ಬಗ್ಗೆ ಪುರಸಭೆ ಗಮನ ಹರಿಸುತ್ತಿಲ್ಲ. ಇಲ್ಲಿ ಅಂಗಡಿ ಮಳಿಗೆ ಹೊಂದಿದ್ದ ವರ್ತಕರು ಬೀದಿ ಪಾಲಾಗಿದ್ದಾರೆ.

ಉದ್ಘಾಟಿಸಿ 3 ವರ್ಷವಾದ್ರೂ ನೀರು ಪೂರೈಸಿಲ್ಲಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಪುರಸಭೆಯ 23 ವಾರ್ಡ್‌ಗೆ ನೀರು ಸರಬರಾಜು ಮಾಡಿಲ್ಲ, ಇನ್ನು ಕಸದ ಸಮಸ್ಯೆ ಹೇಳತೀರದಾಗಿದೆ. ಮನೆ ಕಸ ಸರಿಯಾಗಿ ಸಂಗ್ರಹ ಮಾಡುತ್ತಿಲ್ಲ. ವಾರ್ಡ್‌ನಲ್ಲಿ, ರಸ್ತೆ ಬದಿ, ಕಸ ಶೇಖರಣೆಯಾಗಿ ರೋಗ ಭೀತಿ ಕಾಡುತ್ತಿದೆ. ಒಳಚರಂಡಿ ನೀರು ಗದ್ದೆರಾಮೇಶ್ವರ ದೇವಾಲಯದ ಸಮೀಪ ಶೇಖರಣೆ ಆಗುತ್ತಿದ್ದು, ವೈಜ್ಞಾನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿಲ್ಲ. ಈ ಬಗ್ಗೆ ನೂತನ ಅಧ್ಯಕ್ಷರ ಮುಂದೆ ನೂರಾರು ಸಮಸ್ಯೆಗಳ ಸರಮಾಲೆ ಇದ್ದು, ಇವುಗಳನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಪಟ್ಟಣದ ಸಾರ್ವಜನಿಕರ ಪ್ರಶ್ನೆಯಾಗಿದೆ.

ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದು ಕಣ್ಣ ಮುಂದಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಮೂಲ ಕಾರಣ ತಿಳಿದು ಬಗೆ ಹರಿಸಲಾಗುವುದು, ಅಂಗಡಿ ಮಳಿಗೆ ಹರಾಜು ಸೂಸೂತ್ರವಾಗಿ ಮಾಡಲಾಗುವುದು, ಪ್ರತಿ ತಿಂಗಳು ಮಳಿಗೆಬಾಡಿಗೆ ವಸೂಲಿಗೆ ಪ್ರಾಮುಖ್ಯತೆ ನೀಡಲಾಗುವುದು, ದೀಪಾವಳಿ ಹಬ್ಬದ ನಂತರ ಹಂತವಾಗಿ ಸಮಸ್ಯೆಗಳ ಬಗೆಹರಿಸಲು ಮುಂದಾಗುತ್ತೇನೆ. ಎಚ್‌.ಎನ್‌.ನವೀನ್‌, ಪುರಸಭೆ ನೂತನ ಅಧ್ಯಕ್ಷ

 

ಶಾಮಸುಂದರ್ಕೆ.ಅಣ್ಣೇನಹಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರು ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ

ಮಂಗಳೂರು ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ! ಆಂತರಿಕ ವಿಚಾರ ನಿಮಗ್ಯಾಕೆ ; ಭಾರತ

ದೇಶದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಗೆ ಭಾರತ ಹೇಳಿದ್ದೇನು?

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು…

ಮಾರುವೇಷದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್

ಮಾರುವೇಷದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೇಮೆ ಒಡಲಿಗೆ ಕೋಳಿ, ಪ್ಲಾಸ್ಟಿಕ್‌ ತ್ಯಾಜ್ಯ

ಹೇಮೆ ಒಡಲಿಗೆ ಕೋಳಿ, ಪ್ಲಾಸ್ಟಿಕ್‌ ತ್ಯಾಜ್ಯ

3 ಕೋಟಿ ರೂ.ನಲ್ಲಿ ಹೆಚ್ಚುವರಿ ವಸತಿ ಗೃಹ

3 ಕೋಟಿ ರೂ.ನಲ್ಲಿ ಹೆಚ್ಚುವರಿ ವಸತಿ ಗೃಹ

ಜಾತಿಗೊಂದು ನಿಗಮ: ಸಮಾಜ ಒಡೆಯುವ ಕೆಲಸ

ಜಾತಿಗೊಂದು ನಿಗಮ: ಸಮಾಜ ಒಡೆಯುವ ಕೆಲಸ

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

Untitled-6

ಕೇಂದ್ರದ ವಿರುದ್ಧ ರೈತ, ಕಾರ್ಮಿಕರ ಆಕ್ರೋಶ

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

ಅಯ್ಯಪ್ಪ ಭಕ್ತರಿಗೆಕೇರಳ ಕಿರುಕುಳ: ಪ್ರತಿಭಟನೆ

ಅಯ್ಯಪ್ಪ ಭಕ್ತರಿಗೆಕೇರಳ ಕಿರುಕುಳ: ಪ್ರತಿಭಟನೆ

ಮಂಗಳೂರು ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ

ಮಂಗಳೂರು ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ : ಮುಂದುವರಿದ ಶೋಧ ಕಾರ್ಯ

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಅಡಕೆ ಟಾಸ್ಕ್ಫೋರ್ಸ್‌ಗೆ 10 ಕೋಟಿ ರೂ. ಬಿಡುಗಡೆ

ಅಡಕೆ ಟಾಸ್ಕ್ಫೋರ್ಸ್‌ಗೆ 10 ಕೋಟಿ ರೂ. ಬಿಡುಗಡೆ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ  ನಿರ್ಮಾಣ: ಚಂದ್ರಪ್ಪ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ: ಚಂದ್ರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.