13 ವರ್ಷವಾದ್ರೂ ಆರಂಭವಾಗದ ಕಾರ್ಖಾನೆ


Team Udayavani, Sep 8, 2020, 4:18 PM IST

13 ವರ್ಷವಾದ್ರೂ ಆರಂಭವಾಗದ ಕಾರ್ಖಾನೆ

ಚನ್ನರಾಯಪಟ್ಟಣ: ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ 18 ತಿಂಗಳಲ್ಲಿ ಉನ್ನತೀಕರಣ ಮಾಡುವುದಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವುದಾಗಿ ಹೇಳಿದ ಆಡಳಿತ ಮಂಡಳಿ 13 ವರ್ಷವಾದರೂ ಕಾರ್ಖಾನೆ ಉನ್ನತೀಕರಣ ಮಾಡಿ ಪ್ರಾರಂಭಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.

ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಕಾರ್ಖಾನೆ ಮುಂಭಾಗ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, 13 ವರ್ಷದಿಂದ ಕಬ್ಬು ಬೆಳೆಗಾರರಿಗೆ 200 ಕೋಟಿ ಹಣ ನಷ್ಟವಾಗಿದೆ. ಆದರೆ ಕಾರ್ಖಾನೆಯನ್ನುಚಾಮುಂಡೇಶ್ವರಿ ಷುಗರ್ ಸಂಸ್ಥೆಗೆ ನೀಡಿ ಹಣ ಮಾಡಿರುವುದಲ್ಲದೆ ರೈತರಿಗೆ ದ್ರೋಹ ಮಾಡಿದ್ದಾರೆ ಎಂದರು.

ಶಾಸಕ ಬಾಲಕೃಷ್ಣ ಎರಡು ವರ್ಷದಿಂದ ಹತ್ತಕ್ಕೂ ಹೆಚ್ಚು ಬಾರಿ ದಿನಾಂಕ ನೀಡಿದ್ದಾರೆ, ಕಾಂಗ್ರೆಸ್‌ ಪ್ರತಿಭಟನೆ ಮಾಡುವುದನ್ನು ಅರಿತುಕಾರ್ಖಾನೆ ಅಧಿಕಾರಿಗಳ ಮೂಲಕ ಈ ತಿಂಗಳ30 ರಂದು ಪ್ರಾರಂಭಿಸುವುದಾಗಿ ಪತ್ರ ಬರೆದು ಕಳುಹಿಸಿದ್ದಾರೆ, ಶೀಘ್ರದಲ್ಲಿ ಹಾಸನಕ್ಕೆ ಪಾದಯಾತ್ರೆ ಮಾಡುವುದಲ್ಲದೆ, ವಿಧಾನಸೌಧ ಚಲೋ ಹಮ್ಮಿ ಕೊಳ್ಳಲಾಗುವುದು, ಜೊತೆಗೆಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ನೀಡಬೇಕಾಗಿರುವ ಹಣದ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಹೇಳಿದರು.

ಬಡ್ಡಿ ಕೊಡುವವರು ಯಾರು: ಈಗಾಗಲೇ 26 ಕೋಟಿ ಕರಾರು ಹಣ ಬಾಕಿ ಉಳಿಸಿಕೊಂಡಿದ್ದಾರೆ ಇದನ್ನು ಬ್ಯಾಂಕಿಗೆ ಠೇವಣಿ ಮಾಡಿದರೆ ವಾರ್ಷಿಕ 4 ಕೋಟಿ ಬಡ್ಡಿ ಬರುತ್ತಿತ್ತು ಇದನ್ನು ನೀಡುವವರು ಯಾರು? ಒಂದು ವೇಳೆ ಹಣ ಪಡೆಯದೆ ಶಾಸಕರು ವಾರ್ಷಿಕ ಕೋಟ್ಯಂತರ ರೂ. ಹಣ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಿಕ್‌ ಬ್ಯಾಗ್‌ ಪಡೆದ ಶಾಸಕ: ರೈತ ಮುಖಂಡ ಶ್ರೀಕಂಠ ಮಾತನಾಡಿ, ಕ್ಷೇತ್ರದ ಶಾಸಕ ಬಾಲಕೃಷ್ಣ ಚಾಮುಂಡೇಶ್ವರಿ ಸಂಸ್ಥೆಯಿಂದ ಕಿಕ್‌ ಬ್ಯಾಗ್‌ ಪಡೆದಿದ್ದಾರೆ, ಅವರಿಗೆ ರೈತರ ಕಾಳಜಿ ಮುಖ್ಯವಲ್ಲ ಹಣ ಮಾಡುವುದು ಮುಖ್ಯವಾಗಿದೆ, ರೈತ ಸಂಘದವರು ಧರಣಿ ಮಾಡಿದರೆ ಮಾರನೇ ದಿವಸ ಅಥವಾ ಧರಣಿ ಹಿಂದಿನ ದಿವಸ ಕಾರ್ಖಾನೆ ಭೇಟಿ ನೀಡಿ ಹಣ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಳೆ ವಸ್ತುಗಳಿಂದ ಕಾರ್ಖಾನೆ ಉನ್ನತೀಕರಣ: ಚಾಮುಂಡೇಶ್ವರಿ ಷುಗರ್ ಅವರು ಈಗಾಗಲೆ ನಾಲ್ಕು ಕಾರ್ಖಾನೆ ಹೊಂದಿದ್ದು ಇಲ್ಲಿನ ಕಾರ್ಖಾನೆ ಉನ್ನತೀಕರಣಕ್ಕೆಂದು ಹೊಸ ಸಾಮಗ್ರಿ ತರಿಸಿ ಅದನ್ನು ಬೇರೆ ಕಾರ್ಖಾನೆಗೆ ಕಳುಹಿಸಿ ಅಲ್ಲಿನ ಹಳೆಯ ಯಂತ್ರಗಳನ್ನು ಇಲ್ಲಿಗೆ ಜೋಡಣೆ ಮಾಡುತ್ತಿದ್ದಾರೆ, ಹೊಸ ವಸ್ತುಗಳನ್ನು ಅಡಳವಡಿಸಿದ್ದರೆ ಯಾಕೆ ಬೈಲರ್‌ ಸಿಡಿದು ಹೋಗುತ್ತಿತ್ತು ಎಂದು ಪ್ರಶ್ನಿಸಿದರು.ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಜಿಪಂ ಸದಸ್ಯ ಶ್ರೇಯಸ್‌ ಎಂ. ಪಟೇಲ್‌, ತಾಪಂ ಸದಸ್ಯರಾದ ರತ್ನಮ್ಮ, ರಾಮಕೃಷ್ಣೇಗೌಡ, ಪ್ರಮೀಳಾ, ಮಂಜುನಾಥ, ಗಿರೀಶ್‌, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ, ಕಿನಾಸ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಪ್ರಸಾದ್‌, ಕಾರ್ಖಾನೆ ನಿರ್ದೇಶಕರಾದ ರವೀಂದ್ರ, ನಾರಾಯಣ, ಮಾಜಿ ನಿರ್ದೇಶಕ ಶಿವರಾಂ, ಎ.ಬಿ.ನಂಜುಂಡೇಗೌಡ ಇದ್ದರು.

Ad

ಟಾಪ್ ನ್ಯೂಸ್

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashok

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್‌.ಅಶೋಕ್‌

KNrajanna

ಹಾಸನದಲ್ಲಿ ಎಚ್‌.ಡಿ.ದೇವೇಗೌಡ, ರೇವಣ್ಣರನ್ನು ಹಾಡಿ ಹೊಗಳಿದ ಸಚಿವ ಕೆ.ಎನ್‌.ರಾಜಣ್ಣ!

Hassan: ಹೃದಯಾಘಾತದಿಂದ ಮೃತಪಟ್ಟವರ ಮನೆಗೆ ವೈದ್ಯರ ತಂಡ ಭೇಟಿ

Hassan: ಹೃದಯಾಘಾತದಿಂದ ಮೃತಪಟ್ಟವರ ಮನೆಗೆ ವೈದ್ಯರ ತಂಡ ಭೇಟಿ

heart attack

Hassan; ಎಲ್ಲ ಸಾವುಗಳಿಗೆ ಹೃದಯಾಘಾತವೇ ಕಾರಣವಲ್ಲ: ಹಾಸನ ಡಿಎಚ್‌ಒ

three more passed away of heart attacks in Hassan

Hassan: ಮುಂದುವರಿದ ಸಾವಿನ ಸರಣಿ.. ಹೃದಯಾಘಾತಕ್ಕೆ ಮತ್ತೆ ಮೂವರು ಬಲಿ

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.