Udayavni Special

ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕ್ರಮ ಕೈಗೊಂಡಿಲ್ಲ


Team Udayavani, Mar 22, 2021, 2:56 PM IST

ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕ್ರಮ ಕೈಗೊಂಡಿಲ್ಲ

ಚನ್ನರಾಯಪಟ್ಟಣ: ಪಟ್ಟಣದ ಉದಯಗಿರಿ ಬಡಾವಣೆಯಲ್ಲಿ ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ತಮ್ಮ ನಿವೇಶನದೊಂದಿಗೆ ತಡೆ ಗೋಡೆ ನಿರ್ಮಾಣ ಮಾಡಿಕೊಂಡು ತೊಂದರೆನೀಡುತ್ತಿದ್ದಾರೆ ಎಂದು ನಿವೃತ್ತ ಎಂಜಿನಿಯರ್‌ ದೇವರಾಜು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ವರ್ಷದ ಹಿಂದೆ ಬಡಾವಣೆಗೆ ಒಳಚರಂಡಿ ಕಾಮಗಾರಿ ಮಾಡಿಸಲು ಸರ್ಕಾರ 5 ಕೋಟಿ ರೂ.ಅನುದಾನ ನೀಡಿದರೆ, ನಾಲ್ಕು ತಿಂಗಳ ಹಿಂದೆ ಕಾಮಗಾರಿ ಮಾಡಿಸಲು ಶಾಸಕರು, ಪುರಸಭಾಆಡಳಿತ ಮಂಡಳಿ ಪೂಜೆ ನೆರವೇರಿಸಿತು. ಆದರೆ,ಈಗ ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಮಗಾರಿ ಮಾಡಲು ಬಿಡದೇವಾರ್ಡ್‌ ನಿವಾಸಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ದೂರಿದರು.

ಗ್ರಾಮದ ನಕಾಶೆ, ಬಡಾವಣೆ ಯೋಜನೆಯಲ್ಲಿರಾಜಕಾಲುವೆ ಇದೆ. ಆದರೆ, ಕೆಲ ಹಣವಂತರು,ರಾಜಕೀಯ ಮುಖಂಡರು ಒತ್ತುವರಿ ಮಾಡಿಕೊಂಡಿದ್ದಾರೆ. ಮಳೆನೀರು, ಕೊಳಚೆ ನೀರು ಮುಂದೆಹರಿಯದಂತಾಗಿದೆ. ಈ ಬಗ್ಗೆ ಪುರಸಭೆ, ಕಂದಾಯಇಲಾಖೆ ಗಮನಕ್ಕೆ ತಂದರೂ ತೆರವು ಮಾಡಿಸದೇ,ಮುಖ್ಯಾಧಿಕಾರಿಗಳು, ತಹಶೀಲ್ದಾರ್‌, ಶಾಸಕರುಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಒಳಚರಂಡಿಕಾಮಗಾರಿ ಮಾಡುವ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.

ನೋಟಿಸ್‌ ಮಾತ್ರ ಜಾರಿ: ಈಗಾಗಲೇ ಸರ್ಕಾರ 4.4 ಕೋಟಿ ರೂ. ಅನುದಾನ ನೀಡಿ ಟೆಂಡರ್‌ ಕರೆದು ಕಾಮಗಾರಿ ಮಾಡುವ ವೇಳೆ ಈ ರೀತಿ ಅಡ್ಡಿ ಮಾಡುತ್ತಿರುವುದು ಎಷ್ಟು ಸರಿ? ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ತಹ ಶೀಲ್ದಾರ್‌ ಜೆ.ಬಿ. ಮಾರುತಿ ಒತ್ತುವರಿದಾರರಿಗೆ ನೋಟಿಸ್‌ ನೀಡಿರುವುದು ಬಿಟ್ಟರೆ? ಮತ್ತೇನು ಮಾಡಿಲ್ಲ ಎಂದು ಅಪಾದಿಸಿದರು.

ಕ್ಷೇತ್ರದತ್ತ ಸುಳಿಯುತ್ತಿಲ್ಲ: ಶಾಸಕ ಬಾಲಕೃಷ್ಣ ಅವರ ಮನೆ ಬಾಗಿಲಿಗೆ ಬಡಾವಣೆ ನಿವಾಸಿಗಳೂ ಸಾಕಷ್ಟುಬಾರಿ ಅಲೆದರೂ ಅವರು ಓಟ್‌ ಬ್ಯಾಂಕ್‌ ರಾಜ ಕಾರಣ ಮಾಡುತ್ತಿದ್ದಾರೆ. ಇನ್ನು ಶಾಸಕರ ಬೆಂಬಲಿಗರೆನ್ನಲಾದ ಅನಿಲ್‌ ಪತ್ನಿ ರೇಖಾ ವಾರ್ಡ್‌ನಸದಸ್ಯೆ. ಈ ವರೆಗೂ ವಾರ್ಡ್‌ಗೆ ಭೇಟಿ ನೀಡಿ ಜನರಸಮಸ್ಯೆ ಕೇಳುತ್ತಿಲ್ಲ, ಪುರಸಭಾ ಅಧ್ಯಕ್ಷ ನವೀನ್‌ಕೂಡ ಇತ್ತ ಸುಳಿಯುತ್ತಿಲ್ಲ, ಇದನ್ನು ಗಮನಿಸಿದರೆಜನಪ್ರತಿನಿಧಿಗಳು ರಾಜಕಾಲುವೆ ಒತ್ತುವರಿ ಮಾಡಿರುವ ಪ್ರಭಾವಿಗಳ ಪರ ಇರುವುದು ಮೇಲ್ನೋ ಟಕ್ಕೆತಿಳಿಯುತ್ತಿದೆ ಎಂದು ಹೇಳಿದರು.

ಕೋರ್ಟ್‌ ಮೆಟ್ಟಿಲೇರಲು ಚಿಂತನೆ: ವಾರ್ಡ್‌ನಲ್ಲಿಸಮುದಾಯ ಭವನ ಇದ್ದು, ತಿಂಗಳಲ್ಲಿ ಹತ್ತಾರುವಿವಾಹಗಳು ನಡೆಯುತ್ತಿವೆ. ಅಲ್ಲಿನ ಕೊಳಚೆ ನೀರು ಮುಂದೆ ಹರಿಯುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. 8 ವರ್ಷದಿಂದ ಸಮಸ್ಯೆ ಬಗೆಹರಿಸದೇ ಅಧಿಕಾರಿಗಳು ಹಣವಂತರ ಪರವಾಗಿ ನಿಲ್ಲುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಮಿನಿ ವಿಧಾನಸೌಧ, ಪುರಸಭೆ ಮುಂದೆ ಧರಣಿ ನಡೆಸಲಾಗುವುದು. ಇಲ್ಲವೆ, ಲೋಕಾಯುಕ್ತ ಕೋರ್ಟ್‌ ಮೆಟ್ಟಿಲು ಏರಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಉದಯಗಿರಿಬಡಾವಣೆ ವಾಸಿ ಗಳಾದ ನಾಗರಾಜು, ಚೇತನ್‌, ಆನಂದ್‌, ಮಂಜು ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Migrant workers problem

ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Taluk needs more power station

ತಾಲೂಕಿಗೆ ಬೇಕು ಇನ್ನಷ್ಟು ಪವರ್‌ ಸ್ಟೇಷನ್‌

1,359 beds for infected persons in the district

ಜಿಲ್ಲೆಯ ಸೋಂಕಿತರಿಗೆ 1,359 ಹಾಸಿಗೆ ವ್ಯವಸ್ಥೆ

covid issue for welfare

ಕಲ್ಯಾಣಕ್ಕೆ ಕೋವಿಡ್  ಕಂಟಕ

Pilgrims who received the full covid vaccine

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯಾತ್ರಿಕರು …ಕತಾರ್‌ನಲ್ಲಿ ವಿಶ್ವದ ಮೊದಲ ವಿಮಾನ ಹಾರಾಟ

The water of the channels supports the villages

ವರ್ಷಧಾರೆ, ನಾಲೆಗಳ ನೀರೇ ಹಳ್ಳಿ ಗಳಿಗೆ ಆಸರೆ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

fchfghh

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

juyoyu

ವಿದ್ಯಾರ್ಥಿಗಳಿಗೆ ವಕ್ಕರಿಸಿದ ಸೋಂಕು

vgfuytuy

ಮುಗಿದ ಮುಷ್ಕರ; ರಸ್ತೆಗಿಳಿದ ಸರ್ಕಾರಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.