
ಹಾಸನ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ: ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು
Team Udayavani, Apr 11, 2021, 11:34 AM IST

ಹಾಸನ: ಆಲೂರು ತಾಲೂಕಿನ ಹೊಂಕರವಳ್ಳಿ ಸಮೀಪದ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ 100 ಕ್ಕೂ ಹೆಚ್ಚು ಜನರನ್ನು ಆಲೂರು ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಪಾರ್ಟಿ ಮಾಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ರೆಸಾರ್ಟ್ ಮೇಲೆ ಭಾನುವಾರ ಮುಂಜಾನೆ ದಾಳಿ ನಡೆಸಿ ರೆಸಾರ್ಟ್ ನಲ್ಲಿದ್ದವರನ್ನು ಆಲೂರು ಪಟ್ಟಣಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ಒಂದೂವರೆ ತಿಂಗಳಿಗಾಗುವಷ್ಟು ಗೊಬ್ಬರ ಲಭ್ಯ, ಹಳೆ ದರದಲ್ಲೇ ವಿತರಣೆ: ಸಚಿವ ಡಿವಿಎಸ್
ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಮಾಡುತ್ತದ್ದವರು ಹೊರ ರಾಜ್ಯಗಳವರೆಂದು ತಿಳಿದು ಬಂದಿದೆ. ಬಿಹಾರ, ಉತ್ತರ ಪ್ರದೇಶ, ಅಸ್ಸಾಂ ರಾಜ್ಯದವರೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
