ಸಂಘಟನೆ ಹುರುಪು ಕಳೆದುಕೊಂಡ ಬಿಜೆಪಿ


Team Udayavani, Jan 23, 2023, 3:51 PM IST

ಸಂಘಟನೆ ಹುರುಪು ಕಳೆದುಕೊಂಡ ಬಿಜೆಪಿ

ಸಕಲೇಶಪುರ: ರಾಜ್ಯದೆಲ್ಲೆಡೆ ಅಬ್ಬರದಿಂದ ಮುಂಬರುವ ಚುನಾವಣೆ ತಯಾರಿ ನಡೆಯುತ್ತಿದ್ದು ಆದರೆ ತಾಲೂಕು ಬಿಜೆಪಿಯಲ್ಲಿ ಮಾತ್ರ ಮುಂಬರುವ ಚುನಾ ವಣೆ ಹಿನ್ನೆಲೆ ಯಾವುದೇ ಗಂಭೀರ ತಯಾರಿ ನಡೆಯದಿರುವುದು ಕಂಡು ಬರುತ್ತಿದ್ದು ಇದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ.

ಬಿಜೆಪಿ ಹೈಕಮಾಂಡ್‌ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದು ಆದರೆ ಅದಕ್ಕೆ ಪೂರಕವಾಗಿ ಪಕ್ಷದ ಸಂಘಟನೆ ತಾಲೂಕಿನ ಲ್ಲಿ ಕಾಣದಿರುವುದು ಟಿಕೆಟ್‌ ಅಕಾಂಕ್ಷಿಗಳ ಆತಂಕಕ್ಕೆ ಕಾರಣವಾ ಗಿದೆ. ಈಗಾಗಲೆ ತಾಲೂಕು ಬಿಜೆಪಿ ಹಲವು ಗುಂಪುಗಳಾಗಿ ಒಡೆದು ಹೋಗಿದ್ದು ಎಲ್ಲಾರನ್ನು ಒಟ್ಟಾಗಿ ಕರೆದೊಯ್ಯುವ ನಾಯಕತ್ವದ ಹಾಗೂ ಪಕ್ಷದ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ.

ಮೂರು ಬಾರಿ ಬಿಜೆಪಿ ವೈಫ‌ಲ್ಯ: ಸಕಲೇಶಪುರ ವಿಧಾನಸಭಾ ಕ್ಷೇತ್ರ ಮೀಸಲಾತಿಯಾದ ನಂತರ ಬಿಜೆಪಿ ಮೂರು ಬಾರಿ ಖಾತೆ ತೆರೆಯಲು ವಿಫ‌ಲವಾಗಿದೆ. 2008 ರಲ್ಲಿ ಕ್ಷೇತ್ರ ಮೀಸಲಾತಿಯಾದಾಗ ಬಿಜೆಪಿಯಿಂದ ನಿವೃತ್ತ ತಹಶೀಲ್ದಾರ್‌ ನಿರ್ವಾಣಯ್ಯ ಸ್ಪರ್ಧಿಸಿದ್ದು ಅವರು 2ನೇ ಸ್ಥಾನ ಪಡೆದರು. 2013ರಲ್ಲಿ ಚುನಾವಣೆ ಬಿಜೆಪಿ ಎರಡು ಪಕ್ಷವಾಗಿ ಹೋಳಾಗಿದ್ದರಿಂದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣ ಸ್ವಾಮಿ 4ನೇ ಸ್ಥಾನಕ್ಕೆ ಕುಸಿದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಮೂಲದ ಉದ್ಯಮಿ ನಾರ್ವೆ ಸೋಮ ಶೇಖರ್‌ ಕೆಲವೇ ಸಾವಿರ ಮತ ಗಳಿಂದ ಸೋತರು. ಇದಾದ ನಂತರ ಕ್ಷೇತ್ರದತ್ತ ಅವರು ಕ್ಷೇತ್ರದಲ್ಲಿ ಆಗಾಗ ಕಾಣಿಸಿಕೊಂಡರು ಸಹ ಪ್ರಬಲ ವಾಗಿ ಪಕ್ಷ ಸಂಘಟನೆ ಮಾಡುವಲ್ಲಿ ವಿಫ‌ಲರಾಗಿದ್ದಾರೆ.

ಸಿಮೆಂಟ್‌ ಮಂಜುನಾಥ್‌ ಕ್ರಿಯಶೀಲ: ಸೋಮ ಶೇಖರ್‌ ಅನುಪಸ್ಥಿತಿ ಬಳಸಿಕೊಂಡ ಸ್ಥಳೀಯ ಉದ್ಯಮಿ ಸಿಮೆಂಟ್‌ ಮಂಜುನಾಥ್‌, ಕಳೆದ ನಾಲ್ಕು ವರ್ಷಗಳಿಂದ ನಿರಂ ತರವಾಗಿ ಕ್ಷೇತ್ರ ಸುತ್ತುತ್ತಿದ್ದು ಪಕ್ಷದ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಹಾಸನ ವಿಧಾನಸಭಾ ಕ್ಷೇತ್ರದ ಡೈನಾಮಿಕ್‌ ಶಾಸಕ ಪ್ರೀತಮ್‌ ಗೌಡರವರ ಶ್ರೀರಕ್ಷೆ ಸಿಮೆಂಟ್‌ ಮಂಜುರವರ ಮೇಲಿದೆ. ಆದರೆ, ಮಾಜಿ ಶಾಸಕ ಎಚ್‌.ಎಂ ವಿಶ್ವ ನಾಥ್‌ ಸಿಮೆಂಟ್‌ ಮಂಜುರವರನ್ನು ಅಷ್ಟಾಗಿ ಗಂಭೀರ ವಾಗಿ ಪರಿಗಣಿಸದಿರುವುದು ಪಕ್ಷದಲ್ಲಿನ ಗುಂಪು ಗಾರಿಕೆ ಎದ್ದು ಕಾಣುವಂತಾಗಿದೆ. ಹಾಗಾಗಿ ಸಿಮೆಂಟ್‌ ಮಂಜು ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

ಚುರುಕಾದ ಜೆಡಿ ಎಸ್‌, ಕಾಂಗ್ರೆಸ್‌: ಈಗಾಗಲೆ ಜೆಡಿ ಎಸ್‌ ವತಿಯಿಂದ ಎಚ್‌.ಡಿ ರೇವಣ್ಣ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ, ರೈತ ಸಂಕ್ರಾಂತಿ ಕಾರ್ಯಕ್ರಮ ನಡೆದಿದೆ. ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರಜಾ ಧ್ವನಿ ಯಶಸ್ವಿ ಕಾರ್ಯ ಕ್ರಮ ನಡೆ ದಿದೆ. ಕಾಂಗ್ರೆಸ್‌ ಟಿಕೆಟ್‌ ಅಕಾಂಕ್ಷಿಗಳ ಕುರಿತು ಕಾರ್ಯಕರ್ತರಿಂದ ಅಭಿ ಪ್ರಾಯ ಸಭೆ ನಡೆಸಿದ್ದಾರೆ. ಆದರೆ, ಬಿಜೆಪಿ ವತಿಯಿಂದ ಯಾವುದೆ ಗಂಭೀರ ಕಾರ್ಯಕ್ರಮಗಳು ನಡೆಯು ತ್ತಿಲ್ಲ, ಬೂತ್‌ ವಿಜಯ ಕಾರ್ಯಕ್ರಮ ನಡೆಯುತ್ತಿದ್ದು ಅದು ಸಹ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಶನಿವಾರ ಬೂತ್‌ ವಿಜಯ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಆಗಮಿಸಿದ್ದು ಆದರೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ಕ್ರಮದಲ್ಲಿ ಭಾಗಿಯಾಗಿರಲಿಲ್ಲ.

ಹೈಕಮಾಂಡ್‌ ನಿರ್ಲಕ್ಷ್ಯ: ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸಹ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದು ಕ್ಷೇತ್ರಕ್ಕೆ ಬಂದು ಹಲವು ತಿಂಗಳುಗಳೆ ಆಗಿದೆ. ಜಿಲ್ಲಾ ಉಸ್ತು ವಾರಿ ಸಚಿವರ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಕಾರ್ಯಕರ್ತರ ಯಾವುದೆ ಕೆಲಸಗಳು ಆಗುತ್ತಿಲ್ಲ. ಒಟ್ಟಾರೆಯಾಗಿ ಹೈಕಮಾಂಡ್‌ ನಿರ್ಲಕ್ಷ್ಯ ತಾಲೂಕು ಬಿಜೆಪಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ.

ಅಭ್ಯರ್ಥಿ ಆಯ್ಕೆ ಗೊಂದಲ: ಈಗಾಗಲೆ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕಳೆದ ಬಾರಿ ಪರಾಜಿತ ಅಭ್ಯರ್ಥಿ ನಾರ್ವೆ ಸೋಮ ಶೇಖರ್‌ ಹಾಗೂ ಸ್ಥಳೀಯ ಮುಖಂಡ ಸಿಮೆಂಟ್‌ ಮಂಜು ಅವರ ಹೆಸರು ಮುಂಚೂಣಿಯಲ್ಲಿದ್ದು ಇಲ್ಲೂ ಸಹ ಸೋಮಶೇಖರ್‌ ಬಣ ಹಾಗೂ ಮಂಜು ಬಣಗಳೆಂದು ಕಾರ್ಯಕರ್ತರು ಇಭ್ಬಾಗವಾಗಿದ್ದಾರೆ. ಇದರ ನಡುವೆ ಚುನಾವಣೆ ದೃಷ್ಟಿಯಿಂದ ಯಾರಿಗೂ ಗೊತ್ತೆ ಇಲ್ಲದ ಬೆಂಗಳೂರು ಮೂಲದ ಪುರು ಷೋತ್ತಮ್‌ ಎಂಬುವರು ಕ್ಷೇತ್ರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿರುವುದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಕಾಂಗ್ರೆಸ್‌ ಟಿಕೆಟ್‌ ಅಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಗೊರೂರು ವೆಂಕಟೇಶ್‌ ರವರನ್ನು ಬಿಜೆಪಿ ಕೆಲ ಮುಖಂಡರು ಪಕ್ಷಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಗುಂಪು ಗಾರಿಕೆ ಉಂಟಾಗುವ ಸಾಧ್ಯತೆಯಿದೆ. ಇನ್ನು ಹಾಸನ ಕ್ಷೇತ್ರದ ಡೈನಾಮಿಕ ಶಾಸಕ ಪ್ರೀತಂ ಗೌಡ ಅವರನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿಸಿದೆ. ಅವರು ಸಹ ಇತ್ತ ತಲೆ ಹಾಕಿಲ್ಲ. ಬಿಜೆಪಿ ಮತದಾರರನ್ನು ಕ್ಷೇತ್ರದಲ್ಲಿ ಹೊಂದಿದ್ದರು ಸಹ ಹೈಕ ಮಾಂಡ್‌ ನಿರ್ಲಕ್ಷ್ಯ ಹಾಗೂ ಗುಂಪುಗಾರಿಕೆಯೇ ಬಿಜೆ ಪಿಗೆ ಶಾಪವಾಗಲಿದೆ ಎನ್ನಲಾಗಿದೆ.

ಸಕಲೇಶಪುರ ಪುರಸಭೆಯಲ್ಲಿ ವ್ಯಾಪಕ ಭ್ರಷ್ಟ ಚಾರ ನಡೆಯುತ್ತಿದೆ. ಈ ಕುರಿತು ಮುಖ್ಯಾಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೆ ಕ್ರಮ ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ. ಈ ಹಿನ್ನೆಲೆ ಪುರಸಭಾ ಭ್ರಷ್ಟಚಾರದ ವಿರುದ್ಧ ನಾವೇ ಹೋರಾಟ ಮಾಡುತ್ತೇವೆ.ದೀಪಕ್‌, ಪುರಸಭೆ ನಾಮನಿರ್ದೇಶಿತ ಸದಸ್ಯರು, ಸಕಲೇಶಪುರ

ನಿರ್ಲಕ್ಷ್ಯದ ಕುರಿತು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾ ಗುತ್ತದೆ. ಪುರಸಭೆ ಭ್ರಷ್ಟಾಚಾರದ ವಿರುದ್ಧ ಬೃಹತ್‌ ಹೋರಾಟವನ್ನು ಪಕ್ಷದ ವತಿಯಿಂದ ನಡೆ ಸಲು ಸಕಲ ಸಿದ್ಧತೆ ಮಾಡಿ ಕೊ ಳ್ಳ ಲಾ ಗಿದೆ. ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರ. ಮಂಜುನಾಥ್‌ ಸಂಗಿ, ಬಿಜೆಪಿ ತಾಲೂಕು ಅಧ್ಯಕ್ಷರು

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.