ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಿ


Team Udayavani, Sep 13, 2020, 4:40 PM IST

ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಿ

ರಾಮನಾಥಪುರ: ಕಾವೇರಿ ನದಿ ದಂಡೆಯಲ್ಲಿದ್ದರೂ ರಾಮನಾಥಪುರಕ್ಕೆ ಶುದ್ಧ ಕುಡಿಯುವ ನೀರಿಲ್ಲದೆ ಕಲುಷಿತ ನೀರನ್ನೇ ಬಳಸಬೇಕಾದ ಪರಿಸ್ಥಿತಿ ಇದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ರಾಮನಾಥಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಹಲವು ವರ್ಷಗಳ ಹಿಂದೆ ಅಳವಡಿಸಿರುವ ಪಂಪ್‌ಹೌಸ್‌ ಹಾಗೂ ಪೈಪುಗಳು ಶಿಥಿಲವಾಗಿವೆ. ಗ್ರಾಮ ಪಂಚಾಯ್ತಿಯು ನದಿಯಿಂದ ನೀರು ಶುದ್ಧೀಕರಿಸದೇ, ಕಲುಷಿತ ನೀರು ಪೂರೈಕೆ ಮಾಡುತ್ತಿದೆ. ನದಿಯಲ್ಲಿ ಕೆಲವು ಬಾರಿ ಮಲಿನ ನೀರು ಹರಿಯುವಾಗ ಆದೇ ನೀರನ್ನು ಕುಡಿಯಬೇಕಾದ ಅನಿವಾರ್ಯ ಸ್ಥಿತಿ ರಾಮನಾಥಪುರದ ಜನರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಂತ್ರ ಅಳವಡಿಸಿ: ಜೀವ ನದಿ ಕಾವೇರಿಯಲ್ಲಿ ನೀರಿನ ಕೊರತೆ ಇಲ್ಲ. ಆದರೆ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಮಳೆಗಾಲದಲ್ಲಂತೂ ನದಿಯಿಂದ ಪೂರೈಕೆಯಾಗುವ ನೀರನ್ನು ಬಟ್ಟಿ ಇಳಿಸಿಕೊಂಡು ಕುಡಿಯುವ ಹೀನಾಯ ಸ್ಥಿತಿ ಇದೆ.ಆದ್ದರಿಂದ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಸಮರ್ಪಕವಾಗಿ ನೀರಿನ ಪೂರೈಕೆ ಮಾಡಬೇಕೆಂದು ನಾಗರಿಕರು, ಸಂಘಸಂಸ್ಥೆಗಳು, ಸಿŒ ಶಕ್ತಿ ಸಂಘಗಳು ಜನಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಚರಂಡಿ ನೀರೂ ಸೇರುತ್ತೆ: ರಾಮನಾಥಪುರದ ಬಸವೇಶ್ವರ ವೃತ್ತ, ಕೋಟವಾಳು, ಬಿಳಗುಲಿ, ರಘುಪತಿಕೊಪ್ಪಲು, ಜನತಾಹೌಸ್‌, ಐ.ಬಿ.ಸರ್ಕಲ್‌ ರಸ್ತೆ, ಮತ್ತಿತರ ಕಡೆ ಹೋಗುವ ರಸ್ತೆಗಳ ಪಕ್ಕದಲ್ಲಿ ಹತ್ತಾರು ವರ್ಷಗಳ ಹಿಂದೆ ಅಳವಡಿಸಿರುವ ಕುಡಿಯುವ ನೀರಿನ ಪೈಪುಗಳು, ವಾಲ್‌Ìಗಳು ಕೆಲವು ಕಡೆಗಳಲ್ಲಿ ಒಡೆದುಹೋಗಿದ್ದು, ಚರಂಡಿಯ ನೀರೂ ಕುಡಿಯುವ ನೀರಿನ ಪೈಪುಗಳಲ್ಲಿ ಸೇರಿಕೊಂಡು ಕಲುಷಿತ ನೀರು ಮನೆಗಳಿಗೆ ಪೂರೈಕೆಯಾಗಿರುವ ಉದಾಹರಣೆಗಳಿವೆ ಎಂದು ದೂರಿದ್ದಾರೆ.

ಕಾವೇರಿ ನದಿಯಿಂದ ನೀರೆತ್ತುವ ಜಾಗದ ನದಿಯ ದಂಡೆಯಲ್ಲಿ ಮಾಟ-ಮಂತ್ರ ನಡೆಯುತ್ತಿವೆ. ಗ್ರಾಮ ಪಂಚಾಯ್ತಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಲ್ಲಿ ವಾಮಾಚಾರ ಮಾಡುವುದನ್ನು ತಡೆಹಿಡಿಯಬೇಕು ಎಂದೂ ಸ್ಥಳೀಯರು ಆಗ್ರಹಿಸಿದ್ದಾರೆ.

ಯಂತ್ರಕ್ಕೆ ಪ್ರಸ್ತಾವನೆ : ರಾಮನಾಥಪುರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗ ಬೇಕಾದರೆ ನೀರು ಶುದ್ಧೀಕರಣ ಯಂತ್ರದ ಅಳವಡಿಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಹಾಸನ ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ನೀರು ಶುದ್ಧೀಕರಣ ಯಂತ್ರದ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಪಿಡಿಒ ವಿಜಯಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನದಿಯ ದಂಡೆಯಲ್ಲಿ ಮಾಟ- ಮಂತ್ರ ತಡೆ ಹಿಡಿಯುವುದು ಸೇರಿದಂತೆ ಸ್ವತ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ರಾಮನಾಥಪುರಕ್ಕೆ ಕುಡಿಯುವ ನೀರಿನ ಕೊರತೆಯೇನೂ ಇಲ್ಲ. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ನೀರಿನ ಮೂಲದಿಂದ ಬಳಕೆದಾರರವರೆಗೆ ಬರುವ ಮಾರ್ಗದಲ್ಲಿ ಉಂಟಾಗಬಹುದಾದ ಸೋರಿಕೆಯಿಂದಾಗಿ ನೀರು ವ್ಯರ್ಥವಾಗುವುದರ ಜೊತೆಗೆ ಕಲುಷಿತಗೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಅತಿಸಾರ, ಕರಳುಬೇನೆ, ರಕ್ತಭೇದಿ, ಕಾಲರಾ ಮುಂತಾದಕಾಯಿಲೆಗಳು ಹರಡದಂತೆ ತಡೆಯಬೇಕಾದರೆ ಶುದ್ಧಕುಡಿಯುವ ನೀರು ಪೂರೈಕೆಯಾಗಬೇಕು. ಗ್ರಾಪಂ ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಆನಂತರ ಇನ್ನಿತರೆ ಕೆಲಸಗಳನ್ನು ಮಾಡಲಿ. ಎಚ್‌.ಎಸ್‌.ಶಂಕರ್‌, ಜಿಪಂ ಮಾಜಿ ಸದಸ್ಯ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hassan

Holiday: ಹಾಸನ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 25) ರಜೆ ಘೋಷಣೆ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Sakaleshpura

National Highway ಅವೈಜ್ಞಾನಿಕ ಕಾಮಗಾರಿ: ಕೇಂದ್ರ ಸಚಿವ ಗಡ್ಕರಿಗೆ ಮಾಹಿತಿ

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Minister K.N. Rajanna: ಕೆಲಸ ಪೂರ್ಣಗೊಳಿಸುವವರೆಗೆ ಟೋಲ್‌ ವಸೂಲಿಗೆ ಬಿಡುವುದಿಲ್ಲ

Minister K.N. Rajanna: ಕೆಲಸ ಪೂರ್ಣಗೊಳಿಸುವವರೆಗೆ ಟೋಲ್‌ ವಸೂಲಿಗೆ ಬಿಡುವುದಿಲ್ಲ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.