ವಿದ್ಯಾಗಮ ಯೋಜನೆ ಸ್ಥಗಿತ; ಮಲೆನಾಡಿನಲ್ಲಿ ಸಂತಸ

ಕುಗ್ರಾಮಗಳಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಶಿಕ್ಷಕರು

Team Udayavani, Oct 11, 2020, 4:04 PM IST

ವಿದ್ಯಾಗಮ ಯೋಜನೆ ಸ್ಥಗಿತ; ಮಲೆನಾಡಿನಲ್ಲಿ ಸಂತಸ

ಸಕಲೇಶಪುರ: ಕೋವಿಡ್ ಆತಂಕ ನಡುವೆ ಸರ್ಕಾರ ಕಾರ್ಯಗತಗೊಳಿಸಿದ್ದ ವಿದ್ಯಾಗಮ ಯೋಜನೆಯನ್ನು ಈಗ ಸ್ಥಗಿತಗೊಳಿಸಿದ್ದು, ಮಲೆನಾಡು ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ 170 ಸರ್ಕಾರಿ ಪ್ರಾಥಮಿಕ, 15 ಸರ್ಕಾರಿ ಪ್ರೌಢಶಾಲೆ ಇವೆ.400 ಶಿಕ್ಷಕರು ಪ್ರಾಥಮಿಕ ವಿಭಾಗ, 100 ಶಿಕ್ಷಕರು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜಾಘೋಷಣೆಮಾಡಿ,ಮಕ್ಕಳುಅಕ್ಷರಾಭ್ಯಾಸದಿಂದ ಹಿಂದೆ ಉಳಿಯಬಾರದು ಎಂದು ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಂದಿತ್ತು.

ವಾರದಲ್ಲಿ ಒಂದು ಅಥವಾ ಎರಡು ದಿನ ಶಿಕ್ಷಕರು ಹೆಚ್ಚು ಮಕ್ಕಳಿರುವ ಜಾಗಗಳಿಗೆ ಹೋಗಿ ಅವರನ್ನೆಲ್ಲ ಒಂದು ಕಡೆ ಸೇರಿಸಿ ಹತ್ತಿರವಿರುವ ಸಮುದಾಯ ಭವನ, ದೇವಸ್ಥಾನ, ಮರದ ನೆರಳಿನಲ್ಲಿ ತರಗತಿ ಮಾಡಲಾಗುತ್ತಿತ್ತು. ಆದರೆ, ವಿದ್ಯಾಗಮ ಯೋಜನೆಯಡಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದ ಕೆಲ ಶಿಕ್ಷಕರಿಗೆ ಕೋವಿಡ್ ಸೋಂಕು ಬಂದಿರುವುದು. ಕೆಲವರು ಸಾವನ್ನಪ್ಪಿರುವುದು ತಾಲೂಕಿನ ಶಿಕ್ಷಕರಲ್ಲೂ ಆತಂಕ ತರಿಸಿತ್ತು. ಜೊತೆಗೆಪೋಷಕರು ಸಹ ಭಯದಲ್ಲೇ ತಮ್ಮ ಮಕ್ಕಳನ್ನು ವಿದ್ಯಾಗಮಕ್ಕೆ ಕಳುಹಿಸುತ್ತಿದ್ದರು.

ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯತ್ತಿದ್ದ ಕಾರಣ, ಕುಗ್ರಾಮಗಳಿಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲದೆ, ಶಿಕ್ಷಕರು ಪರದಾಡುತ್ತಿದ್ದರು. ಇನ್ನು ವಿದ್ಯಾಗಮ ಯೋಜನೆಯಲ್ಲಿ ಗ್ರಾಮಗಳ ಹತ್ತಿರದಲ್ಲಿರುವ ಸಮುದಾಯ ಭವನ, ಬಯಲು, ದೇವಸ್ಥಾನದಂತಹ ಜಾಗ ಹುಡುಕಿಕೊಂಡು ಮಕ್ಕಳಿಗೆ ಪಾಠ ಮಾಡಬೇಕಾಗಿತ್ತು. ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಮೂತ್ರ ವಿಸರ್ಜಿಸಲು ಸಹ ಶಿಕ್ಷಕರು ಪರದಾಡಬೇಕಾಗಿತ್ತು. ಗ್ರಾಮಾಂತರಪ್ರದೇಶಗಳಲ್ಲಿಆರೋಗ್ಯ ಭದ್ರತೆಯೂ ಇರದ ಕಾರಣ ಮಹಿಳಾ ಶಿಕ್ಷಕರು ಆತಂಕಗೊಂಡಿದ್ದರು. ಹಲವು ಸಂದರ್ಭಗಳಲ್ಲಿ ಮಕ್ಕಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಸಾಧ್ಯವಾಗಿತ್ತು. ಜೊತೆಗೆ ಮಕ್ಕಳನ್ನು ನಿಯಂತ್ರಿಸಲು ಶಿಕ್ಷಕರಿಗೆ ಸವಾಲಿನ ಕೆಲಸವಾಗಿತ್ತು.

ಕೋವಿಡ್ ಭಯ ಶಿಕ್ಷಕರನ್ನುಕಾಡುತ್ತಿತ್ತು. ಈ ಎಲ್ಲಾ ಕಾರಣಗಳಿಂದ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಬೇಕೆಂಬ ಕೂಗು ತಾಲೂಕಿನಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಲೇ ಇತ್ತು. ಸರ್ಕಾರ ಈಗ ಸ್ಥಗಿತಗೊಳಿಸಿದ್ದಕ್ಕೆ ಶಿಕ್ಷಕರ ವಲಯ ಸಂತಸ ವ್ಯಕ್ತಪಡಿಸಿದೆ.

ವಿದ್ಯಾಗಮಯೋಜನೆ ಸ್ಥಗಿತಗೊಳಿಸಿದಕ್ರಮ ಸರಿ ಇದೆ. ಅಪರಿಚಿತ ಸ್ಥಳಗಳಲ್ಲಿಯಾವುದೇ ಭದ್ರತೆ ಇಲ್ಲದೆ ತರಗತಿ ನಡೆಸುತ್ತಿದ್ದರಿಂದಾಗಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿತ್ತು. ತಮ್ಮಣ್ಣ ಶೆಟ್ಟರು, ತಾಲೂಕು ಅಧ್ಯಕ್ಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ವಿದ್ಯಾಗಮಯೋಜನೆ ಸ್ಥಗಿತಗೊಳಿಸಿದ ಸರ್ಕಾರದಕ್ರಮ ಸರಿಯಿದೆ. ಒಂದು ವರ್ಷ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾದ್ರೆ ಏನು ಆಗುವುದಿಲ್ಲ. ಬರುವ ಜೂನ್‌ನಿಂದ ಶಾಲೆ ಆರಂಭಿಸಲಿ, ಆ ವೇಳೆಗೆ ಕೋವಿಡ್ ಸೋಂಕುಕಡಿಮೆಯಾಗುವ ಸಾಧ್ಯತೆಯಿದೆ. ಎಚ್‌.ಕೆ.ಕುಮಾರಸ್ವಾಮಿ, ಶಾಸಕ.

 

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hassan

Holiday: ಹಾಸನ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 25) ರಜೆ ಘೋಷಣೆ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Sakaleshpura

National Highway ಅವೈಜ್ಞಾನಿಕ ಕಾಮಗಾರಿ: ಕೇಂದ್ರ ಸಚಿವ ಗಡ್ಕರಿಗೆ ಮಾಹಿತಿ

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Minister K.N. Rajanna: ಕೆಲಸ ಪೂರ್ಣಗೊಳಿಸುವವರೆಗೆ ಟೋಲ್‌ ವಸೂಲಿಗೆ ಬಿಡುವುದಿಲ್ಲ

Minister K.N. Rajanna: ಕೆಲಸ ಪೂರ್ಣಗೊಳಿಸುವವರೆಗೆ ಟೋಲ್‌ ವಸೂಲಿಗೆ ಬಿಡುವುದಿಲ್ಲ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.