Udayavni Special

ಗ್ರಾಮ ವಾಸ್ತವ್ಯ: ಅರ್ಜಿಗಳ ಸುರಿಮಳೆ

Team Udayavani, Feb 21, 2021, 4:01 PM IST

ಗ್ರಾಮ ವಾಸ್ತವ್ಯ: ಅರ್ಜಿಗಳ ಸುರಿಮಳೆ

ಆಲೂರು: ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ದು ಅವರ ಅಹವಾಲು ಪರಿಹರಿಸುವ ಸಲುವಾಗಿ “ಜಿಲ್ಲಾಧಿಕಾರಿ ನಡೆ, ಗ್ರಾಮಗಳ ಕಡೆ’ ಕಾರ್ಯಕ್ರಮ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ನಡೆಯಿತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಶಿರೀನ್‌ತಾಜ್‌ ಸಾರ್ವಜನಿಕರಿಂದ ಅರ್ಜಿ ಪಡೆದರು. ಗ್ರಾಮಕ್ಕೆ ಮೂಲ ಸೌಕರ್ಯಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ವಿವರ ಪಡೆದರು.

ಕೆಲವು ಪ್ರಕರಣ ಸ್ಥಳದಲ್ಲಿಯೇ ಬಗೆ ಹರಿಸಿ, ಇನ್ನೂ ಕೆಲವು ಪ್ರಕರಣ ಸರ್ಕಾರದ ನಿಯಮಗಳನ್ವಯ ಮಾಡಬೇಕಾ ಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಅರ್ಜಿಗಳನ್ನು ವಹಿಸಿಕೊಟ್ಟು, ಜನ ಸಾಮಾನ್ಯರನ್ನು ಕಚೇರಿಗೆ ಅಲೆಸದೇಕಾಲಮಿತಿಯೊಳಗೆ ಮುಗಿಸಿ ಕೊಡಬೇಕೆಂದು ತಾಕೀತು ಮಾಡಿದರು.

ಜಾಗ ಹಸ್ತಾಂತರ: ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದರು. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ಇನ್ನೂ ಸಿಂಗಾಪುರ ಗ್ರಾಮದ ಸ.ನಂ. 82ರ ಜಾಗಕ್ಕೆ ಭೇಟಿ ನೀಡಿ 20 ಗುಂಟೆಜಾಗವನ್ನು ಅಳತೆ ಮಾಡಿ ಪಂಚಾಯತ್‌ ರಾಜ್‌ ಇಲಾಖೆಗೆ ಹಸ್ತಾಂತರ ಮಾಡಿದರು.ತಹಶೀಲ್ದಾರ್‌ ಶಿರೀನ್‌ತಾಜ್‌ ಮಾತನಾಡಿ, ಕಾರ್ಯಕ್ರಮದಲ್ಲಿ 82 ಅರ್ಜಿ ಬಂದಿದ್ದು, ಅದರಲ್ಲಿ 14 ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗಿದೆ. ಉಳಿದವುಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಮಾಡಬೇಕಿದೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಿಕೊಟ್ಟು ಶೀಘ್ರ ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ಸ್ಮಶಾನ ಜಾಗವನ್ನು ಅಳತೆ ಮಾಡಿ ಪಂಚಾಯತ್‌ ರಾಜ್‌ ಇಲಾಖೆಗೆ ವಹಿಸಿಕೊಡಲಾಗಿದೆ. ಇಂದಿನ ಗ್ರಾಮ ವಾಸ್ತವ್ಯ ಕಾರ್ಯ ಕ್ರಮ ಯಶಸ್ವಿಯಾಗಿ ನಡೆದಿದೆಂದರು. ಪಾಳ್ಯ ಗ್ರಾಪಂ ಅಧ್ಯಕ್ಷ ಎಸ್‌.ಎನ್‌. ಪ್ರಕಾಶ್‌ ಮಾತನಾಡಿ, ಜಿಲ್ಲಾಧಿಕಾರಿಗಳನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಹೆಚ್ಚು ಅರ್ಜಿಗಳು ಬಂದಿದ್ದು, ಕೆಲವು ಅರ್ಜಿಗಳು ಸ್ಥಳದಲ್ಲಿಯೇ ಇತ್ಯರ್ಥವಾಗಿವೆ. ಇನ್ನೂ ಕೆಲವು ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು, ಅರ್ಧ ಎಕರೆ ಜಾಗವನ್ನು ಸ್ಮಶಾನಕ್ಕೆ ಕಂದಾಯ ಇಲಾಖೆ ಗ್ರಾಪಂಗೆ ವಹಿಸಿಕೊಟ್ಟಿದೆ ಎಂದರು.

ತಾಪಂ ಸದಸ್ಯ ಸಿ.ವಿ.ಲಿಂಗರಾಜು ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆಗೆ ಎನ್ನುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇರುವುದರಿಂದ ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ಅದ್ದ ರಿಂದ ಎಲ್ಲಾ ಹಳ್ಳಿಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ಆಗಬೇಕಾಗಿದೆ. ಸರ್ಕಾರ ಪ್ರತಿ ತಿಂಗಳು ಇಂತಹಕಾರ್ಯಕ್ರಮ ಹಮ್ಮಿಕೊಂಡು ಜನಸಾಮಾನ್ಯರ ಸಮಸ್ಯೆ ಇತ್ಯರ್ಥಪಡಿಸ ಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಟಾಪ್ ನ್ಯೂಸ್

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಸಾಲ ವಸೂಲಿ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಿ: ಆರ್‌ಬಿಐಗೆ ಹೈಕೋರ್ಟ್‌ ಸಲಹೆ

ಸಾಲ ವಸೂಲಿ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಿ: ಆರ್‌ಬಿಐಗೆ ಹೈಕೋರ್ಟ್‌ ಸಲಹೆ

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ

ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ

ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ : ಸಿ.ಡಿ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ : ಸಿ.ಡಿ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ಸ್ಪಷ್ಟನೆ

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಫಿ ತೋಟದಲ್ಲಿ ಈಗ ಹೂ ನಗೆ

ಕಾಫಿ ತೋಟದಲ್ಲಿ ಈಗ ಹೂ ನಗೆ

ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ

ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ

ವಿಮಾನ ನಿಲ್ದಾಣ: ಮತ್ತೆ ಗರಿಗೆದರಿದ ನಿರೀಕ್ಷೆ

ವಿಮಾನ ನಿಲ್ದಾಣ: ಮತ್ತೆ ಗರಿಗೆದರಿದ ನಿರೀಕ್ಷೆ

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

ಸಕಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಸಕಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

MUST WATCH

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಹೊಸ ಸೇರ್ಪಡೆ

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಆರು ವರ್ಷಗಳ ಬಳಿಕ “ಇಂಡೋ – ಪಾಕ್‌ ಎಕ್ಸ್‌ಪ್ರೆಸ್‌’ ಜತೆಯಾಟ

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಐಸಿಸಿ ತಿಂಗಳ ಆಟಗಾರ: ಅಶ್ವಿ‌ನ್‌, ರೂಟ್‌, ಮೇಯರ್ ರೇಸ್‌

ಸಾಲ ವಸೂಲಿ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಿ: ಆರ್‌ಬಿಐಗೆ ಹೈಕೋರ್ಟ್‌ ಸಲಹೆ

ಸಾಲ ವಸೂಲಿ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಿ: ಆರ್‌ಬಿಐಗೆ ಹೈಕೋರ್ಟ್‌ ಸಲಹೆ

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್‌, ಪಾಂಡೆ

ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ

ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.