Udayavni Special

ಪರಸ್ತ್ರೀಯೊಂದಿಗೆ ಪರಾರಿಯಾದ ಪತಿ ಮೇಲೆ ರಾಡ್‌ನಿಂದ ದಾಳಿ 

Team Udayavani, Aug 23, 2017, 3:54 PM IST

09.jpg

ಅರಸೀಕೆರೆ: ಮಧ್ಯವಯಸ್ಕ ಇಬ್ಬರು ಮಕ್ಕಳ ತಂದೆಯೊಬ್ಬ ಇಬ್ಬರು ಮಕ್ಕಳ ತಾಯಿಯೊಂದಿಗೆ ಪರಾರಿಯಾಗಿ ಪತ್ನಿ ಯಿಂದ ಹೊಡೆಸಿಕೊಂಡ ಘಟನೆ ಮಂಗಳವಾರ ಇಲ್ಲಿನ ಗಂಡಸಿ ಹ್ಯಾಂಡ್‌ಪೋಸ್ಟ್‌ ಬಳಿ ನಡೆದಿದೆ.

ಸತೀಶ್‌ ಎಂಬ ಹಾರ್ಡ್‌ವೇರ್‌ ಅಂಗಡಿ ಮಾಲಿಕ ತನ್ನ ಸ್ನೇಹಿತ, ಪಕ್ಕದ ಮನೆಯ ನಿವಾಸಿ ಮಂಜುನಾಥ್‌ ಎಂಬಾತನ ಹೆಂಡತಿ ಮಂಜುಳಾ ಎಂಬಾಕೆಯೊಂದಿಗೆ ಪರಾರಿಯಾಗಿ ಮೈಸೂರಿನಲ್ಲಿ ಮನೆ ಮಾಡಿಕೊಂಡಿದ್ದ.  

ಮೇ ತಿಂಗಳಿನಲ್ಲಿ ಪರಾರಿಯಾಗಿದ್ದ  ಸತೀಶ್‌ ಮಂಗಳವಾರ ಏಕಾಏಕಿ ಅಂಗಡಿಯಲ್ಲಿ ಪ್ರತ್ಯಕ್ಷ  ಆಗಿದ್ದು , ವಿಷಯ ತಿಳಿದು ಹಾರ್ಡ್‌ ವೇರ್‌ ಅಂಗಡಿಗೆ ದೌಡಾಯಿಸಿದ ಪತ್ನಿ ರುಕ್ಷಿಣಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಳೆ. ರೊಚ್ಚಿಗೆದ್ದ ಆಕೆ ಕಬ್ಬಿಣದ ರಾಡ್‌ ನಿಂದ ಹಲ್ಲೆ ನಡೆಸಿದ್ದಾಳೆ. 

ಅವಾಚ್ಯ ಶಬ್ಧಗಳಿಂದ ಇಬ್ಬರು ಪರಸ್ಪರ ನಿಂದಿಸಿಕೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.  ಅಂಗಡಿಯ ಬಳಿಯಿದ್ದ ಕೆಲವರು ಗಂಡ-ಹೆಂಡಿರ ಜಗಳ ನೋಡಿ ಪುಕ್ಕಟೆ ಮನೋರಂಜನೆ ಪಡೆದರೆ, ಕೆಲವರು ಬಂದು ಜಗಳ ಬಿಡಿಸಿದರು. 

ಪತ್ನಿಗೆ ಡೈವೋರ್ಸ್‌ ನೀಡುವುದಾಗಿ ಸತೀಶ್‌ ಹೇಳಿದ್ದಾನೆ. ಈ ಸಂಬಂಧ ಪ್ರಕರಣ ಕೋರ್ಟ್‌ನಲ್ಲಿ  ಪ್ರಕರಣ ನಡೆಯುತ್ತಿದ್ದು ಆಕೆಗೂ ಹಲವರ ಜೊತೆ ಅನೈತಿಕ ಸಂಬಂಧ ಇದೆ ಎಂದು ಮಾಧ್ಯಮಗಳ ಎದುರು ಆರೋಪಿಸಿದ್ದಾನೆ. 

20 ವರ್ಷದ ಹಿಂದೆ ಸತೀಶ್‌ಗೆ ರುಕ್ಮಿಣಿಯೊಂದಿಗೆ ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಮಂಜುಳಾ ಜೊತೆಗಿನ ಅನೈತಿಕ ಸಂಬಂಧ ಬಯಲಾಗಿ ಗಂಡಸಿ ಠಾಣೆಯ ಮೆಟ್ಟಿಲೇರಿ ರಾಜಿ ಪಂಚಾಯತಿಯೂ ನಡೆದಿತ್ತು ಎಂದು ವರದಿಯಾಗಿದೆ. 

20 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಂಜುಳಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. 

ಸತೀಶ್‌ ನನ್ನ ಪತ್ನಿ ಮತ್ತು ಮಕ್ಕಳ  ತಲೆ ಕಡೆಸಿ ಮೈಸೂರಿಗೆ ಕರೆದೊಯ್ದು ಇರಿಸಿಕೊಂಡಿದ್ದಾನೆ ಎಂದು ಮಂಜುನಾಥ್‌ ಆರೋಪಿಸಿದ್ದಾನೆ. 

ಆದರೆ ಆರೋಪವನ್ನು ತಳ್ಳಿ ಹಾಕಿದ್ದು, ಮಂಜುನಾಥ್‌ ನನ್ನ ಬಳಿ 6 ಲಕ್ಷ ಸಾಲ ಪಡೆದಿದ್ದ, ಆತ ದಿನ ನಿತ್ಯವೂ ಕುಡಿದು ಬಂದು ಮಂಜುಳಾಗೆ ಹಲ್ಲೆ ನಡೆಸುತ್ತಿದ್ದ. ನಾನು ಆಕೆಗೆ ಸಹಾಯ ಮಾಡಿದ್ದೇನೆ ಹೊರತು ಮೈಸೂರಿಗೆ ಕರೆದೊಯ್ಯಲಿಲ್ಲ ಎಂದಿದ್ದಾನೆ. 

ಮಂಜುನಾಥ್‌ ಮಂಜುಳಾ ದಂಪತಿಯೂ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಕರಣ ಕೋರ್ಟ್‌ನಲ್ಲಿದೆ. 

ಗಂಡಸಿ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Untitled-1

ಹೆಚ್ಚಿದ ಶುಲ್ಕ ಹೊರೆ

ಇಂದಿನಿಂದ 20  ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕ್ಕಮಗಳೂರು-ಬೇಲೂರು ಹೆದ್ದಾರಿಯಲ್ಲಿ ಹೆಚ್ಚಿದ ಗುಂಡಿ

ಚಿಕ್ಕಮಗಳೂರು-ಬೇಲೂರು ಹೆದ್ದಾರಿಯಲ್ಲಿ ಹೆಚ್ಚಿದ ಗುಂಡಿ

ಹುಡಾ ನೂತನ ಬಡಾವಣೆ ನಿರ್ಮಾಣ ವಿಳಂಬ

ಹುಡಾ ನೂತನ ಬಡಾವಣೆ ನಿರ್ಮಾಣ ವಿಳಂಬ

ಹವಾಮಾನ ವೈಪರೀತ್ಯದಿಂದ ಕಾಫಿ ಮಣ್ಣು ಪಾಲು

ಹವಾಮಾನ ವೈಪರೀತ್ಯದಿಂದ ಕಾಫಿ ಮಣ್ಣು ಪಾಲು

ಅನಾಥ ಮೂಕಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೆರವು

ಅನಾಥ ಮೂಕಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೆರವು

ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿಲ್ಲ : ಕೋಡಿಮಠ ಶ್ರೀ

ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿಲ್ಲ : ಕೋಡಿಮಠ ಶ್ರೀ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

Untitled-1

ಹೆಚ್ಚಿದ ಶುಲ್ಕ ಹೊರೆ

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

ಇಂದಿನಿಂದ 20  ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.