
ಅಸುರಕ್ಷಿತ ಲೈಂಗಿಕ ಸಂಬಂಧ ಏಡ್ಸ್ ಸೋಂಕಿಗೆ ಆಹ್ವಾನ
Team Udayavani, Dec 6, 2021, 1:39 PM IST

ಅರಸೀಕೆರೆ: ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಬಹುತೇಕ ಯುವ ಜನಾಂಗದಲ್ಲಿ ಹರಡುತ್ತಿರುವ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿಮೂಡಿಸುವುದು ಆರೋಗ್ಯ ಇಲಾಖೆಯ ಜತೆಗೆ ಸರ್ಕಾರದ ಎಲ್ಲಾ ಇಲಾಖೆಗಳ ಅತ್ಯಂತಜವಾಬ್ದಾರಿಯುತ ಕೆಲಸವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್.ನಾಗಪ್ಪ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕಿನಗಂಡಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಿತ್ತಿ ಪತ್ರಗಳ ರಚನಾ ಸ್ಪರ್ಧೆ ಹಾಗೂ ಜನಜಾಗೃತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಏಡ್ಸ್ ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಹರಡುವ ಸೋಂಕಾಗಿದ್ದು,ಸೋಂಕಿತ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕಶಕ್ತಿ ಕುಗ್ಗಿಸುವಂತೆ ಮಾಡಿ ಅವಕಾಶವಾದಿ ರೋಗ ರುಜಿನಗಳು ದೇಹವನ್ನು ಪ್ರವೇಶಿಸುವಂತೆ ಮುಕ್ತ ಆಹ್ವಾನವನ್ನು ನೀಡುತ್ತದೆ ಎಂದರು.
ಮಾನವ ಸಂಪನ್ಮೂಲಕ್ಕೆ ಮಾರಕವಾಗಿರುವ ಏಡ್ಸ್ ಶೇ.31 ಹದಿಹರೆಯದ ಯುವಕರಲ್ಲಿಕಂಡುಬರುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಅರಸೀಕೆರೆತಾಲೂಕು 3ನೇ ಸ್ಥಾನದಲ್ಲಿದೆ. ಆದಕಾರಣಯುವಕರು ಜಾಗೃತರಾಗಬೇಕಿದೆ ಎಂದರು. ಈ ಬಗ್ಗೆಜಾಗೃತಿ ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆಭಿತ್ತಿ ಪತ್ರ ಬರೆಯುವ ಸ್ಪರ್ಧೆಯನ್ನು ನಡೆಸುತ್ತಿದ್ದು,ಪ್ರಥಮ ಬಹುಮಾನ 3000 ರೂ. ದ್ವಿತೀಯಬಹುಮಾನ 2.500 ರೂ. ತೃತೀಯ ಬಹುಮಾನ1.500 ರೂಗಳನ್ನು ನೀಡಲಾಗುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ನಾವು ಎಚ್ಚರದಿಂದ್ದರೆ ಏಡ್ಸ್ ಅಪಾಯಕಾರಿಯಲ್ಲ. ಏಡ್ಸ್ ಸೋಂಕಿತರು ಮುಖ್ಯವಾಗಿ ತಮ್ಮಲ್ಲಿ ಆತ್ಮಸ್ಥೈರ್ಯವನ್ನುಬೆಳೆಸಿಕೊಳ್ಳುವ ಜತೆಗೆ ಸರ್ಕಾರ ಉಚಿತವಾಗಿನೀಡುವ ಚಿಕಿತ್ಸೆಯನ್ನು ಕಾಲಕಾಲಕ್ಕೆ ಪಡೆಯಬೇಕು ಎಂದರು.
ಅಧ್ಯಕ್ಷತೆಯನ್ನು ಗಂಡಸಿ ಸರ್ಕಾರಿ ಪ್ರೌಡಶಾಳೆಮುಖ್ಯ ಶಿಕ್ಷಕಿ ಶೋಭಾ ಅವರು ವಹಿಸಿದ್ದರು, ಗಂಡಸಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮರಾಜು, ದಂತ ವೈದ್ಯೆಡಾ.ಸೌಮ್ಯ, ಆರೋಗ್ಯ ಇಲಾಖೆ ಆಪ್ತಸಮಾಲೋಚಕರಾದ ತಿಮ್ಮೇಗೌಡ, ಆರೋಗ್ಯ ನಿರೀಕ್ಷಕರಾದ ಜಾಬ್ಬೀರ್ ಪಾಷಾ ಇತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Server problem: ಸರ್ವರ್ ಸಮಸ್ಯೆ; ಪಡಿತರದಾರರ ಅಲೆದಾಟ

Alcohol: ಮದ್ಯ ಸೇವನೆ ಚಾಲೆಂಜ್-ಅರ್ಧ ಗಂಟೆಯಲ್ಲಿ 90 ಎಂಎಲ್‌ನ 10 ಪ್ಯಾಕೆಟ್ ಸೇವಿಸಿ ಸಾವು

POP free Ganeshotsav: ಪಿಒಪಿ ಮುಕ್ತ ಗಣೇಶೋತ್ಸವಕ್ಕೆ ಭಕ್ತರ ಸ್ಪಂದನೆ

Channarayapatna: ತಹಶೀಲ್ದಾರ್ ಕುರ್ಚಿ ಕಾಳಗ: ದಿನವೂ ಕಡತಕ್ಕೆ ಬದಲಾಗುತ್ತೆ ಸಹಿ

Aluru: ಸಿಡಿಮದ್ದು ಸ್ಫೋಟದಿಂದ ಮನೆಗಳಿಗೆ ಹಾನಿ