
100 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮೇಲ್ದರ್ಜೆಗೆ: ಕೋಟ
Team Udayavani, Mar 8, 2023, 6:20 AM IST

ರಾಣಿಬೆನ್ನೂರ: ರಾಜ್ಯದಲ್ಲಿರುವ 830 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 100 ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಪಿಯು ಹಂತದವರೆಗೆ ಶಿಕ್ಷಣ ಒದಗಿಸಲು ಚಿಂತನೆ ನಡೆದಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನವೋದಯ ಶಾಲೆಗೆ ಸರಿಗಟ್ಟುವ ರೀತಿಯಲ್ಲಿ ಮೊರಾರ್ಜಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಕೆಲಸ ನಿರ್ವಹಿಸುತ್ತಿವೆ. ಶಿಕ್ಷಕರಾದವರು ಮಕ್ಕಳಿಗೆ ಮನೆಯ ಅನುಭವ ಸಿಗುವಂತೆ ವಾತಾವರಣ ಸೃಷ್ಟಿಸಬೇಕು. ಜತೆಗೆ ಬಡವರಿಗಾಗಿಯೇ ನಿರ್ಮಿತವಾದ ಶಾಲೆಗಳಲ್ಲಿ ಪಾರದರ್ಶಕತೆ ಇರಲಿ.
ಸರಕಾರ ವಸತಿ ಶಾಲೆಯಲ್ಲಿ ಅಭ್ಯಸಿಸುವ ಮಕ್ಕಳಿಗೆ ಕರಾಟೆ ತರಬೇತಿ ನೀಡಲು 1,800 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಕೆಲವೊಂದು ವಸತಿ ಶಾಲೆಯಲ್ಲಿ ತರಬೇತಿ ನೀಡದಿರುವುದು ಖೇದಕರ ಸಂಗತಿ. ಅಂತಹ ಶಾಲೆ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
