ಮೇ 24ರಂದು ಸಾಮೂಹಿಕ ವಿವಾಹ


Team Udayavani, Mar 20, 2020, 5:42 PM IST

hv-tdy-1

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಶ್ರೀ ಕಾಂತೇಶ ದೇವಸ್ಥಾನದಲ್ಲಿ ಮೇ 24ರಂದು ಜಿಲ್ಲಾಡಳಿತದ ವತಿಯಿಂದ ಸಪ್ತಪದಿ ಸಾಮೂಹಿಕ ವಿವಾಹ ಜರುಗಿಸಲು ನಿರ್ಧರಿಸಲಾಗಿದೆ. ಮದುವೆಯಾಗಲು ಇಚ್ಛಿಸುವ ಜೋಡಿಗಳು ಏ. 24ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಮದುವೆಯಾಗುವ ತಲಾ ಒಂದು ಜೋಡಿಗೆ 55ಸಾವಿರ ರೂ. ವೆಚ್ಚ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಸಚಿವರು, ಶಾಸಕರು ಹಾಗೂ ತಹಶೀಲ್ದಾರರನ್ನು ಸಂಪರ್ಕಿಸಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ಜರುಗಿಸಲು ಸುಸಜ್ಜಿತವಾದ ದೇವಾಲಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಒಂದು ವಿವಾಹ ಜೋಡಿಗೆ ಸರ್ಕಾರದಿಂದ 55,000 ರೂ. ಖರ್ಚು ಮಾಡಲಾಗುತ್ತದೆ. ವಿವಾಹವಾಗುವ ವಧುವಿಗೆ 40,000 ರೂ. ವೆಚ್ಚದಲ್ಲಿ 8ಗ್ರಾಂ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು, ವರನಿಗೆ ಐದು ಸಾವಿರ ವೆಚ್ಚದಲ್ಲಿ ಶರ್ಟ್‌, ಶಲ್ಯ, ಪಂಚೆ ಹಾಗೂ ಹೂವಿನ ಹಾರ ಖರೀದಿಸಲು ನೀಡಲಾಗುವುದು. ವಧುವಿಗೆ 10 ಸಾವಿರ ರೂ. ವೆಚ್ಚದಲ್ಲಿ ರೇಷ್ಮೆ ಧಾರೆ ಸೀರೆ, ರವಿಕೆ ಕಣ ಹಾಗೂ ಹೂವಿನ ಹಾರ ಖರೀದಿಸಲು ನೀಡಲಾಗುವುದು. ವಿವಾಹಕ್ಕೆ ಆಗಮಿಸುವ ವಧು-ವರರ ಬಂಧುಗಳಿಗೆ ಉಟೋಪಚಾರ ಹಾಗೂ ಇತರೇ ಅವಶ್ಯಕ ವ್ಯವಸ್ಥೆಗಳನ್ನು ದೇವಳ ಸಮಿತಿಯಿಂದ ಅಥವಾ ಸರಕಾರದ ನಿಧಿಯಿಂದ ಭರಿಸಲಾಗುವುದು ಎಂದು ವಿವರಿಸಿದರು.

ಹೊಸದಾಗಿ ಜಿಲ್ಲೆಯ ಆರು ತಾಲೂಕಿನ ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಣಿಬೆನ್ನೂರು ತಾಲೂಕಿನ ಗುಡಿಹೊನ್ನತ್ತಿಯ ಸಿ ವರ್ಗದ ಶ್ರೀ ಹೊನ್ನತ್ತೇಮ್ಮ ದೇವಿ ದೇವಸ್ಥಾನ, ಹಿರೇಕೆರೂರು ತಾಲೂಕಿನ ಬಿ ವರ್ಗದ ಶ್ರೀ ದುರ್ಗಾದೇವಿ ದೇವಸ್ಥಾನ, ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನ ಬಿ ವರ್ಗದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಸವಣೂರು ತಾಲೂಕಿನ ಕಾರಡಗಿಯ ಸಿ ವರ್ಗದ ಶ್ರೀವೀರಭದ್ರೇಶ್ವರ ದೇವಸ್ಥಾನ, ಶಿಗ್ಗಾವಿ ತಾಲೂಕಿನ ಸಿ ವರ್ಗದ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನ, ಹಾನಗಲ್ಲ ತಾಲೂಕಿನ ಸಿ ವರ್ಗದ ಶ್ರೀ ಗ್ರಾಮದೇವಿ ದೇವಸ್ಥಾನಗಳಲ್ಲಿ ಮೇ 24ರಂದು ಸಪ್ತಪದಿಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ತಾಲೂಕಿನ ತಾಲೂಕು ಕಚೇರಿ, ಆಡಳಿತ ಶಿರಸ್ತೆದಾರರಿಗೆ ಅರ್ಜಿಗಳನ್ನು ನೀಡಿ, ಅರ್ಜಿದಾರರಿಂದ ಅಗತ್ಯ ದಾಖಲಾತಿ ಪಡೆದುಕೊಳ್ಳಲು ಮತ್ತು ಮಾಹಿತಿಯನ್ನು ನೀಡಲು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಅರ್ಜಿ ಸಲ್ಲಿಸಲು ಏ. 24 ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು.

ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ವಿತರಿಸಿದ ಮತ್ತು ಸ್ವೀಕರಿಸಿದ ಅರ್ಜಿಗಳ ಅಂಕಿ-ಅಂಶಗಳ ದೇವಾಲಯವಾರು, ಜಿಲ್ಲಾವಾರು ಮಾಹಿತಿಯನ್ನು ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ಸಂಕಲದ ಸಿಬ್ಬಂದಿ ನೇಮಿಸಲಾಗಿದೆ. ಆಯಾ ತಾಲೂಕಿಗೆ ಸಂಬಂಧಿಸಿದ ವಿವಾಹ ನೆರವೇರಿಸಲು ಆಯ್ಕೆಯಾಗಿರುವ ದೇವಾಲಯಗಳಲ್ಲಿಕರಪತ್ರಗಳು, ಪ್ಲೆಕ್ಸ್‌ ಹಾಗೂ ಬ್ಯಾನರ್‌ ಅಳವಡಿಸಿ ಅಗತ್ಯ ಪ್ರಚಾರಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು. ವಿವಾಹಕ್ಕೆ ಅವಶ್ಯಕವಿರುವ ಚಿನ್ನದ ತಾಳಿ, ಗುಂಡು, ವರನಿಗೆ ಪಂಚೆ, ಶಲ್ಯ ಹಾಗೂ ವಧುವಿಗೆ ಧಾರೆ ಸೀರೆಗಾಗಿ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಗುರುತಿಸಿರುವ ದೇವಸ್ಥಾನಗಳಲ್ಲಿ ಸಭಾಂಗಣವಿದೆ. ಇನ್ನುಳಿದ ಕಡೆಗಳಲ್ಲಿ ಶಾಮಿಯಾನ ಪೆಂಡಾಲ್‌ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ. 08375-249062 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಎಸ್‌.ಯೊಗೇಶ್ವರ, ಸಾಮೂಹಿಕ ವಿವಾಹದ ಶಿರಸ್ತೇದಾರ ಅಮೃತ ಪಾಟೀಲ ಮಾಧ್ಯಮಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

14-hospete

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತನ ಕೈ ಹಿಡಿದ ತೈವಾನ್‌ ಪಿಂಕ್‌: ಒಂದು ಎಕರೆಯಲ್ಲಿ ಲಕ್ಷ ರೂ. ಆದಾಯ

ರೈತನ ಕೈ ಹಿಡಿದ ತೈವಾನ್‌ ಪಿಂಕ್‌: ಒಂದು ಎಕರೆಯಲ್ಲಿ ಲಕ್ಷ ರೂ. ಆದಾಯ

b-c-patil

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ

Anandswamy Gaddadevarmath on haveri defeat

Haveri; ಮೋದಿ‌ ಅಲೆಗಿಂತ ಬಿಜೆಪಿ ಅಲೆ ಹೆಚ್ಚಿತ್ತು: ಆನಂದಸ್ವಾಮಿ ಗಡ್ಡದೇವರಮಠ

ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

Bribe: ಬಾಂಡ್ ನೀಡಲು ಫಲಾನುಭವಿಗಳಿಂದ ಲಂಚ… ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ

Bribe: ಬಾಂಡ್ ನೀಡಲು ಫಲಾನುಭವಿಗಳಿಂದ ಲಂಚ… ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

16-koppala

ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ: ಗುಳಗಣ್ಣನವರ್

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.