ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ: ಜಿಲ್ಲಾಧಿಕಾರಿ ಸೂಚನೆ

Team Udayavani, Oct 6, 2020, 5:56 PM IST

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ: ಜಿಲ್ಲಾಧಿಕಾರಿ ಸೂಚನೆ

ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ನಿಗಾ ವಹಿಸಬೇಕು. ಪದವೀಧರರ ಚುನಾವಣೆ ಎಂದು ಹಗುರವಾಗಿ ತೆಗೆದುಕೊಳ್ಳಬೇಡಿ, ಸಾಮಾನ್ಯ
ಚುನಾವಣೆಯಂತೆ ಗಂಭೀರವಾಗಿ ಪರಿಗಣಿಸಿ. ನೀತಿ ಸಂಹಿತೆ ಉಲ್ಲಂಘಿಸಿದರೆ ಆಯೋಗದ ನಿರ್ದೇಶನದಂತೆ ಗಂಭೀರ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತದೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿ ತಹಶೀಲ್ದಾರರು, ಮುದ್ರಕರು, ಕೇಬಲ್‌ ಟಿ.ವಿ ಪ್ರಸಾರಕರು ಹಾಗೂ ವಾಣಿಜ್ಯೋದ್ಯಮಿಗಳೊಂದಿಗೆ ಅವರು ಮಾತನಾಡಿದರು.

ಚುನಾವಣೆ ಪ್ರಚಾರ ಸಾಮಗ್ರಿಗಳ ಮುದ್ರಣ, ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮ ಜಾಹೀರಾತು ಪ್ರಕಟಣೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಸಾರ, ಚುನಾವಣಾ ಪ್ರಚಾರ, ಸಭೆ-ಸಮಾರಂಭಗಳಿಗೆ ಸಮುದಾಯ ಭವನ, ಕಲ್ಯಾಣ ಮಂಟಪ, ಸಭಾಂಗಣ ಬಾಡಿಗೆ ಕೊಡುವ ಮುನ್ನ ಹಾಗೂ ಸಭೆ-ಸಮಾರಂಭ ನಡೆಸುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತು ಸಂಬಂಧಿ ಸಿದವರ ಸಭೆ ನಡೆಸಿ ಮಾಹಿತಿ ನೀಡಲು ಸೂಚನೆ ನೀಡಿದರು.

ಇದನ್ನೂ ಓದಿ :ಭೌತಶಾಸ್ತ್ರದ ನೊಬೆಲ್ ಪ್ರಕಟ; ಪೆನ್ರೋಸ್, ರೀನ್ಹಾರ್ಡ್ ಮತ್ತು ಆಂಡ್ರಿಯಾ ಗೇಜ್ ಗೆ ಗೌರವ

ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳ ಪ್ರಕಟಣೆ ಮುನ್ನ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಅನುಮತಿ ಪಡೆಯಬೇಕು. ಟಿ.ವಿ ಕೇಬಲ್‌ಗ‌ಳಲ್ಲಿ ಪ್ರಸಾರವಾಗುವ ರಾಜಕೀಯ, ಸಂದರ್ಶನ, ಜಾಹೀರಾತು ಹಾಗೂ ಸೊðàಲಿಂಗ್‌ಗಳ ಪ್ರಸಾರಕ್ಕೆ ಮುನ್ನ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕರಪತ್ರ, ಫ್ಲೆಕ್ಸ್‌, ಬ್ಯಾನರ್‌ ಒಳಗೊಂಡಂತೆ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಿಸುವ ಮುನ್ನ ಮುದ್ರಿಸುವ ವ್ಯಕ್ತಿಯಿಂದ ವಿವರ ಪಡೆಯಬೇಕು. ಮುದ್ರಿಸಿದ ಕರಪತ್ರದ ಮೇಲೆ ಕಡ್ಡಾಯವಾಗಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಹೀಗೆ ಮುದ್ರಿಸಿದ ಕರಪತ್ರ ಫ್ಲೆಕ್ಸ್‌ ಬ್ಯಾನರ್‌ಗಳ ನಾಲ್ಕು ಪ್ರತಿಗಳ ಸಹಿತ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ :ಮಾಸ್ಕ್ ಧರಿಸದ ಮಹಿಳೆಗೆ ದಂಡ! ಆಕ್ಷೇಪಿಸಿದ ಕಾರ್ಪೊರೇಟರ್ ಕಾಲು ಮುರಿದ ಪೊಲೀಸರು

ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳ ಪ್ರದರ್ಶನ ಮಾಡುವಂತಿಲ್ಲ. ಈಗಾಗಲೇ ವಿವಿಧ ಯೋಜನೆ ನಾಮಫಲಕಗಳಲ್ಲಿ ಸಚಿವರು, ಶಾಸಕರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳ ಭಾವಚಿತ್ರಗಳು ಇದ್ದರೆ ಮರೆಮಾಚಿಸಬೇಕು ಎಂದರು.

ಯಾವುದೇ ಹೊಸ ಕಾಮಗಾರಿ ಆರಂಭಿಸುವಂತಿಲ್ಲ, ಹೊಸ ಯೋಜನೆ ಘೋಷಿಸುವಂತಿಲ್ಲ, ಈಗಾಗಲೇ ಕಾಮಗಾರಿಗಳು ಆರಂಭಗೊಂಡಿದ್ದರೆ ಮುಂದುವರಿಸಬಹುದು, ಕೆಡಿಪಿ, ಜಿಪಂ ಸಭೆ ನಡೆಸಬಹುದು. ಆದರೆ ಹೊಸ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದರು.

ಇದನ್ನೂ ಓದಿ :ನೋಂದಣಿ ರಹಿತ ಕ್ರಿಮಿನಾಶಕ ಮಾರಾಟ: ಕೃಷಿ ಜಾಗೃತ ದಳದ ಅಧಿಕಾರಿಗಳಿಂದ 3 ಅಂಗಡಿ ಸೀಝ್

ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಮಾತನಾಡಿ, ಅನಧಿಕೃತ ಹಣಕಾಸಿನ ವಹಿವಾಟು ಹಾಗೂ ಸಾಗಾಣಿಕೆ ಮೇಲೆ ನೀಗಾ ವಹಿಸಬೇಕು. ಆಯೋಗದ ಮಾರ್ಗಸೂಚಿಯಂತೆ 50 ಸಾವಿರಕ್ಕಿಂತ ಹೆಚ್ಚು ಹಣ ಕೊಂಡೊಯ್ದರೆ ಸೂಕ್ತ ದಾಖಲೆ ಹೊಂದಿರಬೇಕು. ವಿವಿಧ ವಾಣಿಜ್ಯ-ವಹಿವಾಟು ನಡೆಸುವ ವರ್ತಕರು ದೈನಂದಿನ ವ್ಯವಹಾರದ ಹಣ ಜಮಾವಣೆ ಕುರಿತಂತೆ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು.

ಕುಕ್ಕರ್‌, ಐರನ್‌ ಬಾಕ್ಸ್‌, ಸೀರೆ, ಬೆಳ್ಳಿ, ಚಿನ್ನದ ಸಾಮಗ್ರಿ ಸಗಟಾಗಿ ಖರೀದಿ, ಮಾರಾಟ ಹಾಗೂ ದಾಸ್ತಾನು ವಹಿವಾಟಿನ ಮೇಲೆ ನಿಗಾವಹಿಸಿ ಚುನಾವಣಾ ಕಾರಣಗಳಿಗಾಗಿ ವಹಿವಾಟು ನಡೆದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ :ಕಾಂಗ್ರೇಸ್ ಸಂಸದ ಡಿ.ಕೆ. ಸುರೇಶ್ ಗೂ ಕೋವಿಡ್ ಸೋಂಕು ದೃಢ!

ಸಭೆಯಲ್ಲಿ ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ್‌, ಹಾವೇರಿ ತಹಶೀಲ್ದಾರ್‌ ಜಿ.ಎಸ್‌. ಶಂಕರ, ವಾರ್ತಾಧಿಕಾರಿ ಬಿ.ಆರ್‌. ರಂಗನಾಥ, ವಿಡಿಯೋ ಸಂವಾದದ ಮೂಲಕ ವಿವಿಧ ತಾಲೂಕ ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು, ತಾಪಂ ಕಾರ್ಯನಿರ್ವಹಣಾಧಿ ಕಾರಿಗಳು, ಮುದ್ರಣ ಸಂಸ್ಥೆ ಮಾಲೀಕರು, ಕೇಬಲ್‌ ಟಿ.ವಿ ಮಾಲೀಕರು ಹಾಗೂ ವಾಣಿಜ್ಯೋದ್ಯಮಿಗಳು ಇದ್ದರು.

Ad

ಟಾಪ್ ನ್ಯೂಸ್

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Haveri: ಅಳಿದುಳಿದ ಬೆಳೆಗೆ ವನ್ಯಜೀವಿ ಕಾಟ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

If Ravikumar has a conscience, he should apologize publicly: H.K. Patil

Haveri: ರವಿಕುಮಾರಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಎಚ್.ಕೆ.ಪಾಟೀಲ್

11

Haveri: ಮುಳ್ಳುಸಜ್ಜೆಗೆ ಕಳೆಗುಂದಿದ ಬೆಳೆ

Shiggavi: ಜನಿಸಿದ 38 ದಿನಕ್ಕೆ ತಾಯಿ ಜತೆ ಓಂಕಾರ ಜಪಿಸಿದ ಹಸುಗೂಸು!

Shiggavi: ಜನಿಸಿದ 38 ದಿನಕ್ಕೆ ತಾಯಿ ಜತೆ ಓಂಕಾರ ಜಪಿಸಿದ ಹಸುಗೂಸು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.