
ಚುನಾವಣೆ ನಡೆಯುವುದು ಧಮ್, ತಾಕತ್ ಮೇಲಲ್ಲ ಅಭಿವೃದ್ಧಿ ಮೇಲೆ: ಬಿಸಿ ಪಾಟೀಲ್
Team Udayavani, Jan 25, 2023, 12:38 PM IST

ಹಾವೇರಿ: ಇಂದು ಹಿರೇಕೇರೂರು ಕ್ಷೇತ್ರದಲ್ಲಿ 461 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದೇವೆ. 38 ಕೋಟಿ ರೂಪಾಯಿ ಮಡ್ಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡುತ್ತಾ ಇದ್ದೇವೆ. ಇದರಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗುತ್ತಿದ್ದಾರೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದರು.
ಹಿರೇಕೇರೂರಿನಲ್ಲಿ ಮಾತನಾಡಿದ ಅವರು, 2018 ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ತಾಲೂಕಿಗೆ 6 ನೀರಾವರಿ ಯೋಜನೆ ತಂದಿದ್ದೇನೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ನಮ್ಮ ತಾಲೂಕಿಗೆ ಬರಗಾಲ ಬರಲ್ಲ ಅದೊಂದು ತೃಪ್ತಿ ನನಗೆ ಇದೆ ಮಾತು ಕೊಟ್ಟಂತೆ ಮಹಿಳೆಯರಿಗೆ ಗಾರ್ಮೆಂಟ್ಸ್ ಮಾಡ್ತೀವಿ ಅಂದಿದ್ದೆ ಅದನ್ನೂ ಮಾಡಿದ್ದೇನೆ. ನಾನು ಏನು ಮಾಡಿದ್ದೀನಿ ಅಂತ ಕಿರು ಹೊತ್ತಿಗೆ ಬಿಡುಗಡೆ ಮಾಡುತ್ತೇನೆ. ಏನೇನು ಕೆಲಸ ಆಗಿದೆ ಅಂತ ಮನೆ ಮನೆಗೆ ಕಿರು ಹೊತ್ತಿಗೆ ಬಿಡುಗಡೆ ಮಾಡಿ, ಜನತೆಗೆ ಈ ಬಗ್ಗೆ ವರದಿ ಒಪ್ಪಿಸುವೆ ಎಂದರು.
ಯು ಬಿ ಬಣಕಾರ್ ಧಮ್ಮು ತಾಕತ್ತಿನ ಬಗ್ಗೆ ಮಾತಾಡಿದ್ದಾರೆ. ಅವರ ಧಮ್ಮು, ತಾಕತ್ತು ಮೂರು ಬಾರಿ ನೋಡಿ ಆಗಿದೆ, ಅವರ ದಮ್ಮು ಗೊತ್ತಾಗಿದೆ. ನನಗೆ ಧಮ್ ಇರೋದಕ್ಕೆ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನ ಮಾನ ಬಂದಿತ್ತು. ಧಮ್ , ತಾಕತ್ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಕೆಲಸ ಮಾಡಿದಾರೆ ಅಂತ ಪುಸ್ತಕ ಬಿಡುಗಡೆ ಮಾಡಲಿ, ಆವಾಗ ಒಪ್ಪಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ:
ಮೀರ್ ಸಾಧಿಕ್ ರಂಥ ಜನ ನಮ್ಮ ಸುತ್ತ ಮುತ್ತಲೇ ಇರ್ತಾರೆ. ಇದೇ ಬಣಕಾರ್ ನಮ್ ಜೊತೆಗೆ ಇದ್ದು ಈಗ ಕಾಂಗ್ರೆಸ್ ಸೇರಿದ್ದಾರೆ ಅಂಥವರಿಂದ ರಕ್ಷಣೆ ಅಗತ್ಯ. ನಾವು ವ್ಯಭಿಚಾರ ಏನು ಮಾಡಿಲ್ಲ. ರಮೇಶ್ ಜಾರಕಿಹೊಳಿಯವರದ್ದು ಅನವಶ್ಯ ಬಿಡುಗಡೆ ಮಾಡಿದರು. ಆದರೆ ಏನಾಯ್ತು? ಬಿ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ಕಾಯುವ ಕೆಲಸ ಮಾಡಲೇಬೇಕು ಈಗ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮದ ಕಾಲ, ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.
ಸಿಜನತಾ ದಳದಲ್ಲಿ ಇದ್ದಿದ್ದರೆ ಕಾಲ ಕಸದಂತೆ ನೋಡುತ್ತಿದ್ದರು ಅಂತ ಸಿದ್ದರಾಮಯ್ಯ ಹೇಳಿದ್ದರು. ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದ್ದೇ ನಮ್ಮಿಂದ. ಅವರು ನಮಗೆ ಅಭಿನಂದನೆ ತಿಳಿಸಬೇಕು ಆದರೆ ಅವರು ಅಭಿನಂದನೆ ಆ ರೂಪದಲ್ಲಿ ಹೇಳ್ತಾರೆ ಅಷ್ಟೇ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ಜೂನ್- ಜುಲೈನಲ್ಲಿ ಇಸ್ರೋದಿಂದ ಸೂರ್ಯನ ಅಧ್ಯಯನ? ಪೇ ಲೋಡ್ ಸ್ವೀಕರಿಸಿದ ಬಾಹ್ಯಾಕಾಶ ಸಂಸ್ಥೆ

ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ: ತಿ.ನರಸೀಪುರದಲ್ಲಿ ಕೊನೆಗೂ ಸೆರೆ ಸಿಕ್ಕ ಚಿರತೆ

ಗ್ರಾಹಕರ ಮನ ಗೆದ್ದರೆ ಅಂತಾರಾಷ್ಟ್ರೀಯ ಮಾರುಕಟ್ಟೆ: ಸಿಎಂ ಬೊಮ್ಮಾಯಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
