Udayavni Special

ಉತ್ತಮ ಮುಂಗಾರು; ಕೃಷಿ ಚಟುವಟಿಕೆ ಶುರು


Team Udayavani, Jun 8, 2021, 2:52 PM IST

ಉತ್ತಮ ಮುಂಗಾರು; ಕೃಷಿ ಚಟುವಟಿಕೆ ಶುರು

ರಾಣಿಬೆನ್ನೂರ: ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ರೈತರು ಹೊಲ ಹಸನು ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ ಮೇ ತಿಂಗಳ ವಾಡಿಕೆ ಮಳೆ 135 ಮಿಮೀ ಇದ್ದು, ಜೂ.7ರವರೆಗೆ144 ಮಿಮೀ ಮಳೆಯಾಗಿದೆ. ಈ ಮಳೆ ಭೂಮಿ ಸಿದ್ಧಪಡಿಸಲು ಹಾಗೂ ಬಿತ್ತನೆಗೆ ಪೂರಕವಾಗಿದೆ. ತಾಲೂಕಿನಲ್ಲಿ 90,475 ಹೆಕ್ಟೇರ್‌ ಭೌಗೋಳಿಕ ಕ್ಷೇತ್ರಹೊಂದಿದ್ದು, ಇದರಲ್ಲಿ 68,900 ಹೆಕ್ಟೇರ್‌ ಸಾಗುವಳಿ ಕ್ಷೇತ್ರ ಇರುತ್ತದೆ. ತಾಲೂಕಿನಲ್ಲಿ 53,391 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಭತ್ತ 6,250 ಹೆಕ್ಟೇರ್‌, ಗೋವಿನಜೋಳ39,000 ಹೆಕ್ಟೇರ್‌, ಹತ್ತಿ 970 ಹೆಕ್ಟೇರ್‌, ಶೇಂಗಾ 900 ಹೆಕ್ಟೇರ್‌, ಹೆಸರು 200 ಹೆಕ್ಟೇರ್‌, ಸೂರ್ಯಕಾಂತಿ 115 ಹೆಕ್ಟೇರ್‌, ತೊಗರಿ 2,575 ಹೆಕ್ಟೇರ್‌, ಜೋಳ 400 ಹೆಕ್ಟೇರ್‌, ರಾಗಿ 50 ಹೆಕ್ಟೇರ್‌, ತೃಣಧಾನ್ಯ 100 ಹೆಕ್ಟೇರ್‌, ಇತರೆ ಬೆಳೆಗಳು 1181 ಹೆಕ್ಟೇರ್‌, ಕಬ್ಬುಹೊಸದು 200 ಹೆಕ್ಟೇರ್‌, ಕುಳೆ ಕಬ್ಬು 1450 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ.

ಈರುಳ್ಳಿ 4200 ಹೆಕ್ಟೇರ್‌, ಬೆಳ್ಳುಳ್ಳಿ 1250 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಹಾವೇರಿ ಜಿಲ್ಲೆ ದೇವಿ ಹೊಸೂರು ತೋಟಗಾರಿಕೆ ವಿಸ್ತರಣಾ ಕೇಂದ್ರದಲ್ಲಿ ಬೆಳ್ಳುಳ್ಳಿ ಬೀಜ ದರ ಪ್ರತಿ ಕೆಜಿಗೆ 100 ರೂ. ಇದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ “ಉದಯವಾಣಿ’ಗೆ ತಿಳಿಸಿದ್ದಾರೆ.

ಈರುಳ್ಳಿ, ಬೆಳ್ಳುಳ್ಳಿ, ಹೈಬ್ರೀಡ್‌ ಜೋಳ, ಹತ್ತಿ, ಶೇಂಗಾ, ಸೋಯಾಬೀನ್‌ ಸೇರಿದಂತೆ ಇತರೆ ತೃಣ ಧಾನ್ಯಗಳ ಬಿತ್ತನೆಗೆ ರಂಟೆ ಸಾಲು ಬಿಡಲು ರೈತರು ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ಮೇಡ್ಲೆರಿ, ಕುಪ್ಪೇಲೂರು, ರಾಣಿಬೆನ್ನೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳು, ಐದು ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ನಗರದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.

ರೈತರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಬಿತ್ತನೆ ಬೀಜ ಖರೀದಿಸಬೇಕು. ಮುಗಿ ಬೀಳಬಾರದೆಂದು ರೈತರಿಗೆ ಕೃಷಿ ಅಧಿಕಾರಿಗಳು ಸೂಚನೆ ನೀಡಿದ್ದು, ಯೂರಿಯಾ 10,000 ಟನ್‌, ಡಿಎಪಿ 4,353 ಟನ್‌, ಎಂಒಪಿ 1092 ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಗೋವಿನಜೋಳ ಮತ್ತು ಹತ್ತಿ, ಈರುಳ್ಳಿ ಉತ್ತಮ ಬೆಳೆ ಬಂದರೂ ಸೂಕ್ತ ಬೆಲೆ ಸಿಗಲಿಲ್ಲ.

ಹೆಚ್ಚಿನ ಮಳೆಗೆ ಈರುಳ್ಳಿ-ಬೆಳ್ಳುಳ್ಳಿ ಹೊಲದಲ್ಲಿಯೇ ಕೊಳೆತು ಹೋಯಿತು. ದರ ಕೂಡ ಸಿಗಲಿಲ್ಲ. ಲಾಕ್‌ಡೌನ್‌ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಯಿತು ಎನ್ನುತ್ತಾರೆ ತಾಲೂಕಿನ ಮಾಕನೂರು ಗ್ರಾಮದ ರೈತ ಈರಣ್ಣ ಹಲಗೇರಿ ತಿಳಿಸಿದರು.

ಹಾವೇರಿಯ ಫೆಡರೇಷನ್‌ನಲ್ಲಿ ಗೊಬ್ಬರ ಸಾಕಷ್ಟು ದಾಸ್ತಾನು ಇದೆ. ತಾಲೂಕಿಗೆ 18,900 ಮೆಟ್ರಿಕ್‌ ಟನ್‌ ಗೊಬ್ಬರ ಬೇಡಿಕೆ ಇದೆ.ಕೃಷಿ ಪರಿಕರ ಮಾರಾಟಗಾರರು ಎಂಆರ್‌ಪಿ ದರದಲ್ಲಿ ಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.-ಎಚ್‌.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ

 

-ಮಂಜುನಾಥ .ಎಚ್‌.ಕುಂಬಳೂರ

ಟಾಪ್ ನ್ಯೂಸ್

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

j14srs4

ಅನ್‌ಲಾಕ್‌ಗೂ ಮೊದಲೇ ಮುಂಡಿಗೆಕೆರೆಗೆ ಬಂದವು ಬೆಳ್ಳಕ್ಕಿಗಳು!

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23hvr4a

ನಿತ್ಯ ಕನಿಷ್ಟ 10 ಸಾವಿರ ಜನರಿಗೆ ವ್ಯಾಕ್ಸಿನ್‌ ನೀಡಿ

22hvr4

ನದಿ ಪಾತ್ರದ ಗ್ರಾಮಗಳಿಗೆ ಡಿಸಿ ಭೇಟಿ

21hvr1

ನದಿ ಪಾತ್ರದ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಿ

ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಪಡಿತರ ಕಿಟ್‌ ವಿತರಣೆ

ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಪಡಿತರ ಕಿಟ್‌ ವಿತರಣೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

24-23

ಆಧುನಿಕ ತಂತ್ರಜ್ಞಾನ ಸದ್ಬಳಕೆಯಾಗಲಿ

24-22

ದೇಶಕ್ಕೆ ಶ್ಯಾಮಪ್ರಸಾದ್‌ ಮುಖರ್ಜಿ ಕೊಡುಗೆ ಅಪಾರ

24-22

ರೈತರಿಗೆ ಬೆಳೆ ವಿಮೆ ಕೊಡಿಸಲು ಪ್ರಾಮಾಣಿಕ ಯತ್ನ : ಶ್ರೀರಾಮುಲು

24-21

ಅಗಲಿದ ಗಣ್ಯರಿಗೆ ಕಸಾಪ ನುಡಿ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.