19ರಂದು ಇ-ಲೋಕ ಅದಾಲತ್‌


Team Udayavani, Aug 30, 2020, 3:35 PM IST

19ರಂದು ಇ-ಲೋಕ ಅದಾಲತ್‌

ಹಾವೇರಿ: ಕೋವಿಡ್ ದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಇ-ಲೋಕ ಅದಾಲತ್‌ ಅನ್ನು ಸೆ.19ರಂದು ರಾಜ್ಯದಲ್ಲಿ ಏರ್ಪಡಿಸಲಾಗಿದ್ದು, ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ| ಅರವಿಂದಕುಮಾರ್‌ ಹೇಳಿದರು.

ಬೆಂಗಳೂರು ಹೈಕೋರ್ಟ್‌ ಮೂಲಕ ಸಂಚಾರಿ ಹೈಕೋರ್ಟ್‌ ಪೀಠಗಳ ನ್ಯಾಯಾಧೀಶರು, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾಧ್ಯಮದವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸರ್ವರಿಗೂ ನ್ಯಾಯ ಮತ್ತು ಸಮಾನ ಅವಕಾಶ ಕಲ್ಪಿಸುವುದು ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೊರೊನಾ ಇರುವಿಕೆಯ ಈ ಸಂದರ್ಭದಲ್ಲಿ ಬೃಹತ್‌ (ಮೆಘಾ) ಇ-ಲೋಕ ಅದಾಲತ್‌ ಆಯೋಜಿಸಲಾಗಿದೆ. ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿ ಸಿದಂತೆ ವಕೀಲರ ಮೂಲಕ ಅಥವಾ ನೇರವಾಗಿ ಸಾರ್ವಜನಿಕರೇರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಹೇಗೆ ಸಂಪರ್ಕಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಲಿಂಕ್‌ಗಳು, ಇ-ಮೇಲ್‌ ವಿವರ ಹಾಗೂ ಸಂಬಂಧಿಸಿದ ದೂರವಾಣಿ ಸಂಖ್ಯೆ ತಿಳಿಸಲಾಗುತ್ತದೆ ಎಂದರು.

ಇ-ಲೋಕ ಅದಾಲತ್‌ ಯಶಸ್ವಿಯಾಗಿ ಆಯೋಜನೆ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಬಾರಿ ಸಭೆ ನಡೆಸಲಾಗಿದೆ ಎಂದು ವಿವರಿಸಿದ ನ್ಯಾ| ಅರವಿಂದಕುಮಾರ್‌ ಅವರು, ಯಾವುದೇ ಕಾರಣಕ್ಕೂ ಕಕ್ಷಿದಾರರು ನ್ಯಾಯಾಲಯಕ್ಕೆ ಬರುವುದಿಲ್ಲ ಎಂದರು. ವಿಮಾ ಕಂಪನಿಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಕಾರ್ಮಿಕ ವಿವಾದ, ಬ್ಯಾಂಕ್‌ ವಿಷಯಗಳು, ಚೆಕ್‌ ಬೌನ್ಸ್‌, ಹಣ ವಸೂಲಾತಿ ಪ್ರಕರಣಗಳು, ಕ್ರಿಮಿನಲ್‌ ಕಂಪೌಂಡೇಬಲ್‌ ಅಪರಾಧಗಳು, ಎಂಎಸಿಟಿ ಪ್ರಕರಣಗಳು, ಭೂಸ್ವಾಧೀನ, ವಿದ್ಯುತ್‌, ಎಂಎಂಡಿಆರ್‌ ಕಾಯ್ದೆ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಬಾಕಿಇರುವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಸದವಕಾಶ ಒದಗಿ ಬಂದಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಹೈಕೋರ್ಟ್‌ ನ್ಯಾ| ಅಲೋಕಕುಮಾರ್‌ ಮಾತನಾಡಿ, ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಇ-ಲೋಕ ಅದಾಲತ್‌ ಅತ್ಯಂತ ಪರಿಣಾಮಕಾರಿಯಾಗಿದೆ. ವಿವಿಧ ವಿಷಯಗಳಲ್ಲಿ ಸಾವಿರಾರು ವ್ಯಾಜ್ಯ ಗಳಿವೆ. ಅವುಗಳನ್ನು ಇ-ಅದಾಲತ್‌ನಲ್ಲಿ ಪರಿಹರಿಸಬಹುದು. ಬಾಕಿ ಇರುವ ಪ್ರಕರಣ ಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವವರು ಸೆ.18ರ ವರೆಗೂ ತಮ್ಮ ಮಾಹಿತಿ ಸಲ್ಲಿಸಬಹುದಾಗಿದೆ ಎಂದರು. ಹಾವೇರಿ ನ್ಯಾಯಾಲಯ ಸಭಾಂಗಣದಲ್ಲಿ

ವಿಡಿಯೋ ಸಂವಾದಲ್ಲಿ ಭಾಗವಹಿಸಿದ್ದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶರಾದ ಎಚ್‌.ಎಸ್‌.ರೇಣುಕಾದೇವಿ ಅವರು ಜಿಲ್ಲೆಯ ಪ್ರಕರಣಗಳ ಮಾಹಿತಿ ನೀಡಿದರು. ಜು. 31ಕ್ಕೆ 24,783 ಪ್ರಕರಣಗಳು ಬಾಕಿ ಉಳಿದಿದ್ದು, ಈ ಪೈಕಿ 2078 ಪ್ರಕರಣಗಳನ್ನು ಗುರುತಿಸಲಾಗಿದೆ. ವಿಮಾ ಕಂಪನಿಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಕಾರ್ಮಿಕ ವಿವಾದ, ಬ್ಯಾಂಕ್‌ ವಿಷಯಗಳು,ಚೆಕ್‌ ಬೌನ್ಸ್‌, ಹಣ ವಸೂಲಾತಿ ಪ್ರಕರಣಗಳು, ಕ್ರಿಮಿನಲ್‌ ಕಂಪೌಂಡೇಬಲ್‌ ಅಪರಾಧಗಳು, ಎಂಎಸಿಟಿ ಪ್ರಕರಣಗಳು, ಭೂಸ್ವಾಧೀನ, ವಿದ್ಯುತ್‌, ಎಂಎಂಡಿಆರ್‌ ಕಾಯ್ದೆ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಬಾಕಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದೆಂದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ವಿ.ಆರ್‌.ಗುಡಿ, ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈ. ರಾಜೀವಗೌಡ, ಕೌಟುಂಬಿಕ ನ್ಯಾಯಾಲಯದ ನ್ಯಾಯಾàಶರಾದ ಕಿರಣ ಕಿಣಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾ ಧೀಶರು ಹಾಗೂ ಸಿಜೆಎಂ ಎ.ವಿ.ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧಿಧೀಶರು ಹಾಗೂ ಜೆಎಂಎಫ್‌ಸಿ ಲಕ್ಷ್ಮೀ ಎನ್‌.ಗರಗ, ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ನಾಸಿರಾ ಬಾನು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

hdk

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

1-sdsads

ಗೋವಾದಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರ: ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

siddaramaiah

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಅವರಿಗೂ ಗೊತ್ತಿದೆ : ಸಿದ್ದರಾಮಯ್ಯ

1-dsad

ಗಯಾ: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸೇನಾ ವಿಮಾನ ಪತನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

accident

ಹಾವೇರಿ: ಲಾರಿ ಪಲ್ಟಿಯಾಗಿ ಮೂವರು ದಾರುಣ ಸಾವು

ಸೆರತಯರಜಹಗ್ದಸಅ

ಸಾರ್ಥಕ ಜೀವನಕ್ಕೆ ಅಧ್ಯಾತ್ಮದ ಚಿಂತನೆ ಸಹಕಾರಿ

ಸೆರತೆತಯರಕಜಹಗ್ದ

ಮಹಾತ್ಮರ ಆದರ್ಶ ಪಾಲಿಸಿ

ರತಯುಇಇಕುಜಹಗ್ದಸ

ಸ್ಪರ್ಧಾತ್ಮಕ ಪೈಪೋಟಿಗೆ ವಿದ್ಯಾರ್ಥಿಗಳಿಗೆ ಅವಕಾಶ

MUST WATCH

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

ಹೊಸ ಸೇರ್ಪಡೆ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

hdk

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

ಜ.31ಕ್ಕೆ ‘ತೋತಾಪುರಿ’ ವಿಡಿಯೋ ಸಾಂಗ್‌

ಜ.31ಕ್ಕೆ ‘ತೋತಾಪುರಿ’ ವಿಡಿಯೋ ಸಾಂಗ್‌

1-sdsads

ಗೋವಾದಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರ: ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.