
ಹೋರಿ ಹಠಾತ್ ನಿಧನ: ಕೊನೆಗೂ ಮತದಾನಕ್ಕೆ ತೆರಳಿದ ಗ್ರಾಮಸ್ಥರು
ಮತ ಹಾಕಲು ಹೋಗದೆ ಹೋರಿ ಹತ್ತಿರವೇ ಇದ್ದ ಅಭಿಮಾನಿಗಳು...
Team Udayavani, May 10, 2023, 6:25 PM IST

ಹಾವೇರಿ : ಹಾನಗಲ್ ತಾಲೂಕು ಮಾರನಬೀಡ ಗ್ರಾಮದಲ್ಲಿ ಜನಪ್ರಿಯವಾಗಿದ್ದ ಹೋರಿಯೊಂದು ಬುಧವಾರ ಹಠಾತ್ ನಿಧನ ಹೊಂದಿದ ಬಳಿಕ ನೊಂದ ಗ್ರಾಮಸ್ಥರು ಕೇಲ ಹೊತ್ತು ಮತದಾನ ಮಾಡದೆ ದುಃಖದಲ್ಲಿ ಮುಳುಗಿದ್ದರು.
ಹೋರಿ ಬೆದರಿರುವ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನ ಪಡೆದಿದ್ದ ಸೂರ್ಯಪುತ್ರ ಹೆಸರಿನ ಹೋರಿ ನಿಧನ ಹೊಂದಿದ್ದು, ನೂರಾರು ಮಂದಿ ಗ್ರಾಮಸ್ಥರು ಮತಗಟ್ಟೆಯತ್ತ ತೆರಳದೆ ಕಳೇಬರದ ಬಳಿ ಕುಳಿತಿದ್ದರು.
ಮತ ಹಾಕದೇ ಹೋರಿ ಹತ್ತಿರವೇ ಇದ್ದ ಅಭಿಮಾನಿಗಳನ್ನು ಹಿರಿಯರು ಮತ್ತು ಮುಖಂಡರು ಮನವೊಲಿಸಿ ಮತಗಟ್ಟೆಗಳತ್ತ ತೆರಳಿ ಮತ ಹಾಕುವಂತೆ ಮಾಡಿದರು. ಆ ಬಳಿಕ ಹೆಚ್ಚಿನವರು ಮತ ಹಾಕಲು ಮುಂದಾದರು. ರಾತ್ರಿ ಗ್ರಾಮಸ್ಥರೆಲ್ಲರ ಸಮುಖದಲ್ಲಿ ಹೋರಿಯ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
