Udayavni Special

ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು

ಎರಡನೇ ಹಂತದ ಚುನಾವಣೆಗೆ ಕ್ಷಣಗಣನೆ

Team Udayavani, Dec 26, 2020, 2:50 PM IST

ಮತದಾರರ ಸೆಳೆಯಲು ಇನ್ನಿಲ್ಲ ದ ಕಸರತ್ತು

ಸಾಂದರ್ಭಿಕ ಚಿತ್ರ

 ಹಾವೇರಿ: ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆಗೆ ಇನ್ನೊಂದು ದಿನ ಬಾಕಿ ಇದ್ದು, ಡಿ.27 ರಂದು ಮತದಾನ ನಡೆಯಲಿದೆ. ಜಿಲ್ಲೆಯ ಬ್ಯಾಡಗಿ, ಹಾನಗಲ್ಲ, ಶಿಗ್ಗಾವಿ ಹಾಗೂ ಸವಣೂರು ತಾಲೂಕಿನ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆ ನಡೆಯುವ ನಾಲ್ಕು ತಾಲೂಕಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, 105 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಈಗ ಏನಿದ್ದರೂ ಮನೆಮನೆ ಭೇಟಿಗೆ ಅಷ್ಟೇ ಅವಕಾಶವಿದೆ. ಆದ್ದರಿಂದ ಅಭ್ಯರ್ಥಿಗಳು ಪ್ರತಿ ಮತದಾರರನ್ನು ತಲುಪಿ ಮನವೊಲಿಕೆ ನಾನಾ ಕಸರತ್ತಿನಲ್ಲಿ ತೊಡಗಿದ್ದಾರೆ. ಅಣ್ಣಾರ, ಅಕ್ಕಾರ, ತಾಯಂದಿರ ಇದೊಂದು ಸಲ ಅವಕಾಶ ಕೊಟ್ಟು ನೋಡಿ ಎಂದು ಹೇಳುತ್ತಿದ್ದಾರೆ.

ಪ್ರತಿಕ್ಷೇತ್ರಗಳಲ್ಲಿ ಸಾವಿರಾರು ಮತಗಳಷ್ಟೇ ಇರುವುದರಿಂದ ಅಭ್ಯರ್ಥಿಗಳು ಸಂಖ್ಯೆ ಹೆಚ್ಚಿರುವ ಕಡೆ ಪೈಪೋಟಿ ಹೆಚ್ಚಿದೆ. ಇನ್ನು ಪಕ್ಷ ಬೆಂಬಲಿತ ಅಭ್ಯರ್ಥಿಗಳು ತಮ್ಮ ನಾಯಕರ ಹೆಸರು ಹೇಳಿ ಮತ ಯಾಚಿಸುತ್ತಿದ್ದಾರೆ. ಮತದಾರರ ಓಲೈಸಲು ನಾನಾ ತಂತ್ರ: ಗ್ರಾಪಂ ಎರಡನೇ ಹಂತದ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಂತೆ ಹಳ್ಳಿಗಳಲ್ಲಿ ಚುನಾವಣೆ ಗ್ರಾಮಗಳ ಮತದಾರರನ್ನು ಓಲೈಸುವ ಸಲುವಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ.

ಮತದಾರರಿಗೆ  ಕೋಳಿ, ಮಸಾಲೆ ಪದಾರ್ಥ, ಮದ್ಯ ಸೇರಿದಂತೆ ಹಲವಾರು ಉಡುಗರೆಗಳನ್ನು ನೀಡುವ ಮೂಲಕ ಸದ್ದುಗದ್ದಲವಿಲ್ಲದೇ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ. ಡಾಬಾ-ಹೋಟೆಲ್‌ ಭರ್ತಿ: 2ನೇ ಹಂತದಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆಯುವ ಕಡೆಗಳಲ್ಲಿ ತುರುಸು ತೀವ್ರಗೊಂಡಿದೆ. ಎಲ್ಲ ಹಳ್ಳಿಗಳಲ್ಲಿ ಕೊನೆ ಹಂತದ ಕಸರತ್ತು ನಡೆಯುತ್ತಿದೆ. ಪೈಪೋಟಿ ಮೇಲೆ ಅಭ್ಯರ್ಥಿಗಳು ಮತದಾರರನ್ನು ಮನವೊಲಿಸುವ ಕಾರ್ಯ ನಡೆದಿದೆ.

ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿನ ವೈನ್‌ ಶಾಪ್‌, ಬಾರ್‌ ಗಳನ್ನು ಬಂದ್‌ ಮಾಡಲಾಗಿದ್ದು, ಮದ್ಯಪಾನ, ಸಾಗಣೆ ನಿಷೇಧಿ ಸಲಾಗಿದೆ. ಆದರೆ, ಗ್ರಾಮೀಣ ಭಾಗದ ಜನರು ಹೆದ್ದಾರಿ ಪಕ್ಕದ ಡಾಬಾ, ನಗರಗಳ ಹೋಟೆಲ್‌, ಬಾರ್‌ ರೆಸ್ಟೋರೆಂಟ್‌ ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.

ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು: ಉಡುಪಿ ಜಿಲ್ಲಾಧಿಕಾರಿ ಗರಂ

ಮತದಾರರ ಕರೆಸಲು ಆಫರ್‌: ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವೆ ಏರ್ಪಟ್ಟಿದ್ದ ತೀವ್ರ ಜಿದ್ದಾಜಿದ್ದಿಯಿಂದ ಎಚ್ಚೆತ್ತುಕೊಂಡಿರುವ ಎರಡನೇ ಹಂತದ ಅಭ್ಯರ್ಥಿಗಳು ದೂರದ ಊರುಗಳಲ್ಲಿರುವ ಮತದಾರರನ್ನು ಕರೆ ತರಲು ಮುಂದಾಗುತ್ತಿದ್ದಾರೆ. ಕೆಲಸ ಸಲುವಾಗಿ ಗ್ರಾಮಗಳನ್ನು ತೊರೆದು ಬೆಂಗಳೂರು, ಗೋವಾ, ಮಂಗಳೂರು ಸೇರಿದಂತೆ ವಿವಿಧ ನಗರದಲ್ಲಿ

ವಾಸವಾಗಿರುವ ಮತದಾರರ ಮೇಲೆ ಕಣ್ಣು ಇಟ್ಟಿರುವ ಅಭ್ಯರ್ಥಿಗಳು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗ್ರಾಮಕ್ಕೆ ಆಗಮಿಸುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೇ, ಅವರಿಗೆ ಅಗತಗ್ಯ ಬಿದ್ದರೆ ವಾಹನ ವ್ಯವಸ್ಥೆ, ಬಸ್‌ ಚಾರ್ಚ್‌ ಹಾಗೂ ಕಾರ್‌ ತಗೊಂಡು ಬಂದರೆ ಪೆಟ್ರೋಲ್‌ ಬಿಲ್‌ ಕೊಡುವ ಆಫರ್‌ ನೀಡುತ್ತಿದ್ದಾರೆ.

ಮಾಸ್ಕ್-ಸಾಮಾಜಿಕ ಅಂತರ ಮಾಯ  

ಗ್ರಾಪಂ ಚುನಾವಣೆ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ತುರುಸುಗೊಂಡಿದ್ದು, ಈ ನಡುವೆ ಕೋವಿಡ್ ಎರಡನೇ ಅಲೆ ಬಗ್ಗೆ ಎಚ್ಚೆರಿಸುತ್ತಿದ್ದರೂ ಜನತೆ ಕನಿಷ್ಟ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಆತಂಕ ಮೂಡಿಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದ್ದು, ನಿತ್ಯ ಒಂದಂಕ್ಕಿಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಈ ನಡುವೆ ಚುನಾವಣೆ ಪ್ರಚಾರದ ನೆಪದಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ವರ್ತಿಸುತ್ತಿದ್ದು ಗ್ರಾಮೀಣ ಭಾಗದಲ್ಲಿ ಮತ್ತೆ ಕೊರೊನಾ ಎರಡನೇ ಅಲೆಯ ಆತಂಕ ಹೆಚ್ಚುವಂತೆ ಮಾಡಿದೆ. ಜಿಲ್ಲಾಡಳಿತ ಬೀದಿ ನಾಟಕ, ಕರಪತ್ರ ಹಂಚುವುದು ಸೇರಿದಂತೆ ವಿವಿಧ ಜಾಗ್ರತಿ, ಅರಿವು ಮೂಡಿಸಿದರು ಜನರು ಮಾತ್ರ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ.

ವೀರೇಶ ಮಡ್ಲೂರ

ಟಾಪ್ ನ್ಯೂಸ್

[Breaking] Bombay High Court grants bail to former BARC CEO Partho Dasgupta in TRP Scam case

TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!

karkala

ಕಾರ್ಕಳ; ಆಮ್ಲಜನಕದ ಕೊರತೆ; ಬಾವಿಗೆ ಇಳಿದ ಓರ್ವ ಕಾರ್ಮಿಕ ಸಾವು, ಇಬ್ಬರು ಅಸ್ವಸ್ಥ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!

suresh kumar talk about reopening of schools

1 ರಿಂದ 5 ನೇ ತರಗತಿಗಳ ಆರಂಭ  ಸದ್ಯಕ್ಕಿಲ್ಲ: ಸುರೇಶ್ ಕುಮಾರ್

Government should not be corrupt: Kodihalli Chandrasekhar

ಸರ್ಕಾರ ವಚನ ಭ್ರಷ್ಟವಾಗಬಾರದು; ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು:ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ಹಿರಿಯ ಮುಖಂಡ, ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ

ಬಿಜೆಪಿ ಹಿರಿಯ ಮುಖಂಡ, ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಣಿಬೆನ್ನೂರ: 1.57 ಕೋಟಿ ರೂ.ಉಳಿತಾಯ ಬಜೆಟ್‌

ರಾಣಿಬೆನ್ನೂರ: 1.57 ಕೋಟಿ ರೂ.ಉಳಿತಾಯ ಬಜೆಟ್‌

ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ

ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ

bc-patil

ಕೋವಿಡ್ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ. ಪಾಟೀಲ್

ವರಾಹ ನಿಗ್ರಹಕ್ಕೆ ನಗರಸಭೆ ಸಮರ

ವರಾಹ ನಿಗ್ರಹಕ್ಕೆ ನಗರಸಭೆ ಸಮರ

ವೀರಭದ್ರ ಶಿವಾಚಾರ್ಯರಿಂದ ಗೋ ಸೇವೆ

ವೀರಭದ್ರ ಶಿವಾಚಾರ್ಯರಿಂದ ಗೋ ಸೇವೆ

MUST WATCH

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

ಹೊಸ ಸೇರ್ಪಡೆ

ನೀರಿನ ಸಮಸ್ಯೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

ನೀರಿನ ಸಮಸ್ಯೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

ಕಾಫಿ ತೋಟದಲ್ಲಿ ಈಗ ಹೂ ನಗೆ

ಕಾಫಿ ತೋಟದಲ್ಲಿ ಈಗ ಹೂ ನಗೆ

ಕುಡಿವ ನೀರು ಕಲ್ಪಿಸಲು ಆದ್ಯತೆ

ಕುಡಿವ ನೀರು ಕಲ್ಪಿಸಲು ಆದ್ಯತೆ

ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ: ಜಿಲ್ಲಾಧಿಕಾರಿ

ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ: ಜಿಲ್ಲಾಧಿಕಾರಿ

[Breaking] Bombay High Court grants bail to former BARC CEO Partho Dasgupta in TRP Scam case

TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.