2ನೇ ಹಂತದ ಚುನಾವಣೆಗೆ ಸಕಲ ಸಿದ್ಧತೆ


Team Udayavani, Dec 25, 2020, 4:54 PM IST

2ನೇ ಹಂತದ ಚುನಾವಣೆಗೆ ಸಕಲ ಸಿದ್ಧತೆ

ಹಾವೇರಿ: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಡಿ.27ರಂದು ಜರುಗಲಿದ್ದು, ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಕೋವಿಡ್‌ಮುನ್ನೆಚ್ಚರಿಕೆಯೊಂದಿಗೆ ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ.

ಎರಡನೇ ಹಂತದಲ್ಲಿ ಜಿಲ್ಲೆಯ ಬ್ಯಾಡಗಿ, ಸವಣೂರು, ಶಿಗ್ಗಾಂವ ಹಾಗೂ ಹಾನಗಲ್‌ ತಾಲೂಕುಗಳ 105ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯಲಿದೆ.ಈ ವ್ಯಾಪ್ತಿಯಲ್ಲಿ 1461 ಸದಸ್ಯ ಸ್ಥಾನಗಳಿಗೆ ಚುನಾವಣೆಘೋಷಣೆಯಾಗಿದೆ. ಈ ಪೈಕಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 1386 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 4,969 ಉಮೇದುವಾರರು ಅಂತಿಮ ಕಣದಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಬ್ಯಾಡಗಿ ತಾಲೂಕಿನ 18 ಗ್ರಾಮ ಪಂಚಾಯತಿಗಳ 83 ಕ್ಷೇತ್ರಗಳ 243 ಸ್ಥಾನಗಳ ಪೈಕಿ 16 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದೆ. 227 ಸ್ಥಾನಗಳಿಗೆ ಚುನಾವನೆ ನಡೆಯಲಿದೆ. ಸವಣೂರು ತಾಲೂಕಿನ 21ಗ್ರಾಮ ಪಂಚಾಯತಿಗಳ 112 ಕ್ಷೇತ್ರಗಳ 313 ಸ್ಥಾನಗಳ ಪೈಕಿ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.285 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಶಿಗ್ಗಾವಿ ತಾಲೂಕಿನ 27 ಗ್ರಾಮ ಪಂಚಾಯತಿಗಳ120 ಕ್ಷೇತ್ರಗಳ 346 ಸ್ಥಾನಗಳ ಪೈಕಿ 21 ಸ್ಥಾನಗಳಿಗೆಅವಿರೋಧ ಆಯ್ಕೆಯಾಗಿದೆ. 325 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಾನಗಲ್ಲ ತಾಲೂಕಿನ 39ಗ್ರಾಮ ಪಂಚಾಯತಿಗಳ 202 ಕ್ಷೇತ್ರಗಳ 559 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 549 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಸಿಬ್ಬಂದಿ ನಿಯೋಜನೆ: ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪ್ರೊಸಿಡಿಂಗ್‌ಆಫೀಸರ್‌ರ್‌, ಪೋಲಿಂಗ್‌ ಆಫೀಸರ್‌, ಗ್ರೂಪ್‌ ಡಿ ನೌಕರರು, ಆರೋಗ್ಯ ಕಾರ್ಯಕರ್ತರು, ಸೆಕ್ಟೆರ್‌ ಅಧಿಕಾರಿಗಳನ್ನು ಒಳಗೊಂಡಂತೆ 5,992 ಜನರನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಗರಿಷ್ಠ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ.ಡಿವೈಎಸ್‌ಪಿ, ಸಿಪಿಐ, ಜನ ಪಿಎಸ್‌ಐ, ಎಎಸ್‌ಐ, ಪೇದೆಗಳು ಹಾಗೂ ಮುಖ್ಯ ಪೇದೆಗಳು, ಡಿಎಆರ್‌ತುಕಡಿಗಳು, ಕೆಎಸ್‌ಆರ್‌ಪಿ ತುಕಡಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ಕೋವಿಡ್‌ ಮುನ್ನೆಚ್ಚರಿಕೆ: ಪ್ರತಿ ಮತಗಟ್ಟೆಗಳಲ್ಲೂ ಕೋವಿಡ್‌ ಸುರಕ್ಷತೆಗಾಗಿ ಮತಗಟ್ಟೆ, ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌ ಹಾಗೂ ಕೋವಿಡ್‌ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಗಿದೆ. ವ್ಯಾಕ್ಸ್‌ ಕಿಟ್‌, ಕೋವಿಡ್‌ಪ್ರೊಟೆಕ್ಷನ್‌ ಕಿಟ್‌, ಥರ್ಮಲ್‌ ಸ್ಕ್ಯಾನರ್‌ಗಳನ್ನು ವ್ಯವಸ್ಥೆಮಾಡಲಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಲು ಕನಿಷ್ಠ ಆರು ಅಡಿ ಅಂತರದಲ್ಲಿಮಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಪ್ರವೇಶಮುನ್ನ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ನಿಂದ ಕೈತೊಳೆಯುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಲಕ್ಷಣಗಳು ಕಂಡುಬಂದರೆ ಹಾಗೂ ಈಗಾಗಲೇ ಕೋವಿಡ್‌ ಇದ್ದರೆ ಅವರು ಮತದಾನ ಮಾಡಲು ಇಚ್ಚಿಸಿದರೆ ಸುರಕ್ಷತಾಕ್ರಮ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮತದಾನದ ಕೊನೆಯ ಗಂಟೆಯಲ್ಲಿ ಸಂಜೆ 4 ರಿಂದ 5 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಸ್ಟರಿಂಗ್‌ ಕೇಂದ್ರ :

ಬ್ಯಾಡಗಿ ಪಟ್ಟಣದ ಎಸ್‌ಜೆವಿ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಶಿಗ್ಗಾವಿ ನಗರದ ಜೆಎಂಜಿ ಶಾಲೆ ಹಾಗೂ ಹಾನಗಲ್ಲನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಸ್ಟರಿಂಗ್‌ ಹಾಗೂ ರಂದು ಅದೇ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

670 ಮತಗಟ್ಟೆ ಸ್ಥಾಪನೆ :

ಎರಡನೇ ಹಂತದಲ್ಲಿ ಜರುಗಲಿರುವ ಚುನಾವಣೆಗೆ ನಾಲ್ಕು ತಾಲೂಕುಗಳಲ್ಲಿ 670ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಹೆಚ್ಚುವರಿ ಮತಗಟ್ಟೆಗಳುಸೇರಿದಂತೆ 109, ಸವಣೂರು ತಾಲೂಕಿನಲ್ಲಿ146, ಶಿಗ್ಗಾವಿ ತಾಲೂಕಿನಲ್ಲಿ 158 ಹಾಗೂ ಹಾನಗಲ್ಲ ತಾಲೂಕಿನಲ್ಲಿ 257 ಮತಗಟ್ಟೆಗಳನ್ನುಸ್ಥಾಪಿಸಲಾಗಿದೆ. ಈ ಬಾರಿ ಮತದಾರರ ಎಡಗೈ ಹೆಬ್ಬಟ್ಟಿಗೆ ಅಳಿಸಲಾರದ ಶಾಹಿ ಹಾಕಲಾಗುವುದು.ಈ ಉದ್ದೇಶಕ್ಕಾಗಿ ಅಳಿಸಲಾರದ ಶಾಹಿಯನ್ನು ಮತಗಟ್ಟೆಗಳಿಗೆ ಸರಬರಾಜು ಮಾಡಲಾಗಿದೆ.

ಮತದಾರರ ವಿವರ  ;

ಬ್ಯಾಡಗಿ ತಾಲೂಕಿನಲ್ಲಿ 37,628 ಪುರುಷರು, 35,503 ಮಹಿಳೆಯರು ಹಾಗೂ75 ಸೇವಾ ಮತದಾರರು ಸೇರಿ 73,206 ಮತದಾರರು, ಸವಣೂರು ತಾಲೂಕಿನ 49,747 ಪುರುಷರು, 46,477 ಮಹಿಳೆಯರುಹಾಗೂ 132 ಸೇವಾ ಮತದಾರರು ಸೇರಿ 96,356 ಮತದಾರರು, ಶಿಗ್ಗಾಂವ ತಾಲೂಕಿನ 52,423 ಪುರುಷರು, 48,027 ಮಹಿಳೆಯರು, ಇತರೆ04 ಹಾಗೂ 93 ಸೇವಾ ಮತದಾರರು ಹಾಗೂ ಹಾನಗಲ್‌ ತಾಲೂಕಿನ 87,147 ಪುರುಷರು, 80,360 ಮಹಿಳೆಯರು, 05 ಇತರೆ ಹಾಗ 72 ಸೇವಾ ಮತದಾರರು ಸೇರಿ1,67,574 ಮತದಾರರಿದ್ದಾರೆ. ಒಟ್ಟು ನಾಲ್ಕು ತಾಲೂಕಿನಲ್ಲಿ 2,26,945 ಪುರುಷ, 2,10,367 ಮಹಿಳಾ, 09 ಇತರೆ ಹಾಗೂ 372 ಸೇವಾ ಮತದಾರರು ಸೇರಿ 4,37,93 ಮತದಾರರಿದ್ದಾರೆ.

ಟಾಪ್ ನ್ಯೂಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ಸಿಡಿಲು ಸಹಿತ ವರುಣನ ಅಬ್ಬರ… 4ಮೇಕೆ ಸಾವು, ಮೂವರಿಗೆ ಗಾಯ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

chChamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ:ಸೋರುತಿಹುದು ಶಾಲಾ ಕೊಠಡಿ-ಕಾಡುತಿಹುದು ಪ್ರಾಣ ಭಯ

ಹಾವೇರಿ:ಸೋರುತಿಹುದು ಶಾಲಾ ಕೊಠಡಿ-ಕಾಡುತಿಹುದು ಪ್ರಾಣ ಭಯ

congress

Haveri ಜಿಲ್ಲೆಗೆ ಕೈ ತಪ್ಪಿದ ಸಚಿವ ಸ್ಥಾನದ ಭಾಗ್ಯ

ಹಿರೇಕೆರೂರ:ಧಾರ್ಮಿಕ-ಸಾಂಸ್ಕೃತಿಕತೆಗೆ ಹೆಸರಾದ ಮಡ್ಲೂರು

ಹಿರೇಕೆರೂರ:ಧಾರ್ಮಿಕ-ಸಾಂಸ್ಕೃತಿಕತೆಗೆ ಹೆಸರಾದ ಮಡ್ಲೂರು

ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತ್ಯು

ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತ್ಯು

crime scene

Haveri: ದಂಪತಿ ಕಲಹಕ್ಕೆ 2 ಕಂದಮ್ಮಗಳು ಬಲಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

asಅರಂಬೂರು: ಲಾರಿಯಲ್ಲಿ ಬೆಂಕಿ ಅವಘಡ

ಅರಂಬೂರು: ಗುಜರಿ ತುಂಬಿದ್ದ ಲಾರಿಯಲ್ಲಿ ಬೆಂಕಿ ಅವಘಡ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು