ನಿಸ್ವಾರ್ಥಕ್ಕಿದೆ ಇತಿಹಾಸ ಪುಟ ಸೇರುವ ಶಕ್ತಿ


Team Udayavani, Dec 22, 2020, 6:51 PM IST

ನಿಸ್ವಾರ್ಥಕ್ಕಿದೆ ಇತಿಹಾಸ ಪುಟ ಸೇರುವ ಶಕ್ತಿ

ಹಾವೇರಿ: ಜಗತ್ತು ಸ್ವಾರ್ಥದ ಜೊತೆಯಲ್ಲಿ ಸಾಗುತ್ತಿದ್ದು ಸ್ವಾರ್ಥಕ್ಕೆ ಇತಿಹಾಸವಿಲ್ಲ. ಆದರೆ ನಿಸ್ವಾರ್ಥಕ್ಕೆ ಇತಿಹಾಸ ಪುಟ ಸೇರುವ ಶಕ್ತಿಯಿದ್ದು, ಸಮೃದ್ಧ ರಾಷ್ಟ್ರನಿರ್ಮಾಣಕ್ಕೆ ನಿಸ್ವಾರ್ಥ ವ್ಯಕ್ತಿಗಳ ಅಗತ್ಯವಿದೆ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿಲಿಂ. ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಶ್ರೀಗಳು ಹಾಗೂ ಅಥಣಿಮುರುಘೇಂದ್ರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತು ಸ್ವಾರ್ಥಿಗಳಿಂದ ತುಂಬಿ ಹೋಗಿದ್ದು,ನಿಸ್ವಾರ್ಥಿಗಳನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದಿನ ದಿನಗಳಲ್ಲಿ ಪ್ರಶಸ್ತಿಗೆ ಆಯ್ಕೆಮಾಡುವ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳು ಸಿಗುವುದೇ ದುರ್ಲಭ ಎಂಬ ಪರಿಸ್ಥಿತಿ ಇದೆ ಎಂದರು.

ಸಾಹಿತ್ಯ ಚಿಂತಕರಾದ ಪ್ರೊ| ಮಲ್ಲೇಪುರಂ ವೆಂಕಟೇಶ ಮಾತನಾಡಿ, ಶರಣ ಸಂಸ್ಕೃತಿ ಎನ್ನುವುದು ಕೇವಲ ಒಂದು ವರ್ಗ, ಜಾತಿ, ಧರ್ಮ, ಮತಕ್ಕೆ ಸೀಮಿತವಲ್ಲ. ಪ್ರಕೃತಿಯಲ್ಲಿನ ಪ್ರತಿಯೊಂದು ವಸ್ತುಗಳು ಶರಣ ತತ್ವ ಅನುಸರಿಸುತ್ತಿದ್ದು, ಶರಣಸಂಸ್ಕೃತಿ ಸಮಸಮಾಜ ನಿರ್ಮಾಣದ ಮೂಲಬೇರು. ಮುರುಘಾ ಶರಣರ ಮೂಲತತ್ವ ಸಮಸಮಾಜ ನಿರ್ಮಾಣ ಮಾಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ನಾಡಿನಾದ್ಯಂತ ಶರಣ ಸಂಸ್ಕೃತಿ ಉತ್ಸವ ಆಯೋಜಿಸುವ ಮೂಲಕ ಬಸವಾದಿ ಶರಣ ತತ್ವ ಮಂಡನೆ ಮಾಡಿ ಸಮ ಸಮಾಜದ ನಿರ್ಮಾಣಕ್ಕೆ ನಿರಂತರ ಶ್ರಮಿಸುತ್ತಿದ್ದಾರೆ ಎಂದರು.

ಸಾಹಿತಿ ರಂಜಾನ ದರ್ಗಾ ಮಾತನಾಡಿ, ಪ್ರಕೃತಿ ನಮ್ಮ ಅವಶ್ಯಕತೆ ಮಾತ್ರ ಪೂರೈಸುತ್ತದೆ ಹೊರತು ದುರಾಸೆಗಳನ್ನಲ್ಲ ಎಂದು 12ನೇ ಶತಮಾನದಲ್ಲಿಯೇಬಸವಣ್ಣನವರು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಪ್ರಕೃತಿ ತನ್ನ ಸಮತೋಲನ ಕಳೆದುಕೊಂಡಿದ್ದರಿಂದ ಅನೇಕ ರೋಗ, ರುಜಿನುಗಳು ಹುಟ್ಟಿಕೊಂಡಿವೆ. ಅನ್ನ ನೀಡುವ ಭೂಮಿ ತಾಯಿ ಹಾಗೂ ಸಮಾಜ ನಮ್ಮೆಲ್ಲರ ಆಸ್ತಿ. ಅದನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಬಸವಣ್ಣನವರು ಸಮಾಜಕ್ಕೆ ನಿಸರ್ಗ ಧರ್ಮ ಕೊಡುಗೆಯಾಗಿ ನೀಡಿದ್ದು, ಕಾಯಕ, ಪ್ರದಾಸ, ದಾಸೋಹ ಎಂಬ ಮೂರು ಅಂಶಗಳ ಮೇಲೆ ನಿಸರ್ಗ ತತ್ವ ನಿಂತಿದೆ. ಕಾಯಕ ಎಂಬುದು ಸ್ವಾವಲಂಬಿತನವಾಗಿದ್ದು, ಕಾಯಕಕ್ಕೂ ಕೆಲಸಕ್ಕೂ ವ್ಯತ್ಯಾಸವಿದೆ. ಕಾಯಕಕ್ಕೆ ಜಗತ್ತಿನಲ್ಲಿ ಯಾವ ಭಾಷೆಯಲ್ಲೂ ಸಮಾನ ಪದವಿಲ್ಲ. ಪ್ರಸಾದ ಎಂದರೆಸದ್ಬಳಕೆ ಎಂಬ ಅರ್ಥವಿದೆ. ದಾಸೋಹ ಎಂದರೆಯೋಗ್ಯ ಸಾಮಾಜಿಕ ವಿತರಣೆ ಎಂದರ್ಥವಿದೆ ಎಂದರು.

ಸವಣೂರಿನ ದೊಡ್ಡಹುಣಸೇಕಲ್ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿಸಾಹಿತ್ಯ ಚಿಂತಕರಾದ ಪ್ರೊ|ಮಲ್ಲೇಪುರಂ ವೆಂಕಟೇಶ ಅವರಿಗೆ ಡಾ| ಶಿಮುಶ ಪ್ರಶಸ್ತಿ ನೀಡಿಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಧಾರವಾಡ ಕೆಎಂಎಫ್‌ ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಚಂದ್ರಶೇಖರ ಶಿಸನಳ್ಳಿ, ನಾಗೇಂದ್ರ ಕಟಕೋಳ, ಪರಮೇಶ್ವರಪ್ಪ ಮೇಗಳಮನಿ, ರಾಜೇಂದ್ರ ಸಜ್ಜನರ ಇತರರು ಇದ್ದರು.

ಜೀವನದಲ್ಲಿ ನೆಮ್ಮದಿ, ಶಾಂತಿ ಸಂಪಾದಿಸಲು ಒಂದಿಷ್ಟು ನಿಸ್ವಾರ್ಥ ಪಾಲಿಸಬೇಕು. ಬಸವಣ್ಣನವರದ್ದುನಿಸ್ವಾರ್ಥದ ಇತಿಹಾಸವಾಗಿದ್ದು, ನೈಘಂಟಿನಸಿದ್ಧಬಸವ ಶ್ರೀಗಳು, ಅಥಣಿ ಮುರುಘೇಂದ್ರ ಮಹಾಶಿವಯೋಗಳು ಸೇರಿದಂತೆ ಬಸವಾದಿ ಶರಣರು ಜೀವನದುದ್ದಕ್ಕೂ ಶರಣ ಸಂಸ್ಕೃತಿ ಪಾಲಿಸುವ ಮೂಲಕ ನಿಸ್ವಾರ್ಥದಿಂದ ಜೀವನ ನಡೆಸಿ ಆದರ್ಶರಾಗಿದ್ದಾರೆ. -ಡಾ| ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠ

ಟಾಪ್ ನ್ಯೂಸ್

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

Haveri ಹತ್ಯೆಗೆ ಸಂಚು: 8 ಆರೋಪಿಗಳ ಸೆರೆ

Haveri ಹತ್ಯೆಗೆ ಸಂಚು: 8 ಆರೋಪಿಗಳ ಸೆರೆ

Hirekerur; ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಿಲಾ ಶಾಸನ ಪತ್ತೆ

Hirekerur; ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಿಲಾ ಶಾಸನ ಪತ್ತೆ

Haveri: ಮಕ್ಕಳ ಪ್ರತಿಭಾ ಅನ್ವೇಷಣೆ ಅಗತ್ಯ – ನಿರಂಜನ ಗುಡಿ

Haveri: ಮಕ್ಕಳ ಪ್ರತಿಭಾ ಅನ್ವೇಷಣೆ ಅಗತ್ಯ – ನಿರಂಜನ ಗುಡಿ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

KHALISTANI MOVEMENT

Khalistani: ಇನ್ನಷ್ಟು ಖಲಿಸ್ತಾನಿ ಪುಂಡರ ಆಸ್ತಿ ಜಪ್ತಿ

belur

Heritage: ವಿಶ್ವ ಪರಂಪರೆ ತಾಣವಾಗಿ ಬೇಲೂರು, ಹಳೆಬೀಡು ದೇಗುಲ: ಮೋದಿ ಮೆಚ್ಚುಗೆ

aksharadhama nj

USA: ಅ. 8ರಂದು ಬೃಹತ್‌ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ

1-sasad

Kalasa: ಹೃದಯಾಘಾತದಿಂದ ಎಎಸ್‌ಐ ಸಾವು

RAMA LINGA REDDY

Politics: “ಡಿಕೆಶಿ ಸಿಎಂ” ಚರ್ಚೆ ಅನವಶ್ಯಕ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.