ವಿಜ್ಞಾನ ಕೇಂದ್ರ ಕಾಮಗಾರಿ ನನೆಗುದಿಗೆ


Team Udayavani, Jan 8, 2020, 3:34 PM IST

hv-tdy-1

ಹಾವೇರಿ: ಇಲ್ಲಿಯ ಜಿಲ್ಲಾಡಳಿತ ಭವನದ ಬಳಿ ಪಿಲಿಕುಳ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವಿಜ್ಞಾನ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಶೈಕ್ಷ‌ಣಿಕ ಪ್ರವಾಸೋದ್ಯಮದ ಮೂಲಕ ಗಮನ ಸೆಳೆದಿರುವ ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮಾದರಿಯಲ್ಲಿ ಇಲ್ಲಿಯೂ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾಡಳಿತ ಭವನದ ಎದುರಿಗೆ 9.5 ಎಕರೆ ಜಾಗದಲ್ಲಿ 4 ಕೋಟಿ ರೂ. ವೆತ್ಛದಲ್ಲಿ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿ ನಡೆದಿದೆ. ಆದರೆ, ಮೂರು ವರ್ಷ ಕಳೆದರೂ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯಾವಾಗ ಆರಂಭವಾಗುತ್ತದೆಯೋ ಎಂಬ ಸಂಶಯದ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಅಂದುಕೊಂಡಂತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿದ್ದರೆ 2019ರಲ್ಲಿ ಉದ್ಘಾಟನೆಯಾಗಬೇಕಿತ್ತು. ಆದರೆ, ಕಾಮಗಾರಿಗೆ ವೇಗ ದೊರೆಯದಿರುವುದು ಖೇದಕರ ಸಂಗತಿ. ಈ ವಿಜ್ಞಾನ ಕೇಂದ್ರದಲ್ಲಿ ವಿಷಯಾಧಾರಿತ ವಿಜ್ಞಾನ, ಮನರಂಜನಾ ವಿಜ್ಞಾನಕ್ಕೆ ಸಂಬಂಧಿ ಸಿದ ಗ್ಯಾಲರಿಗಳು ಇರಲಿದ್ದು, ಅದರಲ್ಲಿ ಜೀವವೈವಿಧ್ಯ ಮತ್ತು ಆಧುನಿಕ ಸಂಶೋಧನೆ, ತಂತ್ರಜ್ಞಾನಕ್ಕೆ ಸಂಬಂಧಿ ಸಿದ ವಿಭಾಗಗಳು ಇರುತ್ತವೆ. ಈ ಗ್ಯಾಲರಿಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಬಳಸಬಹುದಾದ ವಿಜ್ಞಾನ ಮಾದರಿಗಳಿರುತ್ತವೆ. ಇದಲ್ಲದೇ ಮಾನವ ವಿಕಾಸ, ವಿನಾಶದ ಅಂಚಿನಲ್ಲಿರುವ ಪ್ರಬೇಧಗಳು, ಅವುಗಳನ್ನು ಉಳಿಸುವುದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ವಿವರಣೆ ನೀಡುವ ಪ್ರಯತ್ನಗಳು ಇಲ್ಲಿ ಮಾಡಲು ಉದ್ದೇಶಿಸಲಾಗಿದೆ. ನ್ಯಾನೋ ತಂತ್ರಜ್ಞಾನ, ರಾಕೆಟ್‌ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನದ ಕುರಿತ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಈ ಕೇಂದ್ರದಲ್ಲಿ ಇರಲಿದ್ದು ಪರಿಸರ ಜಾಗೃತಿ ಜತೆಗೆ ವಿಜ್ಞಾನದ ವಿಸ್ಮಯಗಳು ಇಲ್ಲಿ ಅನಾವರಣಗೊಳಿಸುವ ಯೋಜನೆ ಇದೆ. ಆದರೆ, ಅದು ಇನ್ನೂ ಸಾಕಾರಗೊಳ್ಳದಿರುವುದೇ ಅಸಮಾಧಾನಕ್ಕೆ ಕಾರಣವಾಗಿದೆ.

ಗೊಂದಲಮಯ ದಾರಿ :  ವಿಜ್ಞಾನ ಕೇಂದ್ರ ಮೊದಲಿನಿಂದಲೂ ಗೊಂದಲದ ಹಾದಿಯಲ್ಲಿಯೇ ಸಾಗುತ್ತಬಂದಿದೆ. ಹಲವು ವರ್ಷಗಳಿಂದ ಕ್ರಿಯಾಯೋಜನೆ, ಸ್ಥಳ ಗೊಂದಲದಲ್ಲೇ ಕಳೆಯಿತು. 2006ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಹಾವೇರಿಗೆ ವಿಜ್ಞಾನ ಕೇಂದ್ರ ಮಂಜೂರು ಮಾಡಿ 1.5 ಕೋಟಿ ಅನುದಾನವನ್ನೂ ನೀಡಿದ್ದರು. ಬಳಿಕ ದೇವಗಿರಿಯಲ್ಲಿ ಮೂರು ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ಮೀಸಲಾಗಿಡಲಾಗಿತ್ತು. ಬಳಿಕ ಯಾರೂ ಈ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರವೇ ಕೈಬಿಡಲಾಗಿತ್ತು. ಮೂರು ವರ್ಷಗಳ ಹಿಂದೆ ವಿಜ್ಞಾನ ಕೇಂದ್ರ ಸ್ಥಾಪನೆ ವಿಚಾರಕ್ಕೆ ಚಾಲನೆ ದೊರೆತು ಕರ್ಜಗಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಯಿತು. ಆಗಿನ ಜಿಲ್ಲಾ ಧಿಕಾರಿ ಡಾ.ಎಂ.ವಿ. ವೆಂಕಟೇಶ ಅದನ್ನು ಮತ್ತೆ ದೇವಗಿರಿಗೆ ವರ್ಗಾಯಿಸಿದರು. ಕೂಡಲೇ ಹಣ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಸೂಚಿಸಿದರು. ತನ್ಮೂಲಕ ಕಳೆದ 12ವರ್ಷಗಳಿಂದ ಕಡತದಲ್ಲೇ ಉಳಿದಿದ್ದ ವಿಜ್ಞಾನ ಕೇಂದ್ರ ಕಾಮಗಾರಿ ಹಂತಕ್ಕೆ ಬಂದಿದೆ. ಆದರೆ, ಕಾಮಗಾರಿಯ ವೇಗಕ್ಕೂ ಗ್ರಹಣ ಹಿಡಿದಿರುವುದು ವಿಷಾದನೀಯ.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಚುರುಕು ಗೊಳಿಸಲು ಆದೇಶಿಸಲಾಗು ವುದು. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಲಭಿಸುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು.  –ಕೃಷ್ಣ ಭಾಜಪೇಯಿ ಜಿಲ್ಲಾಧಿಕಾರಿ

 

-ಎಚ್‌.ಕೆ. ನಟರಾಜ

Ad

ಟಾಪ್ ನ್ಯೂಸ್

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮೈದುಂಬಿದೆ ಬೆಳ್ಕಲ್‌ ತೀರ್ಥ: ಜಲಧಾರೆಯ ಸೊಬಗು; ಮೋಜು – ಮಸ್ತಿಯಲ್ಲಿ ಮೈಮರೆಯಬೇಡಿ

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

ಮದುವೆ ನೆಪದಲ್ಲಿ ಲೈಂಗಿ*ಕ ಕಿರುಕುಳ: ಆರ್‌ಸಿಬಿ ವೇಗಿ ಯಶ್‌ ದಯಾಳ್‌ ವಿರುದ್ಧ FIR ದಾಖಲು

Tragedy: ಶಾಲಾ ಬಸ್ಸಿಗೆ ರೈಲು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃ*ತ್ಯು, ಹಲವರಿಗೆ ಗಾಯ

Tragedy: ಶಾಲಾ ಬಸ್ಸಿಗೆ ರೈಲು ಢಿಕ್ಕಿ… ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃ*ತ್ಯು

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Haveri: ಅಳಿದುಳಿದ ಬೆಳೆಗೆ ವನ್ಯಜೀವಿ ಕಾಟ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

If Ravikumar has a conscience, he should apologize publicly: H.K. Patil

Haveri: ರವಿಕುಮಾರಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಎಚ್.ಕೆ.ಪಾಟೀಲ್

11

Haveri: ಮುಳ್ಳುಸಜ್ಜೆಗೆ ಕಳೆಗುಂದಿದ ಬೆಳೆ

Shiggavi: ಜನಿಸಿದ 38 ದಿನಕ್ಕೆ ತಾಯಿ ಜತೆ ಓಂಕಾರ ಜಪಿಸಿದ ಹಸುಗೂಸು!

Shiggavi: ಜನಿಸಿದ 38 ದಿನಕ್ಕೆ ತಾಯಿ ಜತೆ ಓಂಕಾರ ಜಪಿಸಿದ ಹಸುಗೂಸು!

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

Arrested: ಕರೆ ಮಾಡಲು ಕೊಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಬಂಧನ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

Bengaluru: ವರದಕ್ಷಿಣೆ‌: ಡಿವೈಎಸ್ಪಿ ವಿರುದ್ಧ ಕೇಸ್‌

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

High Court: ಗಾರ್ಡನ್‌ ಅಲ್ಲ, ಫ್ಲೆಕ್ಸ್‌ ಸಿಟಿ: ಹೈಕೋರ್ಟ್‌ ಚಾಟಿ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Arrested: ಜನರಿಗೆ ಧಮ್ಕಿ: ನಕಲಿ ಪೊಲೀಸ್‌ ಅಧಿಕಾರಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.