ಉದ್ಯೋಗ ಖಾತ್ರಿ ಲಾಭ ಪಡೆದುಕೊಳ್ಳಿ

Team Udayavani, Jan 2, 2020, 2:48 PM IST

HV-TDY-1

ಹಾವೇರಿ: ಮಹಿಳೆಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಬೀದ್‌ ಗದ್ಯಾಳ ಹೇಳಿದರು.

ಬ್ಯಾಡಗಿ ತಾಪಂ ಸಭಾಭವನದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಹಾಗೂ ಗ್ರಾಮೀಣ ಜೀವನೋಪಾಯ ಕಾರ್ಯಕ್ರಮಗಳ ಕುರಿತು ತಾಲೂಕು ಮಟ್ಟದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ವೇತನವಿದೆ. ದುಡಿಯುವ ಕೈಗಳಿಗೆ ಕೆಲಸ ನೀಡಿ ಗ್ರಾಮೀಣ ಭಾಗದಲ್ಲಿ ದೀರ್ಘ‌ ಕಾಲ ಬಾಳಿಕೆ ಬರುವ ಆಸ್ತಿಗಳ ಸೃಜನೆ ಮಾಡುವ ಉದ್ದೇಶವಿದೆ. ಸ್ವಸಹಾಯ ಸಂಘದವರು ಕೇವಲ ಉಳಿತಾಯಕ್ಕಾಗಿ ಸಂಘವನ್ನು ರಚನೆ ಮಾಡದೇ ಸ್ವಸಹಾಯ ಸಂಘದಲ್ಲಿ ಆದಾಯ ಉತ್ಪನ್ನವಾಗುವ ಸ್ವ-ಉದ್ಯೋಗದಿಂದ ಮಾತ್ರ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 100 ದಿವಸ ಕೂಲಿ ಕೆಲಸ ನೀಡುವ ಉದ್ದೇಶದಿಂದ ಉದ್ಯೋಗ ಭರವಸೆಗಾಗಿ ಯೋಜನೆ ಜಾರಿಯಲ್ಲಿದ್ದು ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಮಾಡಿಕೊಳ್ಳಬೇಕು ಎಂದರು. ಜಿಪಂ ಐಇಸಿ ಸಂಯೋಜಕರಾದ ಚನ್ನವೀರಸ್ವಾಮಿ ಹಿರೇಮಠ, ಈ ವರ್ಷ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮಹಿಳೆಯರಿಗೆ ತಿಳಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ ಬಳೆಗಾರ, ರಮೇಶ, ಡಿ.ವಿ. ಅಂಗೂರ, ಗಿರೀಶ ಬೆನ್ನೂರ ಹಾಗೂ ಪ್ರದೀಪ ಗಣೇಶ್ಕರ, ನಾಗರಾಜ ಹಡಗಲಿ, ಮಂಜುನಾಥ ದೊಡ್ಡಗೌಡ್ರ ಇದ್ದರು. ಶಾನವಾಜ ಚಿಣಗಿ ಸ್ವಾಗತಿಸಿದರು. ವಾಣಿಶ್ರೀ ಗಡ್ಡದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ad

ಟಾಪ್ ನ್ಯೂಸ್

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14(1

Ranebennur: ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ರೈತರ ಒಲವು

17

Haveri: ಅಳಿದುಳಿದ ಬೆಳೆಗೆ ವನ್ಯಜೀವಿ ಕಾಟ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

Haveri: ನಮ್ಮ ಡಿಮ್ಯಾಂಡ್‌ ಇದೆ, ಸಚಿವ ಸ್ಥಾನ ಕೇಳುತ್ತೇನೆ..: ರುದ್ರಪ್ಪ ಲಮಾಣಿ

If Ravikumar has a conscience, he should apologize publicly: H.K. Patil

Haveri: ರವಿಕುಮಾರಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ: ಎಚ್.ಕೆ.ಪಾಟೀಲ್

11

Haveri: ಮುಳ್ಳುಸಜ್ಜೆಗೆ ಕಳೆಗುಂದಿದ ಬೆಳೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.