
ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ: ವಿನಯ್ ಕುಲಕರ್ಣಿ
Team Udayavani, Mar 27, 2023, 4:54 PM IST

ಹಾವೇರಿ: ಶಿಗ್ಗಾವಿ ಹಂಡ್ರೆಡ್ ಪರ್ಸೆಂಟ್ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ. ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆ ಇಲ್ಲ. ನಾನು ರಾಜಕಾರಣ ಮಾಡಲು ಬಂದಿದ್ದೇನೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಶಿಗ್ಗಾವಿಯಲ್ಲಿ ವಿನಯ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಬೆನ್ನಲ್ಲೇ ಸವಣೂರಿನ ದೊಡ್ಡ ಹುಣಸೆಮಠಕ್ಕೆ ಭೇಟಿ ನೀಡಿ ಸ್ವಾಮಿಜಿಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಹೈಕಮಾಂಡ್ ನನ್ನ ಜೊತೆ ಮಾತನಾಡಿದೆ, ಶಿಗ್ಗಾವಿಗೆ ನಾನು ಅರ್ಜಿ ಹಾಕಿಲ್ಲ. ಹೈಕಮಾಂಡ್ ಸ್ಪರ್ಧಿಸುವಂತೆ ಹೇಳಿದೆ, ನಾನೂ ಸಹ ಇಲ್ಲಿ 13-14 ಜನರು ಆಕಾಂಕ್ಷಿಗಳಿದ್ದಾರೆ. ಅವರಿಗೆ ಟಿಕೆಟ್ ಕೊಡಿ ಅವರು ಗೆಲ್ಲುತ್ತಾರೆ. ನನಗೆ ನನ್ನ ಕ್ಷೇತ್ರ ಕ್ಲಿಯರ್ ಇದ್ದು ನನಗೆ ದೊಡ್ಡ ಬಳಗ ಅಲ್ಲಿದೆ. ಮುಂದೆ ನೊಡೋಣ ಎಂದು ಹೇಳಿದ್ದು ನಾನು ಹೈಕಮಾಂಡ್ ಗೆ ಭರವಸೆ ಕೊಟ್ಟಿಲ್ಲ ಎಂದರು.
ಮೂರು ಚುನಾವಣೆಯಲ್ಲಿ ಖಾದ್ರಿಯವರ ಮೇಲೆ ಷಡ್ಯಂತ್ರ ನಡೆದಿದೆ. ರಾಜಕಾರಣದಲ್ಲಿ ನೇರಾ ನೇರಾ ಸ್ಪರ್ಧೆ ಇರಬೇಕು, ಹಿಂದಿನಿಂದ ಷಡ್ಯಂತ್ರ ಮಾಡಿ ಗೆಲ್ಲುವುದು ಗೆಲುವಲ್ಲ. ಮೋಸದ ಗೆಲುವು ಅದು, ಮೋಸದ ಗೆಲುವಿನಿಂದ ಇಲ್ಲಿ ಗೆದ್ದಿರಬಹುದು, ನೇರವಾಗಿ ಜನರಿಂದ ನಾವು ಗೆಲ್ಲಬೇಕು. ಯಾರನ್ನೋ ಮೋಸ ಮಾಡಿ ಗೆಲ್ಲುವಂತದ್ದು ದೊಡ್ಡ ಗೆಲುವಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಧಾರವಾಡಕ್ಕೆ ಹೋಗಲು ಸಾಕಷ್ಟು ಅಡ್ಡಿಪಡಿಸಿದ್ದಾರೆ. ಇವತ್ತು ತಪ್ಪು ಮಾಡದೆಯೇ ಹಲವಾರು ತಪ್ಪುಗಳನ್ನ ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆ ದಮನ ಆಗುವುದನ್ನು ಇವತ್ತೆ ನೋಡುತ್ತಿದ್ದೇನೆ. ರಾಹುಲ್ ಗಾಂಧಿಯವರ ಪ್ರಕರಣ ನೋಡಿದರೆ ರಾಜಕಾರಣ ಮಾಡಬಾರದು ಅನಿಸುತ್ತಿದೆ. ನಮ್ಮ ಜನರಿಗಾಗಿ ನಾವು ರಾಜಕಾರಣ ಮಾಡಬೇಕಿದೆ ಎಂದರು.
ಶಿಗ್ಗಾವಿ ಟಾರ್ಗೆಟ್ ಮಾಡುತ್ತಿಲ್ಲ ಯಾವುದೇ ಕ್ಷೇತ್ರದಲ್ಲಿ ನಿಂತರೂ ರಾಜಕಾರಣ ಮಾಡುತ್ತೇವೆ. ನನಗೆ ನನ್ನ ಕ್ಷೇತ್ರವಿದೆ, ದುರಾಸೆ ಒಳ್ಳೆದಲ್ಲ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿಯವರು ಎಲ್ಲರಿಗು ತ್ರೀಡಿ ತೋರಿಸಿದ್ದಾರೆ. ಯಾವ 2ಡಿ ಅದು 2ಡಿ ಯಾರು ಕೇಳೆ ಇಲ್ಲ. ಇನ್ನೊಂದು ಸಮಾಜದಿಂದ ಕಿತ್ತು ಕೊಡುವಂತಹ ಹೊಸಲು ರಾಜಕಾರಣ ಮತ್ತೊಂದಿಲ್ಲ. ಚುನಾವಣೆ ಹೊತ್ತಲ್ಲಿ ಸಮಾಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ. ಇದು ಅವೈಜ್ಞಾನಿಕವಾಗಿದೆ, ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬೊಮ್ಮಾಯಿಯವರು ಜೇನು ಗೂಡಿಗೆ ಕೈ ಹಾಕಿಲ್ಲ. ಜೇನು ಎಬ್ಬಿಸಿ ಎಲ್ಲರಿಗು ಕಡಿಯಲು ಹಚ್ಚಿದ್ದಾರೆ. ಜೇನುಗೂಡಿಗೆ ಕೈಹಾಕಲ್ಲ ಅವರು, ಮಂದಿ ಕಡೆ ಹಾಕಿಸ್ತಾರ. ಇದು ನಿನ್ನೆಯದಲ್ಲ ಅರವಿಂದ ಬೆಲ್ಲದ ಅವರು ಐದಾರು ತಿಂಗಳು ಹಿಂದೆ ಹೇಳಿದ್ದಾರೆ. ಇದು ಪ್ರೀ ಪ್ಲ್ಯಾನ್ ಮಾಡಿದ್ದಾರೆ, ನಾನು ಇದನ್ನ ಖಂಡಿಸುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
