
ಪುರಸಭೆಯಲ್ಲಿ ಬೋಗಸ್ ಬಿಲ್: ಡಿಸಿಗೆ ದೂರು
Team Udayavani, Sep 23, 2022, 4:09 PM IST

ವಾಡಿ: ಪಟ್ಟಣದ ಪುರಸಭೆಯ ಕಾಂಗ್ರೆಸ್ ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಾಮಾನ್ಯ ಸಭೆ ಕರೆದು ಚರ್ಚಿಸದೆ ಬೇಕಾಬಿಟ್ಟಿ ಬೋಗಸ್ ಬಿಲ್ ಬರೆಯಲಾಗುತ್ತಿದೆ ಎಂದು ಆರೋಪಿಸಿದ ಪುರಸಭೆಯ ವಿರೋಧ ಪಕ್ಷ ಬಿಜೆಪಿ ಸದಸ್ಯರು, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಎಸಿಸಿ ಸಿಮೆಂಟ್ ಕಂಪನಿ ಸೇರಿದಂತೆ ನಗರದ ಸಾರ್ವಜನಿಕರಿಂದ ಸಂಗ್ರಹಗೊಳ್ಳುವ ಕೋಟ್ಯಂತರ ರೂಪಾಯಿ ತೆರಿಗೆ ಹಣ ದುರ್ಬಳಕೆಯಾಗಿದೆ. ಸರ್ಕಾರದಿಂದ ಬಂದಿರುವ ವಿವಿಧ ಯೋಜನೆಗಳ ನೂರಾರು ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಠಿಸಿ ಲೂಟಿ ಮಾಡಲಾಗಿದೆ. ಈ ಕುರಿತು ಸಾಮಾನ್ಯ ಸಭೆ ಕರೆದು ಅಭಿವೃದ್ಧಿಯ ಮಾಹಿತಿ ಮತ್ತು ಲೆಕ್ಕಪತ್ರ ತೋರಿಸುವಂತೆ ಕೋರಿದರೂ ಪುರಸಭೆ ಅಧ್ಯಕ್ಷರಾಗಲಿ ಅಥವಾ ಮುಖ್ಯಾಧಿಕಾರಿಯಾಗಲಿ ಕಿವಿಗೊಡುತ್ತಿಲ್ಲ. ವಿರೋಧ ಪಕ್ಷದ ಸಲಹೆ, ಸೂಚನೆ ಮತ್ತು ಆದೇಶಗಳನ್ನು ಕಡೆಗಣಿಸಲಾಗುತ್ತಿದೆ. ಪರಿಣಾಮ ಪುರಸಭೆ ಖಜಾನೆಯ ಹಣದ ಐದು ವರ್ಷದ ಖರ್ಚು ಲೆಕ್ಕಪತ್ರ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಪುರಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಭೀಮಶಾ ಜಿರೊಳ್ಳಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪುರಸಭೆ ಸದಸ್ಯ ರವಿ ನಾಯಕ, ನಾಮನಿರ್ದೇಶಿತ ಸದಸ್ಯರಾದ ಕಿಶನ ಜಾಧವ, ವೀರಣ್ಣ ಯಾರಿ, ಆಶ್ರಯ ಸಮಿತಿ ಸದಸ್ಯರಾದ ಅಂಬಾದಾಸ ಜಾಧವ, ಸತೀಶ ಸಾವಳಗಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ, ರಾಜು ಕೋಲಿ, ಕಿಶನ ನಾಯಕ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
