
ಹೆಲಿಪ್ಯಾಡ್ ನಲ್ಲಿ ಗೋಣಿಚೀಲಗಳ ರಾಶಿ; ಬಿಎಸ್ ವೈ ಹೆಲಿಕಾಪ್ಟರ್ ಇಳಿಯಲು ಹರಸಾಹಸ
Team Udayavani, Mar 6, 2023, 2:28 PM IST

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜಿಲ್ಲೆಯ ಜೇವರ್ಗಿ ಬಳಿಯ ಹೆಲಿಪ್ಯಾಡ್ ನಲ್ಲಿ ಇಳಿಯಲು ಸಾಕಷ್ಟು ಹರಸಾಹಸ ಪಟ್ಟಿರುವ ಘಟನೆ ನಡೆಯಿತು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಜೇವರ್ಗಿಗೆ ಆಗಮಿಸುವ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಯಮಿತವಾಗಿ ಇಳಿಯದೇ ನಾಲ್ಕೈದು ಸುತ್ತು ಹೊಡೆಯಿತು.
ಕಾಪ್ಟರ್ ಹೆಲಿಪ್ಯಾಡ್ ದಲ್ಲಿ ಇಳಿಯಲು ಮುಂದಾದಾಗ ಹೆಲಿಪ್ಯಾಡಕ್ಕೆ ಹತ್ತಿಕೊಂಡಂತಿರುವ ಗುಡಿಸಲು ಮೇಲೆ ಹಾಕಲಾದ ತಾಡಪತ್ರಿ ಜತೆಗೆ ಹತ್ತಿ ಮೇಲೆ ಹಾಕಲಾಗಿದ್ದ ಪ್ಲಾಸ್ಟಿಕ್ ಚೀಲಗಳು ಹಾರಾಡಲು ಮುಂದಾದವು. ಒಂದು ಹಂತದಲ್ಲಿ ಪ್ಲಾಸ್ಟಿಕ್ ಚೀಲಗಳು ಹೆಲಿಕ್ಯಾಪ್ಟರ್ ಗೆ ಇಳಿಯಲು ಅಡ್ಡಿ ಮಾಡಿದವು. ಇದೇ ಕಾರಣಕ್ಕೆ ಹೆಲಿಕ್ಯಾಪ್ಟರ್ ಕೆಳಗಿಳಿಯುವ ಬದಲು ಮತ್ತೆ ಮೇಲಕ್ಕೇರಿತು.
ಎರಡ್ಮೂರು ಸಲ ಸುತ್ತು ಹಾಕಿ, ನಂತರ ಹೆಲಿಕಾಪ್ಟರ್ ಹರ ಸಾಹಸ ಪಟ್ಟು ಕೆಳಗಿಳಿತು. ಮಾಜಿ ಮುಖ್ಯ ಮಂತ್ರಿ ಕೆಳಗಿಳಿಯುವ ನಿಟ್ಟಿನಲ್ಲಿ ಯಾವುದೇ ಮುಂಜಾಗ್ರತಾ ವಹಿಸದಿರುವುದು ಈ ಸಂದರ್ಭದಲ್ಲಿ ಕಂಡು ಬಂತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

Kalaburagi;ಅವ್ಯವಹಾರಕ್ಕೆ ಸಂಬಂಧಿಸಿ ಮೂವರು ಇಂಜಿನಿಯರ್ ಗಳ ಅಮಾನತು

Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

Wadi: ಬೀದಿಗೆ ಬಿದ್ದ ರೈಲು ನಿಲ್ದಾಣ ಸಫಾಯಿ ಕಾರ್ಮಿಕರು;

Tragedy: ಯುವ ರೈತ ಮೃತ್ಯು… ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಮಡುಗಟ್ಟಿದ ಶೋಕ
MUST WATCH
ಹೊಸ ಸೇರ್ಪಡೆ

World Heart Day: ಮಣಿಪಾಲ ಡಿಸಿ ಕಚೇರಿ ನೌಕರರಿಗೆ ಉಚಿತ ಹೃದಯ ತಪಾಸಣಾ ಶಿಬಿರ

Karwar; ಓವರ್ ಟೇಕ್ ವೇಳೆ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

Women’s Reservation Bill ; ಒಪ್ಪಿಗೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Delhi: ಏಷ್ಯಾದಲ್ಲೇ ಅತಿದೊಡ್ಡ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ

Uttar Pradesh: ತಪ್ಪಾದ ಇಂಜೆಕ್ಷನ್ ನಿಂದ ಬಾಲಕಿ ಸಾವು; ಶವ ಎಸೆದು ವೈದ್ಯ, ಸಿಬಂದಿ ಪರಾರಿ!