ಬತ್ತುತ್ತಿದೆ ಅಂತರ್ಜಲ-ನೀರಿಗಾಗಿ ಪರದಾಟ

ಸಂಪೂರ್ಣ ಬತ್ತಿದ ಕೊರವಿ ತಾಂಡಾ-ಬೆನಕೆಪಳ್ಳಿ ಗ್ರಾಮದ ಬಾವಿಗಳು

Team Udayavani, Jun 8, 2020, 4:44 PM IST

08-June-20

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚಿಂಚೋಳಿ: ಕೋವಿಡ್‌-19 ಲಾಕ್‌ಡೌನ್‌ ಸಮಸ್ಯೆ ಒಂದೆಡೆಯಾದರೆ ಬಿಸಿಲಿನ ತಾಪದಿಂದಾಗಿ ಬೋರವೆಲ್‌ ಮತ್ತು ಬಾವಿಗಳಲ್ಲಿನ ಅಂತರ್ಜಲ ದಿನೇ-ದಿನೇ ಕುಸಿಯುತ್ತಿರುವುದರಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ತಾಲೂಕಿನಲ್ಲಿಯೇ ಅತಿ ಹಿಂದುಳಿದ ಪ್ರದೇಶವಾಗಿರುವ ಸೇರಿ ಬಡಾ ತಾಂಡಾ, ಪಾಲತ್ಯಾ ತಾಂಡಾ, ಯಲ್ಮಡಗಿ ಪುರ್ನವಸತಿ ಕೇಂದ್ರ-2, ಹೂವಿನಹಳ್ಳಿ, ನಾಗಾಇದಲಾಯಿ, ಫತ್ತು ನಾಯಕ ತಾಂಡಾ, ಮೋನು ನಾಯಕ ತಾಂಡಾ, ಬೆನಕೆಪಳ್ಳಿ, ರಾಮನಗರ ತಾಂಡಾ ಕೊರವಿ, ಚಿಂದಾನೂರ ತಾಂಡಾಗಳಲ್ಲಿ ಬೇಸಿಗೆ ದಿನಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಚಂದನಕೇರಾ, ಐನಾಪುರ, ಬಸಂತಪುರ, ಗಡಿಲಿಂಗದಳ್ಳಿ, ಚೆಂಗಟಾ, ಚಿಮ್ಮನಚೋಡ, ಹಸರಗುಂಡಗಿ, ಸಾಲೇಬೀರನಳ್ಳಿ ಸುತ್ತಲಿನ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆಹೆಚ್ಚಿದೆ.

ಬತ್ತಿದ ಕೊಳವೆ ಬಾವಿಗಳು: ನಾಲ್ಕು ನಾಗಾಇದಲಾಯಿ, ಎರಡು ಫತ್ತು ನಾಯಕ ತಾಂಡಾ, ನಾಲ್ಕು ಮೋನುನಾಯಕ ತಾಂಡಾ, ಎಂಟು ಬೆನಕೆಪಳ್ಳಿ, ಒಂದು ರಾಮನಗರ ತಾಂಡಾ ಕೊರವಿ, ಎರಡು ಸೇರಿ ಬಡಾ ತಾಂಡಾ, ಒಂದು ಪಾಲತ್ಯಾ ತಾಂಡಾ, ಒಂದು ಯಲ್ಮಡಗಿ ಪುರ್ನವಸತಿ ಕೇಂದ್ರ, ಒಂದು ಹೂವಿನ ಹಳ್ಳಿ ಗ್ರಾಮಗಳಲ್ಲಿ ಕೊಳವೆಬಾವಿಗಳು ಕೆಟ್ಟುಹೋಗಿವೆ.

ಬತ್ತಿದ ತೆರೆದ ಬಾವಿ: ರಾಮನಗರ ಕೊರವಿ ತಾಂಡಾದಲ್ಲಿ ಒಂದು, ಬೆನಕೆಪಳ್ಳಿ ಗ್ರಾಮದಲ್ಲಿ ಒಂದು ತೆರೆದ ಬಾವಿಗಳು ಸಂಪೂರ್ಣ ಬತ್ತಿವೆ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಅಸಮಾಧಾನ: ಒಂದೆಡೆ ಕೋವಿಡ್ ಲಾಕ್‌ ಡೌನ್‌ ಇನ್ನೊಂದೆಡೆ ಅನೇಕ ಹಳ್ಳಿಯಲ್ಲಿ ಜನರು, ದನಕರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಸಿಪಿಐ (ಎಂ) ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮ ಮತ್ತು ತಾಂಡಾಗಳಿಗೆ ಪ್ರತಿನಿತ್ಯ ನಾಲ್ಕೈದು ಟ್ರಿಪ್‌ ನೀರನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಜನರು ತಿಳಿಸಿದರೆ ತಕ್ಷಣ ಸ್ಪಂದಿಸಲಾಗುತ್ತದೆ.
ಬಸವರಾಜ ನೇಕಾರ, ಎಇಇ,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ

ಟಾಪ್ ನ್ಯೂಸ್

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

2PSI

ಪಿಎಸ್‌ಐ ಅಕ್ರಮ: ಇನ್‌ಸ್ಪೆಕ್ಟರ್‌ ಸೇರಿ ಇಬ್ಬರ ಬಂಧನ

Karnataka’s anil hegde rajyasabha candidate from bihar

ಬಿಹಾರ ರಾಜ್ಯಸಭಾ ಚುನಾವಣೆ ರೇಸ್‌ನಲ್ಲಿ ಕನ್ನಡಿಗ; ಕುಂದಾಪುರದ ಅನಿಲ್‌ ಹೆಗ್ಡೆ JDU ಅಭ್ಯರ್ಥಿ

Gyanvapi mosque committee Shivling as fountain.

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಸ್‌ಐ ಪರೀಕ್ಷಾ ಅಕ್ರಮ: ಆರೋಪಿ ಕಾರು, ಚಿನ್ನ, ದಾಖಲೆ ವಶ

ಪಿಎಸ್‌ಐ ಪರೀಕ್ಷಾ ಅಕ್ರಮ: ಆರೋಪಿ ಕಾರು, ಚಿನ್ನ, ದಾಖಲೆ ವಶ

ct-ravi

ಪಠ್ಯದಲ್ಲಿ ಹೆಗಡೆವಾರ್ ಭಾಷಣ ಸೇರ್ಪಡೆಯಾದರೆ ತಪ್ಪೇನು?: ಸಿ.ಟಿ.ರವಿ

12ambedkar

ಅಂಬೇಡ್ಕರ್‌ ಜಯಂತಿ ಚಿಂತನೆಗೆ ವೇದಿಕೆಯಾಗಲಿ

11road

ಅಣವಾರ-ಮೋತಕಪಳ್ಳಿ ರಸ್ತೆ ಸುಧಾರಣೆಗೆ ಕ್ರಮ

ವಿಧಾನಸಭೆ ಚುನಾವಣೆ; ಸ್ಥಳೀಯರಿಗೆ ಆದ್ಯತೆ ನೀಡಿ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

drainage

ಕುತ್ಪಾಡಿ: ವಾಣಿಜ್ಯ ಕಟ್ಟಡಗಳ ಡ್ರೈನೇಜ್‌ ನೀರು, ತ್ಯಾಜ್ಯ ತೋಡಿಗೆ

6

ಅರಣ್ಯ ಭೂಮಿ ಹಕ್ಕು ಸಮಸ್ಯೆ ಪರಿಹರಿಸಿ

shirva

ಶಿರ್ವ: ನೂತನ ಬಸ್‌ ನಿಲ್ದಾಣ ಲೋಕಾರ್ಪಣೆಗೆ ಸಜ್ಜು

5

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.