ಚಿಂಚೋಳಿ ಪುರಸಭೆ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ನ ಸುಲೋಚನಾ ಜಗನ್ನಾಥ್ ಕಟ್ಟಿ
Team Udayavani, Jul 7, 2022, 5:57 PM IST
ಚಿಂಚೋಳಿ:ಸ್ಥಳೀಯ ಪುರಸಭೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆ ಸುಲೋಚನಾ ಜಗನ್ನಾಥ್ ಕಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಕಟ್ಟಿಯವರು ಒಬ್ಬರೇ ನಾಮಪತ್ರ ಸಲ್ಲಿಸಿದರು.
ಹೆಚ್ಚಿನ ನಾಮಪತ್ರ ಸಲ್ಲಿಕೆ ಆಗದಿರುವುದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಸುಲೋಚನ ಕಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಫಲಿತಾಂಶ ಘೋಷಣೆ ಮಾಡಿದರು.
ಪುರಸಭೆ ೩೦ತಿಂಗಳ ಅವಧಿಯಲ್ಲಿ ಈ ಮೊದಲು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಶಬ್ಬೀರ್ ಅಹ್ಮದ್ ೧೫ತಿಂಗಳು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪಕ್ಷದ ಒಳ ಒಪ್ಪಂದದಂತೆ ತಮ್ಮ ಜೂನ್ ಎರಡರಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಶೋಯಬ್ ಮಗ್ದೂಮ್ ರವಿಕುಮಾರ ಪಾಟೀಲ್ ಚುನಾವಣೆ ಪ್ರಕ್ರಿಯೆ ನಡೆಸಿದರು.
ವಿಜಯೋತ್ಸವ
ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುಲೋಚನಾ ಕಟ್ಟಿ ಅವರು ಅವಿರೋಧ ಆಯ್ಕೆ ಆಗಿರುವುದಕ್ಕೆ ಎಲ್ಲಾ ಪುರಸಭೆ ಸದಸ್ಯರು ಅವರನ್ನು ಹೂಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ವಿಜಯದ ಸಂಕೇತ ರೊಂದಿಗೆ ಹರ್ಷ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರ್ ಗಡಂತಿ, ಶಬ್ಬೀರ್ ಅಹಮದ್,ಪುರಸಭೆ ಸದಸ್ಯರಾದ ಅಬ್ದುಲ್ ಬಾಸಿತ್, ಜಗನ್ನಾಥ್ ಗುತ್ತೇದಾರ್, ಶಿವಕುಮಾರ್ ಪುಚಾಲಿ ,ಆನಂದ್ ಟೈಗರ್, ರೂಪಕಲಾ ಕಟ್ಟಿಮನಿ, ಕವಿತಾ ಬಸವರಾಜ,ಅನ್ವರ್ ಖತೀಬ್ ,ನಾಗೇಂದ್ರ ಗುರಂಪಳ್ಳಿ ‘ಸುಶಿಲ್ ಕುಮಾರ್ ಬೊಮ್ನಳ್ಳಿ ,ಬಸವರಾಜ ಶಿರಸಿ,ಕಾಂಗ್ರೆಸ್ ಪಕ್ಷದ ಮುಖ೦ಡರು ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂತೋಷ ಗಡಂತಿ,ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಅವರನ್ನು ಸನ್ಮಾನಿಸಿದರು.ಪುರಸಭೆ ಸಿಬ್ಬಂದಿಗಳು ನಾಮನಿದೇಶಿತ ಸದಸ್ಯರು ಭಾಗವಹಿಸಿದರು