ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
Team Udayavani, Jan 24, 2023, 2:53 PM IST
ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಈ ಭಾಗದ ಪ್ರಸಿದ್ದ ಯಾತ್ರಾ ಸ್ಥಳ ದೇವಲ್ ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದರು.
ಸಿಎಂ ಆದ ಮೇಲೆ ಮೊದಲ ಬಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಬೊಮ್ಮಾಯಿ ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಬಂದಿದ್ದರು. ಸಂಕಷ್ಟದಲ್ಲಿದ್ದಾಗ ದತ್ತನ ದರ್ಶನ ಪಡೆದ್ರೆ ಸಂಕಷ್ಟ ಪರಿಹಾರವಾಗುತ್ತೆ ಅನ್ನೋ ನಂಬಿಕೆ. ಹೀಗಾಗಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ದಲ್ಲಿ ಸಿಎಂ ಪೂಜೆ ದತ್ತನ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.
ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಕ್ಕೂ ಮೊದಲೇ ಭೀಮಾ, ಅಮರ್ಜಾ ನದಿಗಳ ಸಂಗಮ ಸ್ಥಳಕ್ಕೆ ಸಿಎಂ ಭೇಟಿ ನೀಡಿ ಭೀಮಾ, ಅಮರ್ಜಾ ನದಿಯ ಸಂಗಮ ಸ್ಥಳ ಸಂಗಮ ಸ್ಥಳದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಇದನ್ನೂ ಓದಿ:ಪಿಎಸ್ಐ ಕೇಸ್ ಗೆ ಟ್ವಿಸ್ಟ್: ಸಿಐಡಿ ಅಧಿಕಾರಿಗೆ 76 ಲಕ್ಷ ರೂ. ಲಂಚ ನೀಡಿದ ಆರೋಪ
ತದನಂತರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಸಿಎಂ ಪೂಜೆ ಅಭಿಷೇಕ ಮಾಡಿ, ದತ್ತನ ಪಾದುಕೆಗಳ ದರ್ಶನ ಪಡೆದರು. ಲೋಕ ಕಲ್ಯಾಣಾರ್ಥವಾಗಿ ಪೂಜೆ ಮಾಡಿದ್ದಾರೆ. ದೇವಸ್ಥಾನದ ಅರ್ಚಕ ಚಿಂತಾಮಣಿ ಪೂಜಾರಿ ನಂತರ ಹೇಳಿಕೆ ನೀಡಿದರು.
ದರ್ಶನ ನಂತರ ಸಿಎಂ ಅವರಿಗೆ ಪಂಚಲೋಹ ಮತ್ತು ಬೆಳ್ಳಿ ವಿಗ್ರಹ ಕಾಣಿಕೆ ಮನೆ ಜಗುಲಿ ಮೇಲೆ ಇಟ್ಟು ಪೂಜೆ ಮಾಡಲು ಪುಟ್ಟ ಬೆಳ್ಳಿ ದತ್ತಾತ್ರೇಯ ದೇವಸ್ಥಾನ ಮನೆಯಲ್ಲಿಡಲು ಪಂಚಲೋಹದ ದತ್ತಾತ್ರೇಯ ಮೂರ್ತಿ ನೀಡಲಾಯಿತು. ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅರ್ಚಕರು ಬೆಳ್ಳಿ ಮತ್ತು ಪಂಚಲೋಹದ ಮೂರ್ತಿಯನ್ನು ಕಾಣಿಕೆಯಾಗಿ ನೀಡಿದರು.
ಅತಿ ಭಕ್ತಿಭಾವದಿಂದ ಗಾಣಗಾಪುರ ಕ್ಕೆ ಬಂದಿದ್ದೇನೆ. ದತ್ತಾತ್ರೇಯರ ಆಶೀರ್ವಾದ ಮತ್ತು ಪ್ರೇರಣೆ ಸಿಕ್ಕಿದೆ. ರಾಜ್ಯದ ಅಭಿವೃದ್ದಿ, ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಜೆಟ್ ದಲ್ಲಿ ಅನುದಾನ: ಕಾಶೀ ವಿಶ್ವನಾಥ ಹಾಗೂ ಮಧ್ಯ ಪ್ರದೇಶದ ಕಾಳಹಸ್ತಿ ಮಾದರಿಯಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಪಡಿಸಲು 67 ಕೋ.ರೂ ಮೊತ್ತದ ನೀಲಿ ನಕ್ಷೆ ರೂಪಿಸಲಾಗಿದೆ. ಬರುವ ಬಜೆಟ್ ದಲ್ಲಿ ಸೂಕ್ತ ಅನುದಾನ ನಿಗದಿ ಮಾಡಲಾಗುವುದು. ಈಗ ಅಭಿವೃದ್ಧಿಗೆ ಐದು ಕೋಟಿ ನೀಡಿದ್ದೇನೆ ಎಂದು ತಿಳಿಸಿದರು.
ಬರುವ ಬಜೆಟ್ ಜನಪರವಾಗಿರಲಿದೆ. ಈಗಾಗಲೇ ಈ ಸಂಬಂಧ ಎರಡ್ಮೂರು ಸಭೆ ನಡೆಸಲಾಗಿದೆ. ಹೊಸ ಘೋಷಣೆಗಳು ಸಹ ಇರಲಿದೆ ಎಂಬ ಸುಳಿವು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ