
ಬಂಜಾರಾ ಜನಾಂಗ ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಯತ್ನ: ಸಿಎಂ ಬೊಮ್ಮಾಯಿ
Team Udayavani, Mar 28, 2023, 2:50 PM IST

ಕಲಬುರಗಿ: ಮೀಸಲಾತಿ ವಿಚಾರ ಸಂಬಂದ ಬಂಜಾರಾ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆ ಮೇಲೆ ದಾಳಿಯಲ್ಲಿ ಪಾಲ್ಗೊಂಡವರು ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಅದರಲ್ಲಿ ಕೆಲವರನ್ನು ಬಂಧಿಸಲಾಗಿದ್ದು ಅವರೆಲ್ಲ ಕಾಂಗ್ರೆಸ್ ನವರಿದ್ದಾರೆ. ಹೀಗಿದ್ದ ಮೇಲೂ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ ಬಿಜೆಪಿಯ ದಾಳಿ ಎನ್ನುವುದು ನಾಚಿಗೇಡಿತನ ಸಂಗತಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ನಾಯಕರು ರಾತ್ರಿ ಮೀಟಿಂಗ್ ಮಾಡಿ ಪಕ್ಕಾ ಪ್ಲ್ಯಾನ್ ಮಾಡಿಯೇ ಈ ಕೃತ್ಯ ನಡೆಸಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಅಮೃತ್‌ಪಾಲ್ ಸಿಂಗ್ ಪರಾರಿ: ಭಾರತದಲ್ಲಿ ಬಿಬಿಸಿ ಪಂಜಾಬಿಯ ಟ್ವಿಟರ್ ಖಾತೆಗೆ ತಡೆ
ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಸಾಕಾರಗೊಂಡಿದೆ. ಅದನ್ನ ಬಿಟ್ಟು ಚುನಾವಣಾ ಪ್ರಚಾರದ ಗಿಮಿಕ್ ಎನ್ನುವ ಕಾಂಗ್ರೆಸ್ ನದ್ದು ಕ್ಷುಲ್ಲಕ ವಾಗಿದೆ.
ಕಾಂಗ್ರೆಸ್ ಗೆ ಹೊಟ್ಟೆಕಿಚ್ಚು ಹಾಗಾಗಿ ಈ ರೀತಿ ಮಾತಾಡುತ್ತಾರೆ. ಯಾವುದು ಅವರು ಅಸಾಧ್ಯ ಎನ್ನುತ್ತಿದ್ದರೋ ಅದನ್ನು ನಾವು ಸಾಧ್ಯವಾಗಿಸಿದ್ದೇವೆ. ಇದರಿಂದಾಗಿ ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು ಎಂದು ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
