Udayavni Special

ಸೂಪರ್‌ ಮಾರ್ಕೆಟ್‌ ನಲ್ಲಿ ಜನಜಂಗುಳಿ

Team Udayavani, Apr 27, 2021, 4:48 PM IST

ಹಗ್ಹಗದ್ಸ

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೆ ಅಲೆ ಅಬ್ಬರ ಜೋರಾಗಿರುವ ನಡುವೆಯೂ ಸೋಮವಾರ ನಗರದಲ್ಲಿ ಎಲ್ಲೆಡೆ ಜನಜಂಗುಳಿ ಕಂಡು ಬಂತು. ಪ್ರಮುಖ ಸಾರ್ವಜನಿಕ ಸ್ಥಳ, ರಸ್ತೆಗಳು, ಜನರು, ವಾಹನಗಳಿಂದ ತುಂಬಿ ಗಿಜಿಗುಡುತ್ತಿದ್ದವು. ನೈಟ್‌ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂವಿನಿಂದ ಶುಕ್ರವಾರ ರಾತ್ರಿಯಿಂದಲೇ ಮಹಾನಗರ ಸಂಪೂರ್ಣ ಸ್ತಬ್ಧವಾಗಿತ್ತು.

ಶನಿವಾರ ಮತ್ತು ರವಿವಾರ ಜನ ಸಂಚಾರ, ವಾಹನ ಓಡಾಟ ತೀರ ವಿರಳವಾಗಿತ್ತು. ಎಲ್ಲೆಡೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಸೋಮವಾರ ಬೆಳಗ್ಗೆಯಿಂದ ಕರ್ಫ್ಯೂ ನಿಯಮಗಳ ಸಡಿಲಿಕೆ ಕಾರಣ ಎಲ್ಲ ಕಡೆಗಳಲ್ಲೂ ಜನ ಸೇರಿದ್ದರು. ವಾಣಿಜ್ಯ ವಹಿವಾಟಿಗೆ ಕಡಿವಾಣ ಹೊರತುಪಡಿಸಿ ಯಾವುದೇ ಬಿಗಿ ಕ್ರಮ ಇಲ್ಲದೇ ಇರುವುದರಿಂದ ಕೊರೊನಾ ಭಯ, ಪೊಲೀಸರ ಹೆದರಿಕೆ ಬಿಟ್ಟು , ಮೈಮರೆತು ಜನರು ರಸ್ತೆಗಳಿಗೆ ಬಂದಿದ್ದರು.

ಇಡೀ ನಗರ ಪೂರ್ತಿಯಾಗಿ ಕೊರೊನಾ ತೊಲಗಿದೆ ಎಂಬಂತೆ ಜನ-ಜೀವನ ಸಹಜ ಸ್ಥಿತಿಗೆ ಬಂದಿದೆ ಎನ್ನುವಂತೆ ಭಾಸವಾಗುತ್ತಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಬೈಕ್‌ಗಳು, ಕಾರುಗಳು, ಆಟೋಗಳು, ಸರಕು ವಾಹನಗಳ ಸಂಚಾರ ದಟ್ಟಣೆ ಇತ್ತು. ಈಶಾನ್ಯ ಸಾರಿಗೆ ಬಸ್‌ಗಳು ಮತ್ತು ನಗರ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂತು. ಕರ್ಫ್ಯೂ ದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಅಧಿಕವಾಗಿ ಪ್ರಯಾಣಿಕರು ಕಂಡು ಬಂದರು.

ಸೂಪರ್‌ ಮಾರ್ಕೆಟ್‌, ಕಿರಾಣಾ ಬಜಾರ್‌, ಚಪ್ಪಲ್‌ ಬಜಾರ್‌, ನೆಹರು ಗಂಜ್‌, ಹುಮನಾಬಾದ್‌ ಬೇಸ್‌, ಆಳಂದ ನಾಕಾ, ಜಗತ್‌ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತ, ಜಿಲ್ಲಾ ನ್ಯಾಯಾಲಯದ ರಸ್ತೆ, ಶರಣಬಸವೇಶ್ವರ ದೇವಸ್ಥಾನ ರಸ್ತೆ, ಜೇವರ್ಗಿ ರಸ್ತೆ, ರಾಷ್ಟ್ರಪತಿ ವೃತ್ತ, ರಾಮ ಮಂದಿರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಜನಜಂಗುಳಿ ಇತ್ತು. ಸೂಪರ್‌ ಮಾರುಕಟ್ಟೆ ಸೇರಿದಂತೆ ಹಲವೆಡೆ ಬೀದಿ ಬದಿ ವ್ಯಾಪಾರ ಜೋರಾಗಿತ್ತು. ರಾತ್ರಿ 9ಗಂಟೆ ವರೆಗೆ ಮಾತ್ರ ಹೋಟೆಲ್‌, ಖಾನಾವಳಿಗಳಲ್ಲಿ ಪಾರ್ಸೆಲ್‌ಗೆ ಅನುಮತಿ ನೀಡಿದ್ದರೆ, ಹಲವು ಹೋಟೆಲ್‌ಗ‌ಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು. ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳ ಮುಂದೆಯೂ ಅಧಿಕ ಸಂಖ್ಯೆಯಲ್ಲಿ ಜಮಾವಣೆಯಾಗಿ ಖರೀದಿಯಲ್ಲಿ ತೊಡಗಿದ್ದರು.

ಮಧ್ಯಹ್ನದ ಹೊತ್ತಿಗೆ ಮಂಗಳವಾರದಿಂದ 14 ದಿನ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಹೊರ ಬೀಳುತ್ತಿದ್ದಂತೆ ಅಗತ್ಯ ವಸ್ತುಗಳು, ದಿನ ಬಳಕೆ ಸಾಮಗ್ರಿಗಳ ಖರೀದಿಗಾಗಿ ಇನ್ನೂ ಹೆಚ್ಚಿನ ಜನರು ಹೊರ ಬಂದರು. ಕೆಲವೆಡೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಅಡ್ಡಾಡುತ್ತಿದ್ದರು.

ಈ ನಡುವೆ ಪೊಲೀಸರು ಆಗಾಗ್ಗೆ ಗಸ್ತು ತಿರುಗಿ ಎಚ್ಚರಿಸುತ್ತಲೇ ಇದ್ದರು. ಆದರೂ, ಜನ ದಟ್ಟಣೆ ಕಂಡು ಬಂತು. ರಾತ್ರಿ 9 ಗಂಟೆಗೆ ನೈಟ್‌ ಕರ್ಫ್ಯೂ  ಜಾರಿಯಾದ ನಂತರ ಜನ ಸಂಚಾರ ಮತ್ತು ವಾಹನಗಳ ಓಡಾಟ ನಿಯಂತ್ರಣಕ್ಕೆ ಬಂತು.

ಟಾಪ್ ನ್ಯೂಸ್

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪತಿ – ಮಗನಿಗೆ ಕೋವಿಡ್ ಪಾಸಿಟಿವ್ : ಮನನೊಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಪತಿ – ಮಗನಿಗೆ ಕೋವಿಡ್ ಪಾಸಿಟಿವ್ : ಮನನೊಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೊವಿಡ್ ಗೆ ಬಲಿ

ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೋವಿಡ್ ಗೆ ಬಲಿ

ಶಹಾಬಾದ್ ಇಎಸ್ ಐ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ: ಮುರುಗೇಶ್ ನಿರಾಣಿ

ಶಹಾಬಾದ್ ಇಎಸ್ ಐ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ: ಮುರುಗೇಶ್ ನಿರಾಣಿ

9-8

ಕಾಂಗ್ರೆಸ್‌ನಿಂದ ಉಚಿತ ಆಂಬ್ಯುಲೆನ್ಸ್‌ ಸೇವೆ

9-7

ಜಿಲ್ಲೆಗೆ 250 ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಮಂಜೂರು

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.