
ತೊಗರಿ ನೆಟೆರೋಗಕ್ಕೆ ಪರಿಹಾರ ನೀಡಲು ನಿರ್ಧಾರ: ಸಿಎಂ ಬೊಮ್ಮಾಯಿ
Team Udayavani, Jan 24, 2023, 12:32 PM IST

ಕಲಬುರಗಿ: ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟು ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂಬುದನ್ನು ನಿರ್ಣಯಿಸಲು ಉನ್ನತಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಈ ಮೊದಲು ಅತಿವೃಷ್ಟಿ ಹಾಗೂ ಈಗ ನೆಟೆರೋಗದಿಂದ ಹಾಳಾಗಿದ್ದರಿಂದ ರೈತರ ಸಂಕಷ್ಟ ಸರ್ಕಾರ ಅರಿವಿದೆ ಎಂದರು.
ವಿಠಲ್ ಹೇರೂರ್ ಅವರ ಕಂಚಿನ ಪ್ರತಿಮೆ ಅನಾವರಣಕ್ಕೆ ಬಂದಿದ್ದೇನೆ. ಗಾಣಾಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆಯುತ್ತಿದ್ದು, ಗಾಣಾಗಾಪುರ ಅಭಿವೃದ್ಧಿ ಗೆ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.
ಇದನ್ನೂ ಓದಿ:Viral: ಮೆಟ್ರೋ ರೈಲಿನೊಳಗೆ ಭೂಲ್ ಭೂಲೈಯಾದ “ಮಂಜುಲಿಕಾ” ವೇಷ ಧರಿಸಿ ಬಂದ ಮಹಿಳೆ!
ಪಿಎಸ್ಐ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸಿಐಡಿ ತನಿಖಾಧಿಕಾರಿ ಹಣ ಬೇಡಿಕೆ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಆರೋಪಿ ಏನು ಹೇಳಿದ್ದಾನೆ ಎಂಬುದು ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಯದ್ದು ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪಿಎಸ್ಐ ಹಗರಣದ ತನಿಖೆಯು ಕೋರ್ಟ್ ಆದೇಶದ ಮೂಲಕ ತನಿಖೆ ನಡೆಯುತ್ತಿದೆ. ಮೊದಲು ಆರೋಪದಲ್ಲಿ ಆಡಿಯೋ ಏನಿದೆ ನೋಡೊಣ, ನಂತರ ತನಿಖೆ ಆಗುತ್ತದೆ ಎಂದರು.
ಟಾಪ್ ನ್ಯೂಸ್
