ಹಾವಿನ ಫೋಟೋಗೆ ಲೈಕ್‌ ಮಾಡ್ಬೇಡಿ: ಗೌರಿಶಂಕರ್‌


Team Udayavani, Feb 14, 2017, 3:09 PM IST

gul3.jpg

ಕಲಬುರಗಿ: ದಯವಿಟ್ಟು ಫೇಸ್‌ಬುಕ್‌ನಲ್ಲಿ ಹಾವಿನ ಫೋಟೋ ಹಿಡಕೊಂಡು ಸ್ಟೇಟಸ್‌ ಹಾಕಿಕೊಳ್ಳುವ ಜನರ, ಸ್ನೇಹಿತರ ಅಕೌಂಟ್‌ ಗಳಿಗೆ ಲೈಕ್‌ ಮಾಡಿ ಪ್ರೋತ್ಸಾಹಿಸಬೇಡಿ. ಇದರಿಂದ ಹಾವುಗಳಿಗೆ ಕಂಟಕ ಎದುರಾಗುತ್ತದೆ ಎಂದು ಶಿವಮೊಗ್ಗದ ಆಗುಂಬೆಯ ಕಾಳಿಂಗ ಸರ್ಪ ಮತ್ತು ಪರಿಸರ ವರ್ಷಾರಣ್ಯ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪಿ.ಗೌರಿಶಂಕರ ಹೇಳಿದರು. 

ಸೋಮವಾರ ಇಲ್ಲಿನ ಗುವಿವಿಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್‌ ಹಾಲ್‌ನಲ್ಲಿ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಕೃತಿಯಲ್ಲಿ ಕಳಿಂಗ ಸರ್ಪ ಬೆಳೆದು ಬಂದ ಇತಿಹಾಸ (ಎ ಜರ್ನಿ ಇನೂr ನಾಚುರಲ್‌ ಹಿಸ್ಟ್ರಿ ಆಫ್‌ ಕಿಂಗ್‌ ಕೋಬ್ರಾ) ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಹಾವುಗಳನ್ನು ಕೊಲ್ಲುವುದು ಹಾಗೂ ಹಿಡಿದು ಫೋಟೋ ತೆಗೆಸಿಕೊಳ್ಳುವುದನ್ನು ಮಾಡಲಾಗುತ್ತಿದೆ. ಇದರಿಂದ ಇಡೀ ಹಾವಿನ ಸಂತತಿಗೆ ಅಪಾಯವಿದೆ. ಸಾಮಾನ್ಯವಾಗಿ ಸುಖಾಸುಮ್ಮನೆ ಹಾವುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ನಮ್ಮಿಂದ ತೊಂದರೆಯಾದರೆ ಮಾತ್ರವೇ ತಮ್ಮ ಉಳಿವಿಕೆಗಾಗಿ ಪ್ರತಿ ದಾಳಿ ಮಾಡುತ್ತವೆ.

ನಾವೇ ಅವುಗಳಿಗೆ ತೊಂದರೆ ಕೊಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಫೇಸ್‌ಬುಕ್‌ ಮತ್ತು ವ್ಯಾಟ್ಸಪ್‌ಗ್ಳಲ್ಲಿ ಹಾಕುವ ಫೋಟೋ ಮತ್ತು ಸ್ಟೇಟಸ್‌ಗಳನ್ನು ಲೈಕ್‌ ಮಾಡಿ ಪ್ರೋತ್ಸಾಹಿಸಬೇಡಿ. ಸಾಧ್ಯವಾದರೆ ಅದು ತಪ್ಪು ಎನ್ನುವ ಸಂದೇಶ ರವಾನಿಸಿ ಎಂದು ಮನವಿ ಮಾಡಿದರು.

ಹಾವು ಹಾಲು ಕುಡಿಯೋದಿಲ್ಲ: ಹಾವುಗಳು ಹಾಲು ಕುಡಿಯುವುದಿಲ್ಲ, ನೀರು ಕುಡಿಯುತ್ತವೆ. ಇದನ್ನು ತಿಳಿಯದ ನಾವು, ಹಬ್ಬ ಹರಿದಿನಗಳಲ್ಲಿ ಹಾಲನ್ನು ಕುಡಿಸುವ ಮೂಢನಂಬಿಕೆಯಿಂದ ಹೊರಬರಬೇಕಿದೆ. ಇದರಿಂದ ಹಾವುಗಳಿಗೂ ಹಿಂಸೆ ತಪ್ಪುತ್ತದೆ ಎಂದು ಹೇಳಿದರು.  

ವಿಜ್ಞಾನ ವಿಭಾಗದ ಡಿನ್‌ ಪ್ರೊ| ಕೆ.ವೆಂಕಟರಮನ್‌, ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೆ. ವಿಜಯಕುಮಾರ, ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ| ಪ್ರಕಾಶ ಕರಿಯಜ್ಜನವರ್‌, ಪ್ರೊ| ಮುರುಳಿ ಜಡೇಶ್‌ ಇದ್ದರು. ವಿದ್ಯಾರ್ಥಿ ಅಮರೇಶ ಯಾಕಾಪುರ ನಿರೂಪಿಸಿದರು. ಡಾ| ಪ್ರಕಾಶ ಕರಿಯಜ್ಜನವರ ವಂದಿಸಿದರು.  

ಟಾಪ್ ನ್ಯೂಸ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

‌Bollywood: ಮತ್ತೆ ಸೀಕ್ವೆಲ್‌ ನತ್ತ ಮುಖಮಾಡಿದ ಸನ್ನಿ ಡಿಯೋಲ್‌: ʼಬಾರ್ಡರ್‌ -2ʼ ಅನೌನ್ಸ್

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ

Hubballi: ಅಮಾನವೀಯವಾಗಿ ವರ್ತಿಸಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು

2-kalburgi

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ: ಪ್ರಥಮ ಪ್ರಾಶಸ್ತ್ಯದ ಮತದಲ್ಲಿ ಕಾಂಗ್ರೆಸ್ ಮುನ್ನಡೆ

MLC: ಈಶಾನ್ಯ ಪದವೀಧರ ಕ್ಷೇತ್ರ… ಬಿಜೆಪಿಯ ಅಮರನಾಥ ಪಾಟೀಲ್ ಗೆ ಆರಂಭಿಕ ಮುನ್ನಡೆ

Election Result: ಈಶಾನ್ಯ ಪದವೀಧರ ಕ್ಷೇತ್ರ; ಬಿಜೆಪಿಯ ಅಮರನಾಥ ಪಾಟೀಲ್ ಗೆ ಆರಂಭಿಕ ಮುನ್ನಡೆ

MLC Election: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತ ಏಣಿಕೆ ಪ್ರಕ್ರಿಯೆ ಶುರು

MLC Election: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶುರು

MUST WATCH

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

ಹೊಸ ಸೇರ್ಪಡೆ

1-asdsadas

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

court

Illegal mining case; ಬಿಜೆಪಿ ಮುಖಂಡರಾದ ಶಶಿರಾಜ್ ಶೆಟ್ಟಿ, ಪ್ರಮೋದ್ ಗೆ ಜಾಮೀನು

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

ಹುಬ್ಬಳ್ಳಿ: ತಾಪಮಾನ ಹೆಚ್ಚಳ ತಡೆಗೆ ಗಿಡ ನೆಡುವುದೇ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.