Udayavni Special

ಒಂದೇ ದಿನ ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ

Team Udayavani, Jul 24, 2021, 7:21 PM IST

fyuy

ಬೆಂಗಳೂರು: ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ವರ್ಚುವಲ್‌ ಉದ್ಯೋಗ ಮೇಳದಲ್ಲಿ ಮೊದಲ ದಿನ ಒಂದು ಸಾವಿರ ಅಭ್ಯರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

ಕೌಶಲ್ಯಮಾಸದ ಪ್ರಯುಕ್ತ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ಶುಕ್ರವಾರ ಹಮ್ಮಿಕೊಂಡಿದ್ದ ಮೊದಲ ದಿನದ ವರ್ಚುಯಲ್‌ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 5,000 ಯುವಕ-ಯುವತಿಯರಲ್ಲಿ 1 ಸಾವಿರ ಯುವಜನರು ವಿವಿಧ ಪ್ರತಿಷ್ಠಿತ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ವರ್ಚುಯಲ್‌ ಮೇಳದಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ ಕೆಲ ಯುವಕ ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಮೇಳ ತಿಂಗಳು ಪೂರ್ತಿ ಮುಂದುವರಿಯಲಿದೆ ಎಂದರು.

ಈ ಮೇಳದಲ್ಲಿ ಎಚ್‌ಜಿಎಸ್‌, ಆದಿತ್ಯ ಬಿರ್ಲಾ, ಸನ್‌ಸೆರಾ ಎಂಜಿನಿಯರಿಂಗ್‌, ಐಬಿಎಂ ಇಂಡಿಯಾ, ವಿಪ್ರೊ, ಟೀಮ್‌ ಲೀಸ್‌, ರಿಲಯನ್ಸ್‌ ಕಂಪನಿಯ ಏಳು ಸಹ ಕಂಪನಿಗಳು, ಅμÅಮ್‌ ಡಾಟಾ ಸರ್ವೀಸ್‌, ಡ್ರೀಮ್‌ ಆರ್ಬಿಟ್‌, ಹಿಂದುಜಾ, ವಿಸ್ಟ್ರಾನ್‌, ಪ್‌ಕಾರ್ಟ್‌, ಡಿಎಚ್‌ಎಲ್‌, ಅಲ್‌ ಲಾಜಿಸ್ಟಿಕ್ಸ್‌, ಮೆಡಿಝಿನಿಕಾ, ಮೆಶೋ, ಗ್ರಾಸ್‌ರೂಟ್ಸ್‌ ಬಿಪಿಒ, ಇಂಡಿಯನ್‌ ಮನಿ, ನವತಾ ರೋಡ್‌ ಟ್ರಾನ್ಸ್‌ಪೊàರ್ಟ್‌, ಎಕಾಮ್‌ ಎಕ್ಸ್‌ಪ್ರೆಸ್‌, ಲ್ಯಾಂಡ್‌ಮಾರ್ಕ್‌, ಐಟಿಸಿ, ಕ್ವೆಸ್‌ ಕಾರ್ಪ್‌, ಸ್ಟ್ರೆಪರಾವಾ ಇಂಡಿಯಾ ಸೇರಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ದೇಶದಲ್ಲಿ ಕರ್ನಾಟಕ ಅವಕಾಶಗಳ ಆಗರವಾಗಿದ್ದು, ಪ್ರತಿ ವರ್ಷ ಸಂಘಟಿತ ವಲಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಕ್ಕೆ ನೋಂದಣಿ ಆಗುತ್ತಿದ್ದಾರೆ. ಇದರ ಜತೆಗೆ, 25,000ಕ್ಕೂ ಹೆಚ್ಚು ವೇತನ ಪಡೆಯುವ ಯುವಕ, ಯುವತಿಯರು ಇದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉದ್ಯೋಗಕ್ಕೆ ಸೇರುತ್ತಿರುವ ಅಂಕಿ-ಅಂಶಗಳು ಸರ್ಕಾರದ ಬಳಿ ಇದೆ ಎಂದು ಹೇಳಿದರು.

ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶ ನೀಡಲು ಜಪಾನ್‌ ಮುಂದೆ ಬಂದಿದ್ದು, ಈ ಬಗ್ಗೆ ಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ ಹಲವು ದೇಶಗಳು ಭಾರತೀಯ ಕೌಶಲ್ಯಾಧಾರಿತ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇಟ್ಟಿವೆ. ಬ್ರಿಟನ್‌ಗೆ 1 ಸಾವಿರ ಶುಶ್ರೂಷಕರನ್ನು ಕಳಿಸುವ ಬಗ್ಗೆಯೂ ಒಪ್ಪಂದ ಆಗಿದೆ ಎಂದು ಮಾಹಿತಿ ನೀಡಿದರು. ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿ‌ನ್‌ ಗೌಡ, ಇಲಾಖೆಯ ಉಪ ಕಾರ್ಯದರ್ಶಿ ಮಾರುತಿ ಪ್ರಸನ್ನ ಇದ್ದರು.

ಟಾಪ್ ನ್ಯೂಸ್

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟಿ ವೆಚ್ಚದ ಆಕ್ಸಿಜನ್‌ ಘಟಕ ಸಿದ್ಧ

ಕೋಟಿ ವೆಚ್ಚದ ಆಕ್ಸಿಜನ್‌ ಘಟಕ ಸಿದ್ಧ

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಕ್ಕೆಸಿಹಿ ಸುದ್ದಿ ಪ್ರಕಟಿಸುವರೇ ಮುಖ್ಯಮಂತ್ರಿ?

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

ಆರ್ಥಿಕ ಬೆಳವಣಿಗೆಗೆ ಎಂಜಿನಿಯರ್‌ ಅವಶ್ಯ

ಆರ್ಥಿಕ ಬೆಳವಣಿಗೆಗೆ ಎಂಜಿನಿಯರ್‌ ಅವಶ್ಯ

ವಿಜ್ಞಾನ-ತಂತ್ರಜ್ಞಾನ ಆಸಕ್ತಿ ಬೆಳೆಸಿಕೊಳ್ಳಿ: ನಳಿನಿ

ವಿಜ್ಞಾನ-ತಂತ್ರಜ್ಞಾನ ಆಸಕ್ತಿ ಬೆಳೆಸಿಕೊಳ್ಳಿ: ನಳಿನಿ

MUST WATCH

udayavani youtube

ಆಡು ಸಾಕಾಣೆಯಿಂದ ಬದುಕು ಕಟ್ಟಿಕೊಂಡ ಪದವೀಧರೆ

udayavani youtube

ಆಟೋ ಚಾಲಕನಿಗೆ ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

udayavani youtube

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

udayavani youtube

ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

udayavani youtube

ಹಿಮಾಲಯ ಮುಳುಗುತ್ತಾ ?

ಹೊಸ ಸೇರ್ಪಡೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.