ಕೊರೊನಾ ಆತಂಕ: ಕಲಬುರಗಿಯಲ್ಲಿ‌‌ ಮತ್ತೆ ನಾಲ್ವರ ಕಫದ ಮಾದರಿ ಪರೀಕ್ಷೆಗೆ ರವಾನೆ

Team Udayavani, Mar 16, 2020, 3:25 PM IST

ಕೊರೊನಾ ಆತಂಕ: ಕಲಬುರಗಿಯಲ್ಲಿ‌‌ ಮತ್ತೆ ನಾಲ್ವರ ಕಫದ ಮಾದರಿ ಪರೀಕ್ಷೆಗೆ ರವಾನೆ

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದ ಮತ್ತೆ ನಾಲ್ವರ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.‌ ನಾಳೆ ಪ್ರಯೋಗಾಲಯದ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ದೇಶಗಳಿಂದ ಜಿಲ್ಲೆಗೆ ಇದುವರೆಗೆ 61 ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಒಬ್ಬರಿಗೆ ಕೊರೊನಾ ಲಕ್ಷಣ ಪತ್ತೆಯಾದ ಕಾರಣ ಮಾದರಿಯ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

ಇಎಸ್ಐನಲ್ಲಿ 8 ಜನ: ಕೊರೊನಾದಿಂದ ಮೃತಪಟ್ಟ 71 ವರ್ಷದ ವ್ಯಕ್ತಿಯ ಕುಟುಂಬದ ಸೋಂಕು ದೃಢಪಟ್ಟ ಮಹಿಳೆ ಹಾಗೂ ನೆಗೆಟಿವ್ ಬಂದ ಮೂವರು ಹಾಗೂ ಈಗ ಲಕ್ಷಣಗಳು ಕಾಣಿಸಿಕೊಂಡ ನಾಲ್ವರು ಸೇರಿದಂತೆ ಒಟ್ಟಾರೆ ಎಂಟು ಜನರನ್ನು ಇಎಸ್ಐ ಆಸ್ಪತ್ರೆಯಲ್ಲಿ ಐಸೋಲೇಟೆಡ್ ವಾರ್ಡ್ ನಲ್ಲಿ‌ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

370 ಜನರ ಮೇಲೆ ನಿಗಾ: ‌ಮುನ್ನೆಚ್ಚರಿಕೆ ಕ್ರಮವಾಗಿ ಮೃತಪಟ್ಟ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿದ್ದ 71 ಜನರು, ಎರಡನೇ ಸಂಪರ್ಕದಲ್ಲಿದ್ದ 238 ಜನರನ್ನು ಗುರುತಿಸಲಾಗಿದೆ. ಜತೆಗೆ ವಿದೇಶಗಳಿಂದ ಬಂದ 61 ಜನರ ಮೇಲೂ‌ ನಿಗಾ ವಹಿಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ 370 ಜನರನ್ನು ಮನೆಗಳಲ್ಲೇ ಇರಿಸಿ ನಿಗಾ ವಹಿಸುವ ಕಾರ್ಯವಾಗುತ್ತಿದೆ ಎಂದು ಮಾಹಿತಿ ನೀಡಿದರು.

3,000 ಮನೆಗಳ ಸರ್ವೆ: ಸೋಂಕಿನಿಂದ ಮೃತಪಟ್ಟ ವ್ಯಕ್ತಿ ವಾಸವಿದ್ದ ಬಡಾವಣೆಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಬಡಾವಣೆ ವ್ಯಾಪ್ತಿಯಲ್ಲಿ ಜನರ ಆತಂಕ ಕಡಿಮೆ ಮಾಡಲು ಮತ್ತು ಎಚ್ಚರಿಕೆ ಕ್ರಮವಾಗಿ 50 ಆರೋಗ್ಯ ತಂಡಗಳನ್ನು ರಚಿಸಿ ಸರ್ವೆ ಮಾಡಿಸಲಾಗಿದೆ. ಒಟ್ಟಾರೆ ಮೂರು ಸಾವಿರ ಮನೆಗಳನ್ನು ಸರ್ವೆ ಮಾಡಲಾಗಿದೆ. ಅಲ್ಲಿ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದರು.

ಟಾಪ್ ನ್ಯೂಸ್

22-death

ಮಾಬುಕಳ ಸೇತುವೆ ಮೇಲೆ ಬೈಕ್‌ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ವೀರ ಸಾವರ್ಕರ್‌ ಚಿತ್ರ ಕಿತ್ತವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ 

ವೀರ ಸಾವರ್ಕರ್‌ ಚಿತ್ರ ಕಿತ್ತವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

20-HDK

ನೆಹರೂ ಭಾವಚಿತ್ರ ಕೈ ಬಿಟ್ಟಿರುವುದು ಸಣ್ಣತನದ ರಾಜಕಾರಣ: ಎಚ್‌.ಡಿ.ಕೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿ: ಅಶೋಕ್‌

19-HDK

ಆರೇಳು ತಿಂಗಳಲ್ಲಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1telkura

650 ಬಸ್‌ಗಳ ಖರೀದಿಗೆ ಸಂಪುಟ ಅಸ್ತು : ತೇಲ್ಕೂರ

3kharge

ಬಿಜೆಪಿಯವರು ನಕಲಿ ದೇಶಭಕ್ತರು: ಪ್ರಿಯಾಂಕ್‌

2bio

ಬಯೋ ಡೀಸೆಲ್‌ ಬಳಕೆಗೆ ಆದ್ಯತೆ ಅಗತ್ಯ

1covid

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ: ಪಾಸಿಟಿವಿಟಿ ದರ 4.09ಕ್ಕೇರಿಕೆ

1-sdsdsadsad

ಹಳಕರ್ಟಿ ಶರೀಫ್ ದರ್ಗಾ ಉರುಸ್‌ಗೆ ಭಕ್ತಸಾಗರ

MUST WATCH

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

ಹೊಸ ಸೇರ್ಪಡೆ

22-death

ಮಾಬುಕಳ ಸೇತುವೆ ಮೇಲೆ ಬೈಕ್‌ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ವೀರ ಸಾವರ್ಕರ್‌ ಚಿತ್ರ ಕಿತ್ತವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ 

ವೀರ ಸಾವರ್ಕರ್‌ ಚಿತ್ರ ಕಿತ್ತವರಿಗೆ ಉಗ್ರ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

20-HDK

ನೆಹರೂ ಭಾವಚಿತ್ರ ಕೈ ಬಿಟ್ಟಿರುವುದು ಸಣ್ಣತನದ ರಾಜಕಾರಣ: ಎಚ್‌.ಡಿ.ಕೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

ಅಮೃತ ಮಹೋತ್ಸವ ಹಿನ್ನೆಲೆ: ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.