ವಾಡಿ: ಗೂಡ್ಸ್ ರೈಲು ಅಪಘಾತ… ತಪ್ಪಿದ ದುರಂತ
Team Udayavani, Jan 14, 2023, 9:08 PM IST
ವಾಡಿ: ಹಳಿ ತುಂಡಾದ ಪರಿಣಾಮ ಸುಮಾರು ಮೂವತ್ತು ಬೋಗಿಗಳುಳ್ಳ ಗೂಡ್ಸ್ ರೈಲು ಅಪಘಾತಕ್ಕೀಡಾದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಶನಿವಾರ ಮಧ್ಯಾಹ್ನ ಹೈದರಾಬಾದ್ ನಿಂದ ವಾಡಿ ಮಾರ್ಗವಾಗಿ ಬರುತ್ತಿದ್ದ ಸಿಮೆಂಟ್ ಸಾಗಾಣಿಕೆ ಗೂಡ್ಸ್ ರೈಲು ಚಿತ್ತಾಪುರ ನಿಲ್ದಾಣ ದಾಟಿದ ಕೆಲವೇ ಹೊತ್ತಿನಲ್ಲಿ ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ. ಘಟನೆಯಿಂದ ಎರಡು ಬೋಗಿಗಳು ಮುಗುಚಿ ಬಿದ್ದಿದ್ದು. ಬೋಗಿಗಳಲ್ಲಿದ್ದ ನೂರಾರು ಟನ್ ತೂಕದ ಸಿಮೆಂಟ್ ಚೀಲಗಳು ಕೆಳಗೆ ಬಿದ್ದಿವೆ. ಘಟನೆಯಲ್ಲಿ ಯಾವೂದೇ ಜೀವ ಹಾನಿ ಸಂಭವಿಸಿಲ್ಲ.
ರೈಲ್ವೆ ಅಧಿಕಾರಿಗಳು ಹಾಗೂ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಂತ್ರಗಳ ಸಹಾಯದಿಂದ ಬೋಗಿಗಳನ್ನು ಎತ್ತುವ ಕಾರ್ಯ ಸಾಗಿದೆ ಎಂದು ವಾಡಿ ರೈಲ್ವೆ ಠಾಣೆಯ ಪಿಎಸ್ಐ ತಿಳಿಸಿದ್ದಾರೆ. ಘಟನೆಯಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ