ಕೋವಿಡ್ ತಡೆಗೆ ಸರ್ಕಾರ ವಿಫಲ

Team Udayavani, Jun 27, 2020, 7:51 AM IST

ಕೋವಿಡ್ ತಡೆಗೆ ಸರ್ಕಾರ ವಿಫಲ

ಚಿತ್ತಾಪುರ: ಮಹಾಮಾರಿ ಕೋವಿಡ್ ಸೋಂಕು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 16.18 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಮೊದಲ ಪ್ರಕರಣ ಕಲಬುರಗಿಯಲ್ಲೇ ಪತ್ತೆಯಾದ ನಂತರ ಜಿಲ್ಲೆಯಲ್ಲಿ ಟೆಸ್ಟಿಂಗ್‌ ಕೇಂದ್ರ ಸ್ಥಾಪನೆಗೆ ಕಾಂಗ್ರೆಸ್‌ ಶಾಸಕರೆಲ್ಲ ಸೇರಿ ಆಗ್ರಹಿಸಿದ್ದೆವು. 24 ಗಂಟೆಯಲ್ಲೆ ಸ್ಥಾಪಿಸುವುದಾಗಿ ಸದನದಲ್ಲಿ ಮುಖ್ಯಮಂತ್ರಿ ಹೇಳಿದ್ದರು.

ಆದರೆ ಭರವಸೆ ನೀಡಿ ಮೂರು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಕಲಬುರಗಿಯಲ್ಲಿ ಜೀಮ್ಸ್‌, ಜಯದೇವ ಹಾಗೂ ಇಎಸ್‌ಐ ಸೇರಿದಂತೆ ಹಲವಾರು ವೈದ್ಯಕೀಯ ಸುಸಜ್ಜಿತ ಸಂಸ್ಥೆಗಳು ಇವೆ. ಆದರೆ ಕನಿಷ್ಠ ಪ್ರಮಾಣದಲ್ಲಿ ಮಾದರಿಗಳ ಟೆಸ್ಟಿಂಗ್‌ ನಡೆಯುತ್ತಿದೆ. ಮನಸ್ಸು ಮಾಡಿದರೆ ದಿನವೊಂದಕ್ಕೆ 700ಕ್ಕೂ ಅಧಿಕ ಟೆಸ್ಟಿಂಗ್‌ ಮಾಡಬಹುದು. ಸರ್ಕಾರದ ನಿರ್ಲಕ್ಷ್ಯತನ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಪಿಸಿಯಿಂದ ಹಿಡಿದು ಡಿಸಿ ವರೆಗೆ ಎಲ್ಲ ಹಂತದಲ್ಲೂ ರೇಟ್‌ ಕಾರ್ಡ್‌ ಫಿಕ್ಸ್‌ ಆಗಿದೆ ಎಂದು ಆರೋಪಿಸಿದರು.

ಪ್ರಿಯಾಂಕ್‌ ಖರ್ಗೆ ಕಂಡರೆ ಬಿಜೆಪಿ ನಾಯಕರಿಗೆ ಅಲರ್ಜಿಯಾಗಿದೆ. ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 228 ಕೋಟಿ ರೂ. ತಡೆ ಹಿಡಿದಿದ್ದಾರೆ. ಆದರೆ ಅವರ ಯಾವ ಪ್ರಯತ್ನಗಳನ್ನು ಯಶಸ್ವಿಯಾಗಲು ಬಿಡೋದಿಲ್ಲ ಎಂದರು. ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಗಲಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ ಸದಸ್ಯ ಶಿವರುದ್ರ ಭೀಣಿ, ತಾ.ಪಂ ಅಧ್ಯಕ್ಷ ಜಗಣ್ಣಗೌಡ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ನಾಲವಾರ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ರಸೂಲ್‌ ಮುಸ್ತಫಾ, ವಿನೋದ್‌ ಗುತ್ತೇದಾರ, ಶೀಲಾ ಕಾಶಿ, ಪಾಶಾ ಖುರೇಶಿ, ಮಲ್ಲಿಕಾರ್ಜುನ ಕಾಳಗಿ, ಗೋಪಾಲ ರಾಠೊಡ, ಸ್ವಪ್ನಾ ಪಾಟೀಲ ಮತ್ತಿತರರು ಇದ್ದರು.

ಬಿಜೆಪಿ ಶಾಸಕರು, ಮಾಜಿ ಶಾಸಕರ ಇಚ್ಛೆ ಹಾಗೂ ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಚಿತ್ತಾಪುರ ತಾಲೂಕಿನ ಹಳ್ಳಿಗಳನ್ನು ಶಹಾಬಾದ ಹಾಗೂ ಕಾಳಗಿಗೆ ಅವೈಜ್ಞಾನಿಕವಾಗಿ ಹಂಚಲಾಗಿದೆ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಆಡಳಿತಾತ್ಮಕವಾಗಿ ಅಭಿವೃದ್ಧಿಗೆ ನನ್ನ ಸಹಮತವಿದೆ. ಜನರ ಸಭೆ ಕರೆದು, ಅವರ ಅಭಿಪ್ರಾಯ ಪಡೆದು ನಿಯಮಗಳ ಪ್ರಕಾರ ಹಳ್ಳಿಗಳನ್ನು ಹಂಚಲಿ.  –ಪ್ರಿಯಾಂಕ್‌ ಖರ್ಗೆ, ಶಾಸಕ

ಟಾಪ್ ನ್ಯೂಸ್

ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಮಧ್ಯಪ್ರದೇಶದ ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

thumb tiranga sale 4

ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ

ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ನಿಷೇಧಾಜ್ಞೆ ನಡುವೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ ಎಚ್ಚರಿಕೆ

ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ: ಈಶ್ವರಪ್ಪ ಎಚ್ಚರಿಕೆ

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್, ಬಸ್ ಭೀಕರ ಅಪಘಾತ; 20 ಮಂದಿ ಸಜೀವ ದಹನ

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್, ಬಸ್ ಭೀಕರ ಅಪಘಾತ; 20 ಮಂದಿ ಸಜೀವ ದಹನ

tdy-2

ವಂದೇ ಮಾತರಂ “ಮ್ಯೂಸಿಕ್‌ ವಿಡಿಯೋ’ಗೆ ಪ್ರಧಾನಿ ಮೆಚ್ಚುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾಡಿ: ಕಳಪೆ ಊಟ ವಸತಿ ಪ್ರಶ್ನಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ವಾಡಿ: ಕಳಪೆ ಊಟ ವಸತಿ ಪ್ರಶ್ನಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಅರಿವಿನ ಮನೆ ಉದ್ಘಾಟನೆ; ಸಕಲ ಕ್ಷೇತ್ರದಲ್ಲೂ ಮುನ್ನುಗ್ಗಿ

ಅರಿವಿನ ಮನೆ ಉದ್ಘಾಟನೆ; ಸಕಲ ಕ್ಷೇತ್ರದಲ್ಲೂ ಮುನ್ನುಗ್ಗಿ

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಜಮೀನು ಭೂಸ್ವಾಧೀನ: ಸಚಿವ ನಿರಾಣಿ

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!

ವಾಡಿ : ಎಸಿಸಿ ಆವರಣದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ!

1telkura

650 ಬಸ್‌ಗಳ ಖರೀದಿಗೆ ಸಂಪುಟ ಅಸ್ತು : ತೇಲ್ಕೂರ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

tdy-4

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ 

6

ತುಪ್ಪರಿಯಿಂದ 10 ಸಾವಿರ ಹೆಕ್ಟೆರ್‌ಗೆ ನೀರಾವರಿ

ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಮಧ್ಯಪ್ರದೇಶದ ಜನವಸತಿ ಪ್ರದೇಶಕ್ಕೆ ಸರ್​ಪ್ರೈಸ್ ವಿಸಿಟ್ ಕೊಟ್ಟ ದೈತ್ಯ ಮೊಸಳೆ : ಕಂಗಾಲಾದ ಜನ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಸುರ್ಜೇವಾಲಾ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮಹತ್ವದ ಸಭೆ

ಸುರ್ಜೇವಾಲಾ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮಹತ್ವದ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.