

Team Udayavani, Apr 16, 2018, 1:03 PM IST
ಕಲಬುರಗಿ: ಮೂರ್ತಿ ಪೂಜೆಗಿಂತ ಮೊದಲು ಮಹಾಪುರುಷರ ಆದರ್ಶ ಪಾಲಿಸುವುದು ಅಗತ್ಯವಾಗಿದೆ ಎಂದು ಎನ್.ವಿ. ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಹೇಮಂತ ಕೊಲ್ಹಾಪೂರ ತಿಳಿಸಿದರು.
ನಗರದ ಎನ್.ವಿ. ಸಂಸ್ಥೆಯ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಂಡಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರರ 127ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾಪುರುಷರನ್ನು ದೇವರು ಎಂದು ತಿಳಿಯದೇ ಅವರ ಗುಣಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕಾದರೆ, ವೈಚಾರಿಕ ಕ್ರಾಂತಿಯಾಗಬೇಕು. ವಿಚಾರಗಳನ್ನು ತಿಳಿ ಹೇಳಲಾಗಿದ್ದರೂ, ಅವುಗಳ ಆಚರಣೆಗಳು ಬಾಕಿ ಉಳಿದಿವೆ ಎಂದರು.
ಉಪಪ್ರಾಚಾರ್ಯ ಡಾ| ಆನಂದತೀರ್ಥ ಕಿತ್ತೂರ, ಪತ್ರಕರ್ತ ಸಂಗಮನಾಥ ಆರ್. ರೇವತಗಾಂವ ಅಂಬೇಡ್ಕರ ಕುರಿತು ಮಾತನಾಡಿದರು. ಸರ್ಕಾರಿ ಪದವಿ ಕಾಲೇಜನ ಇತಿಹಾಸ ಪ್ರಾಧ್ಯಾಪಕ ಡಾ| ಸರ್ವೋದಯ ಶಿವಪುತ್ರ ಅತಿಥಿ ಉಪನ್ಯಾಸಕರಾಗಿ ಅಂಬೇಡ್ಕರ್‌ರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಪವನಕುಮಾರ ಹೂಗಾರ ಪ್ರಾರ್ಥಿಸಿದರು. ಡಾ| ದಯಾನಂದ ಶಾಸ್ತ್ರೀ ಸ್ವಾಗತಿಸಿದರು. ಡಾ| ಕಾಶೀನಾಥ ನೂಲಕರ್ ಪರಿಚಯಿಸಿದರು. ಪ್ರೊ| ಉದಯಕುಮಾರ ದೇಶಮುಖ ನಿರೂಪಿಸಿದರು. ಪ್ರೊ| ಯು.ಜಿ. ಸರದೇಶಪಾಂಡೆ ವಂದಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಡಾ| ಕಾಶೀನಾಥ ನೂಲಕರ್ ನಗದು ಬಹುಮಾನ ವಿತರಿಸಿದರು. ಡಾ| ಗುರುರಾಜ ದಂಡಾಪೂರ, ಸುಖೇಶ ದೇಶಮುಖ, ನಾಗರಾಜ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಸೂರ್ಯಕಾಂತ ಸುಜ್ಯಾತ್ ಹಾಗೂ ಇತರರಿದ್ದರು.
Ad
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರಕಾರ ಆದೇಶಕ್ಕೆ ಹೈಕೋರ್ಟ್ ತಡೆ
ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೇಸ್ ರೀತಿ ಮತ್ತೆರಡು ಭೀಭತ್ಸ ಕೃತ್ಯ!
Recruitments: ಅರಣ್ಯ ಇಲಾಖೆಯಲ್ಲಿ 540 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಖಂಡ್ರೆ
Kalaburagi: ಆರ್‌ಎಸ್‌ಎಸ್ ನ ನೂರು ವರ್ಷದ ಇತಿಹಾಸ ಜನರಿಗೆ ತಿಳಿಸಿ: ಸಚಿವ ಪ್ರಿಯಾಂಕ್ ಖರ್ಗೆ
Shocking! ಬುದ್ಧಿಮಾತು ಹೇಳಿದ್ದಕ್ಕೆ ಕೊಡಲಿಯಿಂದ ಹ*ಲ್ಲೆ ನಡೆಸಿ ಅಜ್ಜಿಯನ್ನೇ ಕೊಂ*ದ ಮೊಮ್ಮಗ
ENG vs IND: 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; 4 ವರ್ಷದ ಬಳಿಕ ಮರಳಿದ ಘಾತಕ ವೇಗಿ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
You seem to have an Ad Blocker on.
To continue reading, please turn it off or whitelist Udayavani.