
ಡ್ರಗ್ಸ್ ಮಾರಾಟ ಕಂಡರೆ ಮಾಹಿತಿ ನೀಡಿ: ಶ್ರೀನಿವಾಸುಲು
Team Udayavani, Jun 27, 2021, 3:38 PM IST

ಕಲಬುರಗಿ: ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಗುರಿ ಎಲ್ಲರ ಕರ್ತವ್ಯವಾಗಿದೆ. ಹೀಗಾಗಿ ಎಲ್ಲಿಯಾದರೂ ಗಾಂಜಾ ಹಾಗೂ ಮತ್ತಿತರ ಡ್ರಗ್ಸ್ ಮಾರಾಟ, ಸಾಗಣೆ ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಉಪ ಪೊಲೀಸ್ ಆಯುಕ್ತ ಅಡೂxರು ಶ್ರೀನಿವಾಸುಲು ಹೇಳಿದರು.
ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಗರದ ಜಗತ್ ವೃತ್ತದಲ್ಲಿ ಶನಿವಾರ ಮಾದಕ ದ್ರವ್ಯ ದಾಸರಾಗುವುದರಿಂದ ಸಂಭವಿಸುವ ಆರೋಗ್ಯ ಸಮಸ್ಯೆ, ಆರ್ಥಿಕ ಹಾನಿ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲು ಮತ್ತು ದೃಶ್ಯಗಳು ಮತ್ತು ಗಣ್ಯರ ಸಂದೇಶಗಳ ಸಾರುವ ಎಲ್‌ಇಡಿ ಪರದೆಯ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಮೇಲೆ ಪೋಷಕರು ಸದಾ ನಿಗಾ ಇಟ್ಟಿರಬೇಕು.
ಅದರಲ್ಲೂ ಹದಿಹರೆಯದ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಯುವಕರ ಕಾಳಜಿ ಮಾಡಬೇಕು. ಅವರ ವರ್ತನೆ ಹಾಗೂ ಅವರಲ್ಲಿ ಏನಾದರೂ ಅಸಹಜ ಬದಲಾವಣೆ, ನಡವಳಿಕೆಯಲ್ಲಿ ಸಂಶಯ ಬರುವಂತೆ ಕಂಡು ಬಂದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿರಬೇಕೆಂದು ಕರೆ ನೀಡಿದರು. ಯುವ ಸಮುದಾಯ ಅಲ್ಪತೃಪ್ತಿಗಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಹೀಗಾಗಿ ಮಕ್ಕಳು ನೋಡಿಕೊಂಡು ಅವರನ್ನು ಡ್ರಗ್ಸ್ ಚಟದಿಂದ ವಿಮುಕ್ತಗೊಳಿಸುವಂತೆ ಮಾಡಬೇಕು.
ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಅವರಿಗೆ ಸೂಕ್ತ ಚಿಕಿತ್ಸೆ, ಸಮಾಲೋಚನೆ ಮಾಡುವ ಮೂಲಕ ಮಾದಕ ವ್ಯಸನದಿಂದ ದೂರವಾಗುವಂತೆ ಮಾಡಬಹುದಾಗಿದೆ ಎಂದರು. ಗಾಂಜಾ ಮಾರಾಟ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ವಹಿಸುತ್ತಿದೆ. ಈ ಹಿಂದೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈಗಲೂ ಗಾಂಜಾ ಮಾರಾಟ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಸಾರ್ವಜನಿಕರು ಗಾಂಜಾ ಮಾರಾಟ ಮತ್ತು ಸಾಗಣೆ ಕಂಡು ಬಂದಲ್ಲಿ ಮಾಹಿತಿ ನೀಡಬೇಕು. ಜತೆಗೆ ತುರ್ತು ಸ್ಪಂದನೆ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
“ಬಿ’ ಉಪ ವಿಭಾಗದ ಎಸಿಪಿ ಗಿರೀಶ ಎಸ್.ಬಿ. ಮಾತನಾಡಿ, ಡ್ರಗ್ಸ್ ಸೇವಿಸುವ ಚಟಗಾರರಾಗದಂತೆ ಜನರಿಗೆ ಅರಿವು ಮೂಡಿಸಲು ಧಾರ್ಮಿಕ ನಾಯಕರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಮುಖರ ಸಂದೇಶವಿರುವ ದೃಶ್ಯಗಳನ್ನು ಎಲ್‌ಇಡಿ ಪರದೆ ಮೇಲೆ ತೋರಿಸಲಾಗುತ್ತದೆ. ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಸಂಚರಿಸಿ ಜಾಗೃತಿ ಸಂದೇಶ ತಲುಪಿಸುವ ಪ್ರಯತ್ನ ಇದಾಗಿದೆ ಎಂದರು. “ಎ’ ಉಪ ವಿಭಾಗದ ಎಸಿಪಿ ಅಂಶುಕುಮಾರ, ಸಂಚಾರ ವಿಭಾದ ಎಸಿಪಿ ಸುಧಾ ಆದಿ, ಇನ್‌ಸ್ಪೆಕ್ಟರ್ ಗಳಾದ ಎಸ್.ಆರ್.ನಾಯಕ, ಅಸ್ಲಂಭಾಷಾ, ಕಪಿಲ್ ದೇವ, ಸಂತೋಷ ಎಲ್.ಟಿ. ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
