
ಸತತ ಮಳೆಗೆ ಜಮೀನುಗಳು ಜಲಾವೃತ
Team Udayavani, Jul 21, 2021, 8:13 PM IST

ಶಹಾಬಾದ: ಹೋಬಳಿ ವಲಯದಲ್ಲಿ ಮೂರು ದಿನಗಳಿಂದ ಸುರಿದ ಸತತ ಮಳೆಯಿಂದ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಹಳ್ಳಿಗಳಾದ ಮುತ್ತಗಿ, ರಾವೂರ, ಮಾಲಗತ್ತಿ, ಭಂಕೂರ, ಶಂಕರವಾಡಿ, ಗೋಳಾ, ಹೊನಗುಂಟಾ ವ್ಯಾಪ್ತಿಯ ಹೊಲಗಳಲ್ಲಿ ನೀರು ಜಲಾವೃತಗೊಂಡಿದೆ. ಸುತ್ತಮುತ್ತಲಿನ ತಗ್ಗು ಪ್ರದೇಶದ ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದೆ.
ಹೋಬಳಿ ಸುತ್ತಲಿನ ಬೆಳೆ ಸಂಪೂರ್ಣ ಹಾನಿಗೇಡಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮೂರು ದಿನಗಳಿಂದ ಎಡೆಬಿಡದೇ ಸುರಿದ ಮಳೆಯಿಂದ ಬೆಳೆ ನಾಶವಾಗಿ ರೈತ ಕಣ್ಣೀರು ಸುರಿಸುವಂತಾಗಿದೆ. ಬಿತ್ತನೆ ಆಗದಿರುವ ಹೊಲಗಳಿಗೂ ಮಳೆ ನೀರು ನುಗ್ಗಿ ಬಿತ್ತನೆ ಕಾರ್ಯಕ್ಕೆ ಅಡ್ಡಿವುಂಟು ಮಾಡಿದೆ. ರಸ್ತೆಯ ಪಕ್ಕದ ಬಹುತೇಕ ಹೊಲಗಳಲ್ಲಿ ನೀರು ಜಮಾವಣೆಗೊಂಡು ಹೆಸರು, ತೊಗರಿ, ಉದ್ದು, ಎಳ್ಳು ಬೆಳೆಗಳು ಕೊಳೆಯಲು ಆರಂಭಿಸಿವೆ. ಹೊಲಗಳ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಕಂದಕಗಳು ನಿರ್ಮಾಣವಾಗಿವೆ.
ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಕ್ರಿಮಿನಾಶಕ ಖರೀದಿಸಿದ ರೈತರು ಸಾಲದ ಸೂಳಿಯಲ್ಲಿ ಸಿಲುಕುವಂತಾಗಿದೆ. ಸಂಬಂಧಪಟ್ಟ ಅ ಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
