Agriculture ಮಾಹಿತಿ ರಥಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ


Team Udayavani, Jun 7, 2023, 11:00 AM IST

Agriculture ಮಾಹಿತಿ ರಥಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ

ಕಲಬುರಗಿ: ಪ್ರಸಕ್ತ ಮುಂಗಾರು ಹಂಗಾಮಿನ‌ ಕೃಷಿ‌ ಚಟುವಟಿಕೆ, ತೊಗರಿ ನೆಟೆ ರೋಗ ನಿರ್ವಹಣೆ, ಬಸವನ ಹುಳು ನಿಯಂತ್ರಣ ಸೇರಿದಂತೆ ರೈತ ಬಾಂಧವರಿಗೆ ಹತ್ತಾರು ಮಾಹಿತಿಗಳನ್ನು ಒದಗಿಸುವ ಕೃಷಿ ಇಲಾಖೆಯ “ಕೃಷಿ ಮಾಹಿತಿ ರಥ” ಸಂಚಾರಿ ವಾಹನಗಳಿಗೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ ಈ ಭಾಗದ ಪ್ರಮುಖ ಬೆಳೆ‌ ತೊಗರಿ ನೆಟೆ ರೋಗದಿಂದ ತತ್ತರಿಸಿ ಬಹಳಷ್ಟು ಹಾನಿಯಾಗಿತ್ತು. ಈ ವರ್ಷ ಅದನ್ನು ಮರುಕಳಿಸದಂತೆ ಹೊಸ ತಳಿಯ ಬೀಜ ನೀಡಲಾಗುತ್ತಿದೆ. ಜೊತೆಗೆ ನೆಟೆ ರೋಗ ನಿರ್ವಹಣಾ ಕ್ರಮಗಳು, ಪರ್ಯಾಯ ಬೆಳೆ‌ ಬಿತ್ತನೆಗೆ ಸಲಹೆ, ಬಸವನ ಹುಳು ನಿಯಂತ್ರಣ ಸಂಬಂಧ ರೈತಾಪಿ ವರ್ಗಕ್ಕೆ ಹಳ್ಳಿಗಳಿಗೆ ಹೋಗಿ ಈ ಸಂಚಾರಿ ವಾಹನಗಳು ಮಾಹಿತಿ ನೀಡಲಿವೆ. ರೈತ ಬಾಂಧವರು ಇದರ ಪ್ರಯೋಜನೆ ಪಡೆಯಬೇಕು. ತಾಂತ್ರಿಕ ಮಾಹಿತಿಗೆ ರೈತ ಸಂಪರ್ಕ ಅಧಿಕಾರಿಗಳನ್ನು‌ ಸಂಪರ್ಕಿಸಬೇಕು ಎಂದರು.

ತೊಗರಿ ಟೆಟೆ ರೋಗಕ್ಕೆ ಪರಿಹಾರ:
ಕಳೆದ‌ ವರ್ಷ ಜಿಲ್ಲೆಯಲ್ಲಿ ನೆಟೆ ರೋಗದಿಂದ‌ ಬಹಳಷ್ಡು ತೊಗರಿ ಬೆಳೆ ಹಾನಿಯಾಗಿದ್ದು, ಹಿಂದಿನ ಸರ್ಕಾರ ಪರಿಹಾರ ಮಾತ್ರ ಘೋಷಿಸಿದ್ದು, ಪರಿಹಾರ‌ ನೀಡಿರಲಿಲ್ಲ. ಇದೀಗ ನಮ್ಮ‌ ಸರ್ಕಾರ‌ ಅಸ್ತಿತ್ವಕ್ಕೆ ಬಂದಿದ್ದು, ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ‌ ಚರ್ಚೆ ಮಾಡಲಾಗುತ್ತಿದೆ‌ ಎಂದರು.

ಮಾಹಿತಿ ರಥದ ಸಂಚಾರದ ವಿವರ:
ಕೃಷಿ ಮಾಹಿತಿ ರಥಗಳು ಒಟ್ಟು 14 ಇದ್ದು, ಪ್ರತಿ ತಾಲೂಕಿಗೆ 2 ರಂತೆ ಜಿಲ್ಲೆಯ 32 ಹೋಬಳಿಗಳಲ್ಲಿ ವಾಹನ‌ಗಳು ಸಂಚರಿಸಲಿವೆ. ಈ ರಥಗಳು ಪ್ರತಿ ತಾಲೂಕಿನ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ‌ ಸಂಚರಿಸಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ನೆಟೆ ರೋಗ, ಬಸವನ ಹುಳು ನಿಯಂತ್ರಣ ಮತ್ತು ಹತೋಟಿ ಕ್ರಮದ ಕುರಿತು ಧ್ವನಿವರ್ಧಕ ಮೂಲಕ ಜಿಂಗಲ್ಸ್ ಪ್ರಸಾರದ ಜೊತೆಗೆ ಕರಪತ್ರಗಳನ್ನು ರೈತರಿಗೆ ಹಂಚುವ ಮೂಲಕ ಮಾಹಿತಿ ನೀಡಲಾಗುತ್ತದೆ.

ಇದೇ ಸಂದರ್ಭದಲ್ಲಿ ರೈತರಿಗೆ ದೊರೆಯುವ ಯೋಜನೆಗಳು, ಬೀಜೋಪಚಾರ, ಪಿ.ಎಂ- ಕಿಸಾನ್ ಈ-ಕೆವೈಸಿ, ತೊಗರಿ ನೆಟ ರೋಗ ಹಾಗೂ ಬಸವನ ಹುಳು ನಿಯಂತ್ರಣದ ಕುರಿತು ಕರಪತ್ರಗಳನ್ನು ಸಹ ಸಚಿವರು ಬಿಡುಗಡೆಗೊಳಿಸಿದರು.

ಡಿ.ಸಿ.ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ‌ ಧಂಗಾಪೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕರಾದ ಸೋಮಶೇಖರ ಬಿರಾದಾರ, ಅನುಸೂಯಾ, ಸಹಾಯಕ ನಿರ್ದೇಶಕ‌ ಚಂದ್ರಕಾಂತ ಜೀವಣಗಿ, ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಟಾಪ್ ನ್ಯೂಸ್

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ

Kadaba ಜೈ ಶ್ರೀರಾಮ್‌ ಘೋಷಣೆ: ಇಬ್ಬರ ಬಂಧನ

Brahmavar ಸ್ಕೂಟಿ ಢಿಕ್ಕಿ ಹೊಡೆದು ಪಾದಚಾರಿ ಸಾವು

Brahmavar ಸ್ಕೂಟಿ ಢಿಕ್ಕಿ ಹೊಡೆದು ಪಾದಚಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspended

Kalaburagi;ಅವ್ಯವಹಾರಕ್ಕೆ ಸಂಬಂಧಿಸಿ ಮೂವರು ಇಂಜಿನಿಯರ್ ಗಳ ಅಮಾನತು

8-chincholi

Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ‌ನಡೆಸಿದ ಜಿಲ್ಲಾಧಿಕಾರಿ

4-wadi

Wadi: ಬೀದಿಗೆ ಬಿದ್ದ ರೈಲು ನಿಲ್ದಾಣ ಸಫಾಯಿ ಕಾರ್ಮಿಕರು;

Farmer: ಯುವ ರೈತ ಮೃತ್ಯು… ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಮಡುಗಟ್ಟಿದ ಶೋಕ

Tragedy: ಯುವ ರೈತ ಮೃತ್ಯು… ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಮಡುಗಟ್ಟಿದ ಶೋಕ

371 ಜೆ ಕಲಂ ಜಾರಿಗೆ ಕಲಬುರಗಿಯಲ್ಲಿ ಶೀಘ್ರವೇ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

371 ಜೆ ಕಲಂ ಜಾರಿಗೆ ಕಲಬುರಗಿಯಲ್ಲಿ ಶೀಘ್ರವೇ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

BJP FLAG 1

BJP: ಈ ವಾರವೇ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.