
ಕಾಂಗ್ರೆಸ್ ನಿಂದ ಆಗದ ಕಾರ್ಯ ಡಬಲ್ ಎಂಜಿನ್ ಸರ್ಕಾರದ ಸಾಧ್ಯ: ಪಿ. ರಾಜೀವ್
Team Udayavani, Jan 17, 2023, 12:30 PM IST

ಕಲಬುರಗಿ: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಫೆಬ್ರವರಿ ಅಂತ್ಯಕ್ಕೆ ಸಂಪೂರ್ಣಗೊಳ್ಳಲಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಪಿ. ರಾಜೀವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1650 ತಾಂಡಾಗಳ ಪೈಕಿ ಈಗ 700 ತಾಂಡಾಗಳ ಹಕ್ಕು ಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜ. 19ರಂದು ಪ್ರಧಾನಿ ನರೇಂದ್ರ ಮೋದಿ 51900 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನೀಡುವ ಮುಖಾಂತರ ಚಾಲನೆ ನೀಡುವರು ಎಂದರು.
ಶತ- ಶತಮಾನಗಳಿಂದ ಆಗದಿರುವ ಕಾರ್ಯ ಡಬಲ್ ಎಂಜಿನ್ ಸರ್ಕಾರದಿಂದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದೆ. ಕಾಂಗ್ರೆಸ್ ಪಕ್ಷ ಲಂಬಾಣಿಗರನ್ನು ಮತಬ್ಯಾಂಕ್ ಮಾಡಿಕೊಂಡಿತೇ ಹೊರತು ಈ ಕಾರ್ಯ ಮಾಡಿರಲಿಲ್ಲ. ಆದರೆ ಕಂದಾಯ ಗ್ರಾಮಗಳನ್ನಾಗಿ ಮಾಡಿರುವುದು ದೊಡ್ಡ ಸಾಧನೆಯಾಗಿದ್ದರಿಂದ ಪ್ರಧಾನಿ ಅವರೇ ಹಕ್ಕು ಪತ್ರ ವಿತರಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ವೇಶ್ಯಾವಾಟಿಕೆಗೆ ಜಾಲತಾಣದಲ್ಲಿದ್ದ ಯುವತಿಯ ಫೋಟೋಗಳ ಬಳಕೆ: ಆರು ಮಂದಿ ಬಂಧನ
ತಾಂಡಾಗಳು ಕಂದಾಯ ಗ್ರಾಮವಾಗಲು ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಪೂರಕವಾಯಿತು. ಹೀಗಾಗಿ ದ್ರೋಣ ಮೂಲಕ ಸರ್ವೆ ಮಾಡಲಾಗಿ ಅತ್ಯಂತ ಬೇಗ ಅವಧಿ ಯಲ್ಲಿ ಸರ್ವೆ ಮಾಡಿ ಹಕ್ಕು ಪತ್ರ ಕೊಡಲು ಸಾದ್ಯವಾಗುತ್ತಿದೆ ಎಂದು ರಾಜೀವ್ ವಿವರಣೆ ನೀಡಿದರು.
ಒಂದು ಲಕ್ಷ ಯುವಕರು: ಮೋದಿ ಅವರ ಕಾರ್ಯಕ್ರಮಕ್ಕೆ ಐದು ಸಾವಿರ ಕಾರ್ಯಕರ್ತರು ವಾರದಿಂದ ಶ್ರಮಿಸುತ್ತಿದ್ದಾರೆ. ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಅದಲ್ಲದೇ ಒಂದು ಲಕ್ಷ ಯುವಕರು ಬೈಕ್ ಮೇಲೆ ಪಾಲ್ಗೊಳ್ಳಲಿದ್ದಾರೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಪಾಲ್ಗೊಳ್ಳಲಿದ್ದು, ಪ್ರಧಾನಿ ಅವರನ್ನು ತಮ್ಮ ನೃತ್ಯದ ಮೂಲಕ ಸ್ವಾಗತ ಕೋರುವರು ಎಂದು ತೇಲ್ಕೂರ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ಮುಖಂಡರಾದ ಅಶೋಕ ಬಗಲಿ, ಸಂತೋಷ ಹಾದಿಮನಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
