ಕಲಬುರಗಿಯಲ್ಲೂ”ಪೇ ಸಿಎಂ’ ಪೋಸ್ಟರ್!
Team Udayavani, Nov 15, 2022, 6:00 AM IST
ಕಲಬುರಗಿ: ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ “ಪೇ ಸಿಎಂ’ ಪೋಸ್ಟರ್ ಹಚ್ಚುವ ಮೂಲಕ “ಚಿತ್ತಾಪುರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ನಾಪತ್ತೆ’ ಎನ್ನುವ ಬಿಜೆಪಿ ಕಾರ್ಯಕರ್ತರ ಪೋಸ್ಟರ್ ವಾರ್ಗೆ ತಿರುಗೇಟು ನೀಡಿದ ಘಟನೆ ಜರುಗಿದೆ.
ನಗರದ ಹಲವೆಡೆ “ಪೇಸಿಎಂ’ ಪೋಸ್ಟರ್ಗಳನ್ನು ಹಚ್ಚಿದ್ದಲ್ಲದೆ, ಆ ಪೋಸ್ಟರ್ ಅನ್ನು ಪಕ್ಷದ ಕಾರ್ಯಕರ್ತರೇ ಬಗ್ಗಿ ಬಗ್ಗಿ ನೋಡುವ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ನಗರದ ಟ್ಯಾಂಕ್ ಬಂಡ್ ರಸ್ತೆ, ಸಂಗಮೇಶ್ವರ ಕಾಲೋನಿ ಸೇರಿದಂತೆ ವಿವಿಧೆಡೆ ಅದರಲ್ಲೂ ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಚರಿಸಿದ ರಸ್ತೆಗಳಲ್ಲಿ ಈ ಪೋಸ್ಟರ್ಗಳನ್ನು ಹಚ್ಚುವ ಮೂಲಕ ಅವರಿಗೆ ಮುಖಭಂಗ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಗೊತ್ತಾಗಿದೆ.