
ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ
Team Udayavani, Nov 26, 2022, 2:20 PM IST

ವಾಡಿ: ಐದು ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣ ಸಮೀಪದ ತಾಂಡಾವೊಂದರಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ಗ್ರಾಮದ ಹೊರ ವಲಯದ ಜಮೀನಿನಲ್ಲಿ ತಾಯಿಯೊಂದಿಗೆ ಕೃಷಿ ಕೆಲಸಕ್ಕೆ ಬಾಲಕಿ ಹೋಗಿದ್ದಳು ಎನ್ನಲಾಗಿದ್ದು, ನಿರ್ಜನ ಪ್ರದೇಶದ ಸದ್ಬಳಕೆಗೆ ಮುಂದಾದ ಅದೇ ತಾಂಡಾದ ಆರೋಪಿ ಕುಮಾರ ತಾನು ಜಾಧವ ಎನ್ನುವವ ಚಾಕಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ತೊಗರಿ ಹೊಲದೊಳಗೆ ಕರೆದೊಯ್ದಿದ್ದಾನೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಮುಂದಾದಾಗ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಪರಿಣಾಮ ಅಕ್ಕಪಕ್ಕದ ಹೊಲದಲ್ಲಿ ಕಾಯಕ ನಿರತ ಕೃಷಿಕರು ಹಾಗೂ ಸಮೀಪದಲ್ಲಿದ್ದ ಬಾಲಕಿಯ ತಾಯಿ ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಸ್ಥಳದಲ್ಲೇ ಥಳಿಸಿದ ಘಟನೆ ನಡೆದಿದೆ. ಕಾರ್ಮಿಕ ಸಂಘಟನೆಯ ಮುಖಂಡರು ಸಂತ್ರಸ್ತೆ ಬಾಲಕಿಯ ಕುಟುಂಬದ ಬೆಂಬಲಕ್ಕೆ ನಿಂತಿದ್ದು, ಪ್ರಕರಣ ವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಡಿವೈಎಸ್ಪಿ ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ, ಪಿಎಸ್ ಐ ಮಹಾಂತೇಶ ಪಾಟೀಲ ವಿಚಾರಣೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುರುಗೋಡು: 16 ಕೋಟಿ ವೆಚ್ಚದಲ್ಲಿ ಎಮ್ಮಿಗನೂರು 110 ಕೆ.ವಿ ಕಾಮಗಾರಿಗೆ ಚಾಲನೆ

ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ: ಕುಮಾರಸ್ವಾಮಿ ಸವಾಲು

ಪಿಎಫ್ಐ: ಅಹವಾಲು ಸ್ವೀಕರಿಸಲು ಯುಎಪಿಎ ನ್ಯಾಯಾಧಿಕರಣ

76 ಕ್ಷೇತ್ರಗಳೇ ನಿರ್ಣಾಯಕ: ತಲೆಬಿಸಿ ಹೆಚ್ಚಿಸಿದೆ ಗುಪ್ತಚರ ದಳದ ವರದಿ

ಕಿತ್ತೂರು, ಕಲ್ಯಾಣ, ಕರಾವಳಿ ಮಂತ್ರ: ಸಾಂಪ್ರದಾಯಿಕ ಮತದಾರರತ್ತ ಬಿಜೆಪಿ ನೋಟ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್

ವಂದೇ ಭಾರತ್ ರೈಲಿನೊಳಗೆ ಕಸದ ರಾಶಿ: ಫೋಟೋ ವೈರಲ್

ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ