Udayavni Special

ರೈತರ ಮಕ್ಕಳ ಕೋಟಾ ಸೀಟಿಗೆ ಪರೀಕ್ಷೆ


Team Udayavani, Jun 18, 2021, 6:51 PM IST

Test for quota

ಕಲಬುರಗಿ: ಮಹತ್ವದ ಇಂಜಿನಿಯರಿಂಗ್‌, ಬಿಎಸ್ಸಿ ಕೃಷಿ (ಕೃಷಿ ವಿಜ್ಞಾನ)ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಿಇಟಿಪರೀಕ್ಷೆ ಗೊಂದಲದ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಸೇರಿ ಇತರ ಕೋರ್ಸುಗಳಲ್ಲಿ ರೈತರ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಸೀಟುಗಳಿಗೆ ಪರೀಕ್ಷೆ ನಡೆಸಲು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿಗೆ ಮುಂಚೆರೈತರ ಮಕ್ಕಳ ಕೋಟಾದಡಿ ಸೀಟುಗಳಿಗೆ ಈ ಹಿಂದಿನಿಂದಲೂ ಪರೀಕ್ಷೆ ನಡೆಸಿ, ಈ ಫ‌ಲಿತಾಂಶದೊಂದಿಗೆ ಸಿಇಟಿ ಫ‌ಲಿತಾಂಶಆಧರಿಸಿ ರ್‍ಯಾಂಕ್‌ ಪ್ರಕಟಿಸುತ್ತಾ ಬರಲಾಗುತ್ತಿದೆ.ಆದರೆ ಕಳೆದ ವರ್ಷ ಈ ಪರೀಕ್ಷೆಯನ್ನೇರದ್ದುಪಡಿಸಲಾಗಿತ್ತು.

ಪ್ರಸಕ್ತ ವರ್ಷ ಪರೀಕ್ಷೆ ನಡೆಸುವುದನ್ನು ಚಾಲ್ತಿಗೆ ತರಲಾಗಿದೆ.ಬಿಎಸ್ಸಿ ಕೃಷಿ, ಪಶು ಸಂಗೋಪನಾಹಾಗೂ ತೋಟಗಾರಿಕಾ ಪದವಿಗಳಪ್ರವೇಶಾತಿಯಲ್ಲಿ ಶೇ. 25ರಷ್ಟು ಸಿಇಟಿ ಅಂಕ,ಶೇ. 25ರಷ್ಟು ಪಿಯುಸಿಯಲ್ಲಿನ ವಿಷಯಗಳ ಥೇರಿಅಂಕಗಳನ್ನು ಪರಿಗಣಿಸಿದರೆ ಇನ್ನುಳಿದ ಶೇ. 50ರಷ್ಟು ಅಂಕಗಳನ್ನುರೈತರ ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ(ಪ್ರಾಯೋಗಿಕ) ಪರೀಕ್ಷೆ ನಡೆಸಿ ಅಂಕಗಳನ್ನು ನಿಗದಿ ಮಾಡಲಾಗುತ್ತದೆ.ಆದರೆ ಕಳೆದ ವರ್ಷ ಮಾತ್ರ ರೈತರ ಮಕ್ಕಳ ಕೋಟಾ ಪರೀಕ್ಷೆಯನ್ನೇರದ್ದು ಮಾಡಲಾಗಿತ್ತು. ಕೊವಿಡ್‌-19 ಹಿನ್ನೆಲೆಯಲ್ಲಿ ಪ್ರಾಯೋಗಿಕಪರೀಕ್ಷೆಯನ್ನೇ ನಡೆಸಿರಲಿಲ್ಲ.

ಪರೀಕ್ಷೆ ರದ್ದಾದ ಕುರಿತು ಕಳೆದ2020ರ ಆಗಸ್ಟ್‌ 21ರಂದು “ಉದಯವಾಣಿ’ಯಲ್ಲಿ ವಿಶೇಷ ವರದಿಪ್ರಕಟಿಸಲಾಗಿತ್ತು. ಪರೀಕ್ಷೆ ರದ್ದಾಗಿರುವುದಕ್ಕೆ ರೈತ ವಲಯದಿಂದ ತೀವ್ರಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ವರ್ಷದಿಂದ ಮತ್ತೆ ಪರೀಕ್ಷೆ ಜಾರಿಗೆತರಲಾಗಿದೆ.ರೈತರ ಮಕ್ಕಳು ನಗರ ಪ್ರದೇಶದಲ್ಲಿ ಓದುತ್ತಿದ್ದಾರೆ. ಆದರೆ ಗ್ರಾಮೀಣಭಾಗದಲ್ಲಿದ್ದುಕೊಂಡು ಪಿಯುಸಿಯಲ್ಲಿ ಉತ್ತಮ ಫ‌ಲಿತಾಂಶಪಡೆದಿರುವ ಮಕ್ಕಳು ವಿವಿಗಳು ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿಕೃಷಿ ಉಪಕರಣಗಳು, ರಸಗೊಬ್ಬರ ಸೇರಿ ಕೃಷಿಗೆ ಸಂಬಂಧಿಸಿದಂತೆ ಎಲ್ಲಮಾಹಿತಿಯನ್ನು ಸರಳವಾಗಿ ಹೇಳುತ್ತಾರೆ. ಆದರೆ ನಗರದಲ್ಲಿದ್ದುಕೊಂಡುಓದಿದ ಮಕ್ಕಳಿಗೆ ಕಷ್ಟವಾಗುತ್ತದೆ.

ರೈತರ ಮಕ್ಕಳಿಗೆ ಅನುಕೂಲವಾಗಲೆಂದೇನಿಯಮ ಹಾಗೂ ಕಾನೂನು ಜಾರಿಗೆ ತರಲಾಗಿದೆ. ಆದರೆ ಕಳೆದ ವರ್ಷಅನೇಕ ಕಾರಣಗಳನ್ನು ನೀಡಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಈ ವರ್ಷಸಿಇಟಿ ನಡೆಸುವ ಮುಂಚೆಯೇ ರೈತರ ಮಕ್ಕಳ ಕೋಟಾದಡಿ ಪರೀಕ್ಷೆನಡೆಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯಾದ್ಯಂತ ರೈತ ಮಕ್ಕಳಿಗೆ ಸುಮಾರು ಮೂರು ಸಾವಿರ ಬಿಎಸ್ಸಿ ಕೃಷಿ, ಪಶು ಹಾಗೂ ತೋಟಗಾರಿಕಾಪದವಿಗಳ ಸೀಟುಗಳು ಸಿಗಲಿವೆ.ಕಳೆದ ವರ್ಷ ರದ್ದಾದ ಮಕ್ಕಳ ಕೋಟಾದ ಸೀಟುಗಳಿಗೆ ಈ ವರ್ಷಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ರೈತರು ಹಾಗೂ ಬಿಎಸ್ಸಿ ಕೃಷಿ,ಪಶು ಸಂಗೋಪನಾ ಹಾಗೂ ತೋಟಗಾರಿಕೆ ಪದವಿ ಪ್ರವೇಶಾತಿಬಯಸಿರುವ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

DK

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಜತೆ ಡಿಕೆಶಿ ಚರ್ಚೆ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ftt

ಕೋವಿಡ್ : ರಾಜ್ಯದಲ್ಲಿಂದು 1785 ಹೊಸ ಪ್ರಕರಣ ಪತ್ತೆ, 25 ಜನರ ಸಾವು

5-13

ಮಣ್ಣು ಮುಕ್ಕಿದ ಮುಂಗಾರು ಬೆಳೆ!

centre-sending-vaccines-to-bjp-states-bengal-deprived-mamata-banerjee-shoots-letter-to-pm-modi

ಕೇಂದ್ರ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಲಸಿಕೆಯನ್ನು ಪೂರೈಸುತ್ತಿದೆ : ದೀದಿ

DK-SURESH

ಜಮೀರ್ ಅವರ ಮೇಲಿನ ಇ.ಡಿ. ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ. ಸುರೇಶ್

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸಾರ್ವಕಾಲಿಕ 54,717ಕ್ಕೆ ಏರಿಕೆ, ನಿಫ್ಟಿ ಜಿಗಿತ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸಾರ್ವಕಾಲಿಕ 54,717ಕ್ಕೆ ಏರಿಕೆ, ನಿಫ್ಟಿ ಜಿಗಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Socialist-Unity

ಸಮಾಜದ ಮುನ್ನೆಡೆಗೆ ಮಾರ್ಕ್ಸ್ ವಾದ ಚಿಂತನೆ ಅತ್ಯಗತ್ಯ: ಎಸ್‌ಯುಸಿಐ

5-13

ಮಣ್ಣು ಮುಕ್ಕಿದ ಮುಂಗಾರು ಬೆಳೆ!

Rain-Water

ಹೂಡದಳ್ಳಿ ಕೆರೆ ಒಡ್ಡು ಒಡೆದು ವರ್ಷವಾಯ್ತು

ಹೂಡದಳ್ಳಿ ಕೆರೆ ಒಡ್ಡು ಒಡೆದು ವರ್ಷವಾಯ್ತು

ಹೂಡದಳ್ಳಿ ಕೆರೆ ಒಡ್ಡು ಒಡೆದು ವರ್ಷವಾಯ್ತು

ಶ್ರೀರಾಮನ ವನವಾಸ ನೆನಪಿಸಿದ ವ್ರತ; ಗೋಣಿಚೀಲ ತೊಟ್ಟು 11 ದಿನ ಪಾದಯಾತ್ರೆ

ಶ್ರೀರಾಮನ ವನವಾಸ ನೆನಪಿಸಿದ ವ್ರತ; ಗೋಣಿಚೀಲ ತೊಟ್ಟು 11 ದಿನ ಪಾದಯಾತ್ರೆ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

Socialist-Unity

ಸಮಾಜದ ಮುನ್ನೆಡೆಗೆ ಮಾರ್ಕ್ಸ್ ವಾದ ಚಿಂತನೆ ಅತ್ಯಗತ್ಯ: ಎಸ್‌ಯುಸಿಐ

DK

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಜತೆ ಡಿಕೆಶಿ ಚರ್ಚೆ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ಮಂಗಳೂರು ವಿವಿ ಬಾಕಿ ಪರೀಕ್ಷೆಗಳನ್ನು ಮುಂದುವರೆಸಿ : ಜಿಲ್ಲಾಧಿಕಾರಿ

ftt

ಕೋವಿಡ್ : ರಾಜ್ಯದಲ್ಲಿಂದು 1785 ಹೊಸ ಪ್ರಕರಣ ಪತ್ತೆ, 25 ಜನರ ಸಾವು

development-work

ಪುನರ್ ವಸತಿ ಜಾಗದ ಪ್ರಕರಣ: ಅಭಿವೃದ್ಧಿ ಕಾರ್ಯ ಪ್ರಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.