ಪೊಲೀಸರ ನಿದ್ದೆಗೆಡಿಸಿರುವ ಘಂಟೆ ಕಳ್ಳರು: ತನಿಖೆ ಚುರುಕು
Team Udayavani, Oct 29, 2022, 6:36 PM IST
ಮಡಿಕೇರಿ: ಕೊಡಗಿನ ವಿವಿಧ ದೇವಾಲಯಗಳಲ್ಲಿ ಘಂಟೆಗಳನ್ನು ಕಳ್ಳತನ ಮಾಡುವ ಮೂಲಕ ಘಂಟೆ ಕಳ್ಳರು ಪೊಲೀಸರ ನಿದ್ದೆಗೆಡಿಸಿದ್ದಾರೆ. ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀಭದ್ರಕಾಳಿ ದೇವಸ್ಥಾನದ ಹತ್ತು ಘಂಟೆಗಳನ್ನು ಕದ್ದೊಯ್ಯಲಾಗಿದ್ದು, ಚೋರರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಗುರುವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಘಂಟೆಗಳನ್ನು ಕಳವು ಮಾಡಿದ್ದಾರೆ. ಸಿ.ಸಿ. ಕ್ಯಾಮರ ವಯರ್ ಕತ್ತರಿಸಿ, ಗಂಟೆಗಳನ್ನು ಕಳವು ಮಾಡಿದ್ದಾರೆ. ಬೆಳಗ್ಗೆ ಊರಿನವರು ಪೂಜೆಗೆಂದು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನದಲ್ಲಿದ್ದ ಸಿ.ಸಿ ಕ್ಯಾಮರ ಪರಿಶೀಲಿಸಿದಾಗ, ಇಬ್ಬರು ಕಳ್ಳರು ಒಳನುಗ್ಗಿ ಕಳ್ಳತನ ಮಾಡಿರುವುದು ಗೋಚರಿಸಿದೆ.
ಪೊನ್ನಂಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಂಟೆ ಕಳವಿನ ಮೂರನೇ ಪ್ರಕರಣ ಇದಾಗಿದೆ.
ನಂತರ ಸಿ.ಸಿ ಕ್ಯಾಮರದ ವಯರ್ ತುಂಡರಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಘಂಟೆ ಕಳವು ಪ್ರಕರಣಗಳು ನಡೆದಿದೆ.
ಬೆಸಗೂರುವಿನಲ್ಲಿ ಎರಡು ದೇವಸ್ಥಾನ ಹಾಗೂ ಪೊನ್ನಪ್ಪಸಂತೆಯಲ್ಲಿ ಒಂದು ದೇವಸ್ಥಾನದ ಘಂಟೆ ಕಳವು ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ನಾಗೇಶ್ ಖದ್ರಿ ಸೇರಿದಂತೆ ಸಿಬ್ಬಂದಿಗಳು, ಬೆರಳಚ್ಚು ತಜ್ಞರು, ಗೋಣಿಕೊಪ್ಪ ವೃತನಿರೀಕ್ಷಕ ಗೋವಿಂದರಾಜು, ಪೊನ್ನಂಪೇಟೆ ಠಾಣಾಧಿಕಾರಿ ಸುಬ್ರಹ್ಮಣಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?
ಸಬ್‌ರಿಜಿಸ್ಟ್ರಾರ್ ಕಚೇರಿಗಳು ಇನ್ನು ಸ್ಮಾರ್ಟ್
ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ