ಡೀಸೆಲ್‌ಗೆ ಹಣವಿಲ್ಲ; ರೋಗಿಗಳಿಗೆ ಲಭ್ಯವಾಗದ ಆ್ಯಂಬುಲೆನ್ಸ್ ಸೇವೆ
Team Udayavani, Jan 9, 2022, 8:15 AM IST
ಸಾಂದರ್ಭಿಕ ಚಿತ್ರ.
ಮಡಿಕೇರಿ: ಶನಿವಾರಸಂತೆ ಆಸ್ಪತ್ರೆಯ ಆ್ಯಂಬುಲೆನ್ಸ್‌ಗೆ ಡೀಸೆಲ್ ಹಾಕಲು ಹಣವಿಲ್ಲದ ಕಾರಣ ಕಳೆದ ಮೂರು ತಿಂಗಳಿಂದ ರೋಗಿಗಳ ಸೇವೆಗೆ ಲಭ್ಯವಾಗಿಲ್ಲ.
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಆ್ಯಂಬುಲೆನ್ಸ್ ಲಭ್ಯವಾಗದೆ ಇದೀಗ ಮೂರು ತಿಂಗಳೇ ಕಳೆದಿದೆ. ಕಾರಣ ಕೇಳಿದರೆ ಡೀಸೆಲ್‌ಗೆ ಅನುದಾನವಿಲ್ಲ ಎನ್ನುವ ಉತ್ತರ ವೈದ್ಯಾಧಿಕಾರಿಗಳಿಂದ ಕೇಳಿ ಬರುತ್ತಿದೆ. ಒಂದು ತಿಂಗಳ ಹಿಂದೆ ರಾಮನಹಳ್ಳಿಯ ವ್ಯಕ್ತಿಯೊಬ್ಬರಿಗೆ ಗೋಪಾಲಪುರದಲ್ಲಿ ಅಪಘಾತವಾಗಿ ಚಿಕಿತ್ಸೆಗಾಗಿ ಶನಿವಾರಸಂತೆ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರಾದರೂ ಆ್ಯಂಬುಲೆನ್ಸ್ ಸಿಗದೇ ಪರದಾಡ ಬೇಕಾಯಿತು.
ಇದನ್ನೂ ಓದಿ:ಕೋವಿಡ್ ಎರಡು ಅಲೆಯಲ್ಲಿ ಪಾಠ ಕಲಿತಿದ್ದೇವೆ: ಡಾ. ಕೆ. ಸುಧಾಕರ್
ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೊಸ ಆ್ಯಂಬುಲೆನ್ಸ್ ವ್ಯವಸೆœ ಮಾಡಲಾಗಿತ್ತು. ಆದರೆ ಡೀಸೆಲ್‌ಗೆ ಅನುದಾನ ಸಿಕ್ಕದ ಕಾರಣ ರೋಗಿಗಳಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.