
ಕಾಸರಗೋಡು: ಜಿಬಿಜಿ ನಿಧಿ ಕಂಪೆನಿ ಹೆಸರಿನಲ್ಲಿ 12 ಲಕ್ಷ ರೂ. ವಂಚನೆ
Team Udayavani, Jan 19, 2023, 1:02 AM IST

ಕಾಸರಗೋಡು: ಕುಂಡಂಕುಳಿಯನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಜಿಬಿಜಿ (ಗ್ಲೋಬಲ್ ಬಿಸಿನೆಸ್ ಗ್ರೂಪ್) ನಿಧಿ ಎಂಬ ಕಂಪೆನಿಯ ಹೆಸರಿನಲ್ಲಿ ನಡೆದ ಕೋಟ್ಯಂತರ ರೂ. ಠೇವಣಿ ವಂಚನೆ ಸಂಬಂಧ ತೀವ್ರ ತನಿಖೆ ನಡೆಯುತ್ತಿದೆ.
ಕಣ್ಣೂರು ಜಿಲ್ಲೆಯ ಆಲಪಡಂಬ್ ಮಾತಿಲ್‌ನ ಸಿಜಿ ಚಾಕೋ ಅವರು ಬೇಡಗಂ ಠಾಣೆಗೆ ವಂಚನೆ ಸಂಬಂಧ ದೂರು ನೀಡಿದ್ದು, 12 ಲಕ್ಷ ರೂ. ಠೇವಣಿಯಿರಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಂಚನೆ ಸಂಬಂಧ ಒಟ್ಟು 19 ಕೇಸುಗಳನ್ನು ದಾಖಲಿಸಲಾಗಿದೆ.
ಬಂಧಿತ ಆರೋಪಿಗಳಾದ ಡಿ. ವಿನೋದ್ ಕುಮಾರ್ (51) ಮತ್ತು ಪಿ. ಗಂಗಾಧರನ್ ನಾಯರ್ (67) ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಟಾಪ್ ನ್ಯೂಸ್
